Advertisement

ಸುತ್ತೂರು ಮಠದ ಕಾರ್ಯ ಸ್ತುತ್ಯಾರ್ಹ

06:25 AM Jan 15, 2018 | |

ಮೈಸೂರು: ಭಾರತದಲ್ಲಿ ಮದುವೆಗೆ ಅನಗತ್ಯ ಖರ್ಚು ಮಾಡಿ, ಅದಕ್ಕಾಗಿ ಸಾಲ ಮಾಡಿಕೊಂಡು,ಜೀವನಪೂರ್ತಿ ಹೆಣಗುತ್ತಾರೆಂಬ ಮಾತು ಕೇಳಿದ್ದೇನೆ.

Advertisement

ಆದರೆ, ಸುತ್ತೂರು ಮಠ ಸಾಮೂಹಿಕ ವಿವಾಹದ ಮೂಲಕ ಖರ್ಚಿಲ್ಲದೆ ಮದುವೆ ಮಾಡಿಸುತ್ತಿರುವುದು ಸ್ತುತ್ಯಾರ್ಹ ಎಂದು ಮಾರಿಷಸ್‌ ಗಣರಾಜ್ಯದ ಉಪ ರಾಷ್ಟ್ರಪತಿ ಪರಮಶಿವುಂ ಪಿಳ್ಳೆ„ ವ್ಯಾಪೂರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಅಂಗವಾಗಿ ಸುತ್ತೂರು ಕ್ಷೇತ್ರದಲ್ಲಿ ಭಾನುವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಏಕಕಾಲಕ್ಕೆ 145 ಜೋಡಿಗಳ ಸಾಮೂಹಿಕ ವಿವಾಹವಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ತಮಗೆ ಸಂತಸ ತಂದಿದೆ. ಸಾಮೂಹಿಕ ವಿವಾಹದ ಮೂಲಕ ಸಾಮಾಜಿಕ ಪ್ರಜ್ಞೆ ಇರುವ ಪ್ರಜೆಗಳನ್ನು ಸಮಾಜಕ್ಕೆ ಕೊಡುತ್ತಿರುವ ಸುತ್ತೂರು ಮಠದ ಈ ಸೇವೆ ಅತಿದೊಡ್ಡ ಸಾಮಾಜಿಕ ಕಾರ್ಯ. ಮಠದ ವತಿಯಿಂದಲೆ ಚಿನ್ನದ ತಾಳಿ, ಬೆಳ್ಳಿ ಕಾಲುಂಗುರ, ಬಟ್ಟೆಯನ್ನು ಕೊಟ್ಟು ಮದುವೆ ಮಾಡಿಕೊಡುತ್ತಿರುವುದರಿಂದ ಮದುವೆಗಾಗಿ ಕೂಡಿಟ್ಟ ಹಣವನ್ನು ನಿಮ್ಮ ಮುಂದಿನ ಜೀವನವನ್ನು ಕಟ್ಟಿಕೊಳ್ಳಲು ಬಳಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು.

ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರು ಸಾಮೂಹಿಕ ವಿವಾಹದಲ್ಲಿ ಗಂಡು-ಹೆಣ್ಣಿಗೆ ಪ್ರತಿಜಾnವಿಧಿ ಬೋಧಿಸಿದರು. ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಸುಕ್ಷೇತ್ರ ಹಾರಕೂಡ
ಚನ್ನಬಸವೇಶ್ವರ ಮಠದ ಚನ್ನವೀರ ಶಿವಾಚಾರ್ಯ ಸ್ವಾಮಿಗಳು, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮಿಗಳು ಆಶೀರ್ವಚನ ನೀಡಿದರು.

ದಾಂಪತ್ಯಕ್ಕೆ ಕಾಲಿಟ್ಟ 145 ಜೋಡಿ: ಸುತ್ತೂರು ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕಳೆದ 18 ವರ್ಷಗಳಿಂದ ಸಾಮೂಹಿಕ ವಿವಾಹ ನಡೆಸಿಕೊಂಡು ಬರಲಾಗುತ್ತಿದೆ. ಈವರೆಗೆ 2,464ಕ್ಕೂ ಹೆಚ್ಚು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

Advertisement

ಧರ್ಮ ಮತ್ತು ಜಾತಿಭೇದವಿಲ್ಲದೆ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ. ವಿವಾಹದ ಸಂದರ್ಭದಲ್ಲಿ ವರನಿಗೆ ಪಂಚೆ, ಶರ್ಟು, ವಲ್ಲಿ ಹಾಗೂ ವಧುವಿಗೆ ಸೀರೆ, ರವಿಕೆ, ಮಾಂಗಲ್ಯ, ಬೆಳ್ಳಿ ಕಾಲುಂಗುರಗಳನ್ನು ನೀಡಲಾಗುತ್ತದೆ. ಭಾನುವಾರ ನಡೆದ ಸಾಮೂಹಿಕ ವಿವಾಹದಲ್ಲಿ ವೀರಶೈವ/ಲಿಂಗಾಯತ-06, ಹಿಂದುಳಿದ ವರ್ಗ-29, ಪರಿಶಿಷ್ಟ ಜಾತಿ-84, ಪರಿಶಿಷ್ಟ 08, ಅಂತರ ಜಾತಿ-12, ಅಂಗವಿಕಲರು-03, ವಿಧುರ-ವಿಧವೆ-03 ಹಾಗೂ ತಮಿಳುನಾಡಿನ ಐದು ಜೋಡಿಗಳು ಸೇರಿ ಒಟ್ಟಾರೆ 145 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಇಂದು ರಥೋತ್ಸವ, ನೂತನ ರಥ ಸಿದಟಛಿ: ಸೋಮವಾರ ನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿ ಆದಿ ಜಗದ್ಗುರುಗಳ ರಥಾರೋಹಣಕ್ಕೆ ನೂತನ ರಥ ಸಿದ್ಧವಾಗಿದೆ. 55 ಅಡಿ ಎತ್ತರ, 40 ಟನ್‌ ಭಾರದ ಈ ನೂತನ ರಥದಲ್ಲಿ ಆದಿ ಜಗದ್ಗುರುಗಳ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದೆ. ಸಾವಿರಾರು ಸಂಖ್ಯೆಯ ಭಕ್ತರು ಭಾಗಿಯಾಗುವ ನಿರೀಕ್ಷೆಯಿದೆ.

ಹುಲಿ ಸಫಾರಿಯಲ್ಲಿ ಭಾಗಿ
ಗುಂಡ್ಲುಪೇಟೆ:
ಭಾನುವಾರ ಸಂಜೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಮಾರಿಷಸ್‌
ಗಣರಾಜ್ಯದ ಉಪ ರಾಷ್ಟ್ರಪತಿ ಭೇಟಿ ನೀಡಿ ಸಫಾರಿಯಲ್ಲಿ ಪಾಲ್ಗೊಂಡರು. ಹುಲಿ ಯೋಜನೆ ನಿರ್ದೇಶಕರ ಕಚೇರಿಗೆ 
ಭೇಟಿ ನೀಡಿ, ನಂತರ ಸಫಾರಿ ಜೀಪ್‌ನಲ್ಲಿ ಪರಮಶಿವುಂ ಪಿಳ್ಳೆ„ ಮತ್ತು ಅವರ ಕಚೇರಿಯ ಸಿಬ್ಬಂದಿಗಳು ಸಫಾರಿಯಲ್ಲಿ ಪಾಲ್ಗೊಂಡರು. ಬಳಿಕ, ಊಟಿಗೆ ಪ್ರಯಾಣ ಬೆಳೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next