Advertisement

ಮೌನಿಯಾದೆ ನಾ…

10:34 PM Nov 24, 2019 | Sriram |

ಮುಂಜಾವಿನ ಸೋಗು ಕಣ್ಮನ ಸೆಳೆಯುತ್ತಾ, ಭಾವನೆಗಳ ಜತೆಗೂಡಿ ನೆನಪುಗಳ ಸಾಲು ಒಂದೊಂದಾಗಿ ಬರುತಿರಲು ಮೌನವೊಂದೇ ಸಹಪಾಠಿ. ಪ್ರತಿಯೊಬ್ಬರ ಸುಂದರ ಪಯಣದಿ ಎಂದಿಗೂ ಜತೆಗಿರುವ ಮನದಾಳದ ಸಂಗಾತಿಯೂ ಹೌದು. ಮೌನ ಎಂದಾಕ್ಷಣ ಅಲ್ಲಿ ಹುದುಗಿರುವ ಸಾವಿರಾರು ಯೋಚನೆ, ಆಲೋಚನೆಗಳಿಗೆ ಅದೊಂದೇ ಕಣಿವೆಯಾಗಿ ನಮ್ಮನ್ನು ಇನ್ನೊಂದೆಡೆ ಬದುಕಲು ಪ್ರೇರೇಪಿಸುತ್ತಾ, ಸುಂದರ ಬದುಕಿನ ಪಯಣಕ್ಕೆ ಕರೆದೊಯ್ಯುತ್ತದೆ.

Advertisement

ನೀನಿರಲು ಸನಿಹ ಬೇರೇನು ಬೇಡ , ಕೆಲವೊಮ್ಮೆ ಇದೇ ಮೌನ ಆತಂಕವನ್ನು ಸೃಷ್ಟಿಸುವುದುಂಟು.ಭಯಪಡದೇ ಏಕಾಂತದಲ್ಲಿ ವಿಚಾರಗಳನ್ನು ಸಮರ್ಥಿಸಿದಾಗ ಉತ್ತರದ ಜತೆಗೆ ಮುಂದಾಗಬೇಕಾದ ಕಾರ್ಯಕ್ಕೆ ದಾರಿ ದೊರೆತು ಮನಸ್ಸು ನಿರಾಳವಾಗುವುದಂತೂ ನಿಜ. ಹಾಗಾಗಿ ಮೌನದಿಂದ ಮನಸ್ಸು ಕೆಡುತ್ತದೆ, ತಪ್ಪು ಹಾದಿಯತ್ತ ಮನದ ಚಿತ್ತ ಎನ್ನುವ ಮಾತು ಎಷ್ಟು ನಿಜವೋ ಅದೇ ಮೌನ ಸಾಧನೆಯ ಹಾದಿಯನ್ನೂ ತೋರುತ್ತದೆ ಎನ್ನುವುದೂ ಅಷ್ಟೇ ನಿಜ.

ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲೂ ಸಹಕಾರಿ. ಕಂಡು ಕಾಣದ ಮನಸ್ಸಿನ ನೋವು, ವೇದನೆಗಳಿಗೆ ಏಕಾಂತ ಜೊತೆಗಾರನಂತೆ ಬಂದು ಮನದ ಪರಿವರ್ತನೆಗೊಳಿಸಿ ಜೀವವಿಲ್ಲದ ಪಯಣವನ್ನು ಸುಂದರ ಜೀವಗೊಳಿಸಿ ಮುನ್ನಡೆಸುತ್ತದೆ. ಒಲಿದ ಅದೃಷ್ಟವನ್ನು ತೃಪ್ತಿಪಡುವುದು ಅಷ್ಟೇ ಸುಖವೆನಿಸುತ್ತದೆ.

ಜೀವನದಂತ್ಯದವೆರೆಗೆ ಕೂಡಿ ಬರುವ ಜೀವನದ ಹಾದಿ ಸುಗಮವಾಗಲೂ ಹೆಗಲು ನೀಡಿ, ಕಷ್ಟ ಸುಖಗಳಿಗೆ ಸಮಾನವಾಗಿ ಜತೆಗಿದ್ದು, ಮುನ್ನಡೆಸುತ್ತದೆ. ಬಯಸದೇ ಬಂದ ಭಾಗ್ಯ ನೋವುಗಳ ಜತೆಗೆ ಜೀವನದ ಸೂತ್ರವ ಹೆಣೆದು ಆಡಿಸುವ ಈ ಜಗದಿ ಏಕಾಂತ ಸುಂದರ ಬದುಕ ನಡೆಸಲು ನಮ್ಮೊಂದಿಗೆ ಇರುತ್ತದೆ. ಸಮಯೋಚಿತ ಸಲಹೆ ನೀಡುವವರು, ಕೈ ಹಿಡಿದು ಮುನ್ನಡೆಸೋ ಜನ ಎಷ್ಟಿದ್ದರೂ, ಸುತ್ತೆಲ್ಲಾ ಹರಡಿದ ಮೌನ ಒಂದು ವಿಧವಾದ ಹುನ್ನಾರವನ್ನೆ ಹುಟ್ಟುಹಾಕಿರುತ್ತದೆ. ಮೌನ ಬೇಡ ಮಾತು ಬೇಕೆನಿಸಿದರೂ, ಮೌನಕ್ಕಿರುವ ಒಳಾರ್ಥ ಜೀವನದಲ್ಲಿನ ನೋವ ಮರೆತು ಪ್ರತಿಯೊಂದು ಮೆಟ್ಟಿಲುಗಳನ್ನೇರುತ್ತಾ ಹೊಸ ಹುರುಪಿನ ಹೊಸ ಅರ್ಥದ ಹೊಸ ಬದುಕು ಮೌನ ಕಣಿವೆಯಿಂದ.

-ವಿಜಿತಾ, ಬಂಟ್ವಾಳ

Advertisement
Advertisement

Udayavani is now on Telegram. Click here to join our channel and stay updated with the latest news.

Next