Advertisement
ದೀಪಾವಳಿ ಪಾಡ್ಯದ ಪ್ರಯುಕ್ತ ಶುಕ್ರವಾರ 50 ಸಾವಿರಕ್ಕೂ ಅಧಿಕ ಮಂದಿ ಜನರು ಸೇರಿದ್ದರು. ಮಧ್ಯಾಹ್ನದ ಬಳಿಕ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಬೀಚ್ ಸಂಪರ್ಕದ ಪ್ರಮುಖ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿತ್ತು. ಬೀಚ್‌ನ ಎಲ್ಲ ಪಾರ್ಕಿಂಗ್ ಏರಿಯಗಳು ಭರ್ತಿಯಾಗಿದ್ದು, ವಾಹನವನ್ನು ಪಾರ್ಕ್ ಮಾಡುವುದೇ ದೊಡ್ಡ ಸಮಸ್ಯೆಯಾಗಿತ್ತು.
ಪಡುಕರೆ, ಮಟ್ಟು ಬೀಚ್ ಕಡಲತೀರದಲ್ಲೂ ಜನಸಂದಣಿ ಸೇರಿತ್ತು. ಮಲ್ಪೆ ಸೀವಾಕ್ ವೇಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಒಂದೆಡೆ ಮಟ್ಟು ಭಾಗದಲ್ಲಿ ಹರಿಯುವ ಪಿನಾಕಿನಿ ಹೊಳೆ, ಮಟ್ಟು ಸೇತುವೆ, ಮಟ್ಟು ಕಡಲ ಕಿನಾರೆ ಪ್ರದೇಶ ಆಕರ್ಷಣೀಯವೂ ಆಗಿದ್ದು, ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತಿದೆ. ಇದನ್ನೂ ಓದಿ:ನ. 8ರಿಂದ 15ರವರೆಗೆ ಜೆಡಿಎಸ್ ಎರಡನೇ ಹಂತದ ಕಾರ್ಯಾಗಾರ ಆರಂಭ: ಎಚ್‌ಡಿಕೆ
Related Articles
ಶನಿವಾರ ಬೆಳಗ್ಗಿನಿಂದ ಪ್ರವಾಸಿಗರ ವಾಹನಗಳು ಬೀಚ್ ಕಡೆಗೆ ಆಗಮಿಸುತ್ತಿದ್ದು ಬೀಚ್ ಪ್ರವಾಸಿಗರಿಂದ ಭರ್ತಿಯಾಗಿದ್ದವು. ಕಡಲತೀರದಲ್ಲಿ ಪ್ರವಾಸಿಗರಿಗೆ ವಿವಿಧ ಬಗೆಯ ಜಲಸಾಹಸ ಕ್ರೀಡೆಗಳು ಆರಂಭಗೊಂಡಿದೆ.
Advertisement
ಲಾಕ್‌ಡೌನ್ ತೆರವುಗೊಂಡ ಬಳಿಕ ಮಲ್ಪೆ ಬೀಚ್‌ಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಕಳೆದ ಎರಡು ತಿಂಗಳಿಂದ ವಿವಿಧೆಡೆಗಳಿಂದ ಮಲ್ಪೆ ಕಡಲತೀರದತ್ತ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹರಿದು ಬರುತ್ತಿದ್ದಾರೆ.