Advertisement
ಈಚೆಗೆ ಸುದ್ದಿಗೋಷ್ಠಿ ನಡೆಸಿದ ಕಸಾಪ ಜಿಲ್ಲಾಧ್ಯಕ್ಷ ಡಾ| ಬಸವಪ್ರಭು ಪಾಟೀಲ್, ಪರಿಷತ್‌ನ ಹಿರಿಯ ಸದಸ್ಯ ಭೀಮನಗೌಡಇಟಗಿ ಅವರನ್ನು ಅವಿರೋಧ ಮಾಡುವ ಇಂಗಿತವ್ಯಕ್ತಪಡಿಸಿದ್ದರು. ಆದರೆ, ಈಗಾಗಲೇ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಕಸರತ್ತು ನಡೆಸಿರುವ ಆಕಾಂಕ್ಷಿಗಳಲ್ಲಿ ಇದರಿಂದ ತಳಮಳ ಶುರುವಾಗಿದೆ. ಅವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಏಕಪಕ್ಷೀಯವಾಗಿ ನಿರ್ಧಾರಕೈಗೊಳ್ಳುವುದು ಎಷ್ಟು ಸರಿ? ಹಿರಿಯ ಸದಸ್ಯರೆಂದ ಮಾತ್ರಕ್ಕೆ ಎಲ್ಲ ಅರ್ಹತೆ ಇದ್ದಂತೆಯೇ ಎಂದು ಪ್ರಶ್ನಿಸಿದರು.
Related Articles
Advertisement
ಒಬ್ಬರ ನಂತರ ಒಬ್ಬರು ತಮ್ಮಿಷ್ಟಕ್ಕೆ ಬಂದಂತೆ ಅಧಿಕಾರ ನಡೆಸುವುದು ಸರಿಯಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಹಿರಿಯ ಸಾಹಿತಿಗಳು, ಕನ್ನಡಪ್ರೇಮಿಗಳು ಇದ್ದಾರೆ. ಎಲ್ಲರಿಗೂ ಅವಕಾಶ ನೀಡಬೇಕು. ಜಿಲ್ಲಾಧ್ಯಕ್ಷರ ಅವಿರೋಧ ಆಯ್ಕೆ ಹೇಳಿಕೆಯೇ ಅಸಂಬದ್ಧ. ಅವರು ತಮ್ಮದೇ ಕಾರ್ಯಕಾರಿ ಸಮಿತಿ ಸಭೆ ನಡೆಸದೇ ಯಾರೋ ಒಬ್ಬರ ಹೆಸರು ಹೇಳುವುದು ಎಷ್ಟು ಸರಿ?. ಅದೇಕಾರ್ಯಕಾರಿ ಸಮಿತಿಯಲ್ಲಿ ಅನೇಕರು ಆಕಾಂಕ್ಷಿಗಳಿದ್ದು, ಇದಕ್ಕೆ ವಿರೋಧಿಸಿದ್ದಾರೆ. ನಾನು ಕೂಡ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. – ಮಾರುತಿ ಬಡಿಗೇರ್,ಕಸಾಪ ಸದಸ್ಯ
ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಬದಲಾವಣೆ ಆಗಬೇಕಿದೆ. ಯುವ ಸಾಹಿತಿಗಳನ್ನು ಸಾಹಿತ್ಯ ಕ್ಷೇತ್ರದತ್ತ ಸೆಳೆಯುವ ನಿಟ್ಟಿನಲ್ಲಿ ಸಾಕಷ್ಟು ಕೆಲಸವಾಗಬೇಕು. ಈ ನಿಟ್ಟಿನಲ್ಲಿ ನಾನು ಈ ಬಾರಿ ಸ್ಪರ್ಧಿಸಲು ಇಚ್ಛಿಸಿದ್ದೇನೆ. ಆಕಾಂಕ್ಷಿಗಳು ಇದ್ದಾಗ್ಯೂ ಅವಿರೋಧ ಆಯ್ಕೆ ಹೇಗೆ ಮಾಡಲು ಸಾಧ್ಯ?. ನಾನು ಕಳೆದ ಐದು ವರ್ಷದಿಂದ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಹಿರಿಯ ಸದಸ್ಯರ ಸಲಹೆ ಪಡೆದು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದೇನೆ.– ಮಲ್ಲಿಕಾರ್ಜುನ ಶಿಖರಮಠ, ಕಸಾಪ ತಾಲೂಕು ಅಧ್ಯಕ್ಷ
ಕಸಾಪದಲ್ಲಿ 1992ರಿಂದ ನಿರಂತರ ಕೆಲಸ ಮಾಡಿದ್ದೇನೆ. ಎರಡು ಬಾರಿ ತಾಲೂಕು ಅಧ್ಯಕ್ಷನಾಗಿದ್ದೆ. ಬಹಳ ವರ್ಷಗಳಿಂದ ಪರಿಷತ್‌ನಲ್ಲಿ ಇದ್ದ ಮಾತ್ರಕ್ಕೆ ಜಿಲ್ಲಾಧ್ಯಕ್ಷ ಸ್ಥಾನ ನೀಡುತ್ತೇವೆ ಎನ್ನುವುದು ತರ್ಕಹೀನ. ಆಕಾಂಕ್ಷಿಗಳ ಅಭಿಪ್ರಾಯ ಪಡೆದೇಅವಿರೋಧ ವಿಚಾರ ನಿರ್ಧರಿಸಬೇಕು. ಸಾಹಿತ್ಯ ಕ್ಷೇತ್ರಕ್ಕೆ ನನ್ನದೇಯಾದ ಕೊಡುಗೆ ಇದೆ. ಈ ಬಾರಿ ನಾನು ಚುನಾವಣೆಗೆ ಸ್ಪ ರ್ಧಿಸಲು ಇಚ್ಛಿಸಿದ್ದೇನೆ. – ರಂಗಣ್ಣ ಪಾಟೀಲ್ ಅಳ್ಳುಂಡಿ, ಪತ್ರಕರ್ತ, ಸ್ಪರ್ಧಾಕಾಂಕ್ಷಿ
-ಸಿದ್ಧಯ್ಯಸ್ವಾಮಿ ಕುಕುನೂರು