Advertisement

Tirupati Laddu case:ಇದು ಕೋಟ್ಯಂತರ ಭಕ್ತರ ನಂಬಿಕೆ ವಿಷಯ- SIT ತನಿಖೆಗೆ ಸುಪ್ರೀಂ ಆದೇಶ

02:53 PM Oct 04, 2024 | Team Udayavani |

ನವದೆಹಲಿ: ತಿರುಪತಿ ತಿರುಮಲ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ತಯಾರಿಸುವ ವೇಳೆ ದನ, ಹಂದಿಯ ಕೊಬ್ಬನ್ನು ಬಳಸುತ್ತಾರೆಂಬ ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ (Supreme court) ಶುಕ್ರವಾರ (ಅ.04) ಈ ಬಗ್ಗೆ ಸಿಬಿಐನ ಮೇಲ್ವಿಚಾರಣೆಯಲ್ಲಿ ಸ್ವತಂತ್ರ(Independent) ವಿಶೇಷ ತನಿಖಾ ತಂಡ (SIT)ದಿಂದ ತನಿಖೆ ನಡೆಸುವಂತೆ ಆದೇಶ ನೀಡಿದೆ.

Advertisement

ವಿಶೇಷ ತನಿಖಾ ತಂಡದಲ್ಲಿ ಆಂಧ್ರಪ್ರದೇಶದ ಇಬ್ಬರು ಪೊಲೀಸ್‌ ಅಧಿಕಾರಿಗಳು ಮತ್ತು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ ಒಬ್ಬರು ಸದಸ್ಯರು ಇರಬೇಕು ಎಂದು ಸುಪ್ರೀಂಕೋರ್ಟ್‌ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.

ಸುಪ್ರೀಂಕೋರ್ಟ್‌ ಪೀಠದ ಜಸ್ಟೀಸ್‌ ಬಿ.ಆರ್.ಗವಾಯಿ ಮತ್ತು ಜಸ್ಟೀಸ್‌ ಕೆ.ವಿ.ವಿಶ್ವನಾಥನ್‌, ಇದೊಂದು ಜಗತ್ತಿನಾದ್ಯಂತ ಹಬ್ಬಿರುವ ಲಕ್ಷಾಂತರ ಭಕ್ತರ ನಂಬಿಕೆಯ ಪ್ರಶ್ನೆಯಾಗಿದ್ದು, ಈ ವಿಚಾರದಲ್ಲಿ ರಾಜಕೀಯ ನಾಟಕದ ಅಗತ್ಯವಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.

ಲಡ್ಡು ತಯಾರಿಕೆ ವೇಳೆ ಕೊಬ್ಬಿನ ಅಂಶ ಸೇರಿಸುತ್ತಾರೆ ಎಂಬ ಆರೋಪದಿಂದ ಪ್ರಪಂಚದಾದ್ಯಂತ ಇರುವ ಭಕ್ತರ ಭಾವನೆಗೆ ಘಾಸಿಯಾಗುತ್ತದೆ ಎಂದು ಸುಪ್ರೀಂ ಪೀಠ ಹೇಳಿದ್ದು. ಇದರದಲ್ಲಿ ರಾಜಕೀಯದ ಆರೋಪ ಬೇಕಾಗಿಲ್ಲ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next