Advertisement

ಮಾಸ್ಕ್ ಧರಿಸದೇ ಜನರು ಗುಂಪುಗೂಡುವುದು ಕಳವಳಕಾರಿ: ಸಿಎಂಗಳ ಸಭೆಯಲ್ಲಿ ಪ್ರಧಾನಿ

02:09 PM Jul 13, 2021 | Team Udayavani |

ನವದೆಹಲಿ: ಎಂಟು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ(ಜುಲೈ 13) ಕೋವಿಡ್ 19 ಪರಿಸ್ಥಿತಿ ಪುನರಾವಲೋಕನ ಮಾತುಕತೆ ನಡೆಸಿದ್ದು, ಈ ಸಂದರ್ಭದಲ್ಲಿ ಜನರು ಮುಖಕ್ಕೆ ಮಾಸ್ಕ್ ಧರಿಸದೇ ಗುಂಪುಗೂಡುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ವಂಚನೆ ಪ್ರಕರಣ : ದರ್ಶನ್ ಸ್ನೇಹಿತನ ವಿರುದ್ಧ ಉಮಾಪತಿ ಆರೋಪ

ಕೆಲವು ಜಿಲ್ಲೆಗಳಲ್ಲಿ ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳ ಆತಂಕಕಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳ ವರ್ಚುವಲ್ ಸಭೆಯಲ್ಲಿ ತಿಳಿಸಿದ್ದು, ಕೋವಿಡ್ ಮತ್ತಷ್ಟು ಹರಡದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.

ಕೋವಿಡ್ 19 ಕಾರಣದಿಂದಾಗಿ ಪ್ರವಾಸೋದ್ಯಮ, ವ್ಯವಹಾರದ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂಬುದು ನಿಜ. ಆದರೆ ಈಶಾನ್ಯ ರಾಜ್ಯಗಳಲ್ಲಿ ಮಾರುಕಟ್ಟೆ ಮತ್ತು ಪ್ರವಾಸಿ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಜನಸಂದಣಿ ಸೇರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಹಿನ್ನೆಲೆಯಲ್ಲಿ ವೈರಸ್ ಸೂಕ್ಷ್ಮ ಪ್ರಮಾಣದ ಮಟ್ಟದಲ್ಲಿ ಇರುವಾಗಲೇ ಕ್ಷಿಪ್ರವಾಗಿ ಹರಡದಂತೆ ಕಠಿಣ ನಿಮಯಗಳನ್ನು ಜಾರಿಗೊಳಿಸಬೇಕಾದ ಅಗತ್ಯವಿದೆ ಎಂದು ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ, ನಾಗಲ್ಯಾಂಡ್, ತ್ರಿಪುರಾ ಮತ್ತು ಸಿಕ್ಕಿಂ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next