Advertisement
ಮುಂಬಯಿಯಿಂದ ಮಡಗಾವ್ ರೈಲ್ವೇ ನಿಲ್ದಾಣಕ್ಕೆ ರಾತ್ರಿ 1.45ಕ್ಕೆ ಆಗಮಿಸಿದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಬಳಿಕ ಸ್ವಲ್ಪ ದೂರ ಚಲಿಸುತ್ತಿದ್ದಂತೆ ರೈಲಿನ ಚಕ್ರ ಸುತ್ತ ಬೆಂಕಿ ಆವರಿಸಿತ್ತು. ಇದಕ್ಕೂ ಮೊದಲು ಕಾಣಿಸಿದ ದಟ್ಟ ಹೊಗೆಯಿಂದ ಪ್ರಯಾಣಿಕರು ಆತಂಕಕ್ಕೀಡಾಗಿದ್ದರು. ಟ್ರ್ಯಾಕ್‌ವೆುನ್ ತುರ್ತಾಗಿ ನಿಲುಗಡೆಗೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ರೈಲು ನಿಲುಗಡೆಯಾಯಿತು.
ಬೆಂಕಿ ನಂದಿಸಲು ರೈಲ್ವೇ ಸಿಬಂದಿ ತುರ್ತು ಅಗ್ನಿ ನಂದಿಸುವ ಉಪಕರಣ ಪ್ರಯೋಗಿಸಲು ಮುಂದಾದರು. ಆದರೆ ಅದನ್ನು ಬಳಸುವುದು ಸಿಬಂದಿಗೆ ತಿಳಿದಿರಲಿಲ್ಲ. ಬಳಿಕ ಪ್ರಯಾಣಿಕರೋರ್ವರ ಸಮಯ ಪ್ರಜ್ಞೆಯಿಂದ ಬೆಂಕಿ ನಂದಿಸಲಾಯಿತು.
Related Articles
Advertisement
ಮರುಕಳಿಸಿದ ಅಗ್ನಿ ಅವಘಡಶನಿವಾರವಷ್ಟೇ ಕೇರಳದತ್ತ ಪ್ರಯಾಣಿಸುತ್ತಿದ್ದ ಮಂಗಳಾ -ಲಕ್ಷದ್ವೀಪ ಎಕ್ಸ್‌ಪ್ರೆಸ್ ರೈಲಿನ ಎ.ಸಿ. ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೂ ರೈಲ್ವೇ ಇಲಾಖೆ ಅವಧಿ ಮುಗಿದ ಅಗ್ನಿಶಮನ ಸಾಧನಗಳು, ಬೆಂಕಿ ನಂದಿಸಲು ಬಳಸುವ
ಪರಿಕರಗಳ ಕುರಿತು ಮುನ್ನೆಚ್ಚರಿಕೆ ವಹಿಸಿದಂತಿಲ್ಲ.