Advertisement
ಮರವಂತೆ, ಶಿರೂರು, ಗಂಗೊಳ್ಳಿ, ಕೋಡಿ, ಕೊಡೇರಿ ಭಾಗದ ಸುಮಾರು 600 ನಾಡದೋಣಿಗಳಿದ್ದು, ಸಾವಿರಾರು ಮಂದಿ ಮೀನುಗಾರರು ಸಾಂಪ್ರದಾಯಿಕ ಮೀನು ಗಾರಿಕೆಯನ್ನೇ ಆಶ್ರಯಿಸಿದ್ದಾರೆ. ಈಗ ಹಲವು ದಿನ ಗಳಿಂದ ಮೀನುಗಾರಿಕೆಯಿಲ್ಲದೆ ಮೀನುಗಾರರು ಕಂಗಾಲಾಗಿದ್ದಾರೆ.
ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿರುವ ಜೂನ್‌ನಿಂದ ಆಗಸ್ಟ್‌ವರೆಗೆ ನಾಡದೋಣಿ ಮೀನುಗಾರಿಕೆಗೆ ಅವಕಾಶವಿದೆ. ಆದರೆ ಈ ಬಾರಿ ಮುಂಗಾರಿನ ಮೀನುಗಾರಿಕೆಯು ಕೂಡ ನಾಡದೋಣಿಗಳಿಗೆ ಅಷ್ಟೇನೂ ಆಶಾ ದಾಯಕವಾಗಿರಲಿಲ್ಲ. ಮೀನುಗಾರಿಕೆಗೆ ತೆರಳಿದ್ದರೂ ಸಹ ಉತ್ತಮ ಪ್ರಮಾಣದಲ್ಲಿ ಮೀನುಗಳು ಸಿಗದೇ ಹೆಚ್ಚಿನ ಸಂದರ್ಭ ಬರಿಗೈಯಲ್ಲಿ ವಾಪಸು ಬಂದಂತಹ ನಿದರ್ಶನ ಸಹ ಇದೆ.
Related Articles
ನಾಡದೋಣಿ ಮೀನುಗಾರಿಕೆ ಮಾತ್ರವಲ್ಲ, ಈ ಬಾರಿ ಯಾಂತ್ರೀಕೃತ ಮೀನುಗಾರಿಕೆಗೂ ಹೊಡೆತ ಬಿದ್ದಿದೆ. ಮತ್ಸ ಕ್ಷಾಮದಿಂದಾಗಿ ಬೋಟ್‌ಗಳಿಗೂ ಉತ್ತಮ ಪ್ರಮಾಣದಲ್ಲಿ ಮೀನುಗಳು ಸಿಕ್ಕಿಲ್ಲ. ಇದರಿಂದ ಗಂಗೊಳ್ಳಿ ಸಹಿತ ಎಲ್ಲ ಕಡೆಗಳ ಬಂದರಿನಲ್ಲಿಯೂ ಕೂಡ ಹೆಚ್ಚಿನ ಬೋಟ್‌ಗಳು ಮೀನುಗಾರಿಕೆಗೆ ತೆರಳದೇ ಬಂದರಿನಲ್ಲಿಯೇ ಲಂಗರು ಹಾಕಿವೆ.
Advertisement