Advertisement

ಮಾತೃಛಾಯಾ ನೃತ್ಯ ಸಂಪದ

03:16 PM Jan 05, 2018 | |

ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ) ಸುರತ್ಕಲ್‌ ನೃತ್ಯ ಸಂಸ್ಥೆ ಈ ಬಾರಿ ತನ್ನ ವಿನೂತನ ಕಾರ್ಯಕ್ರಮಕ್ಕೆ “ಮಾತೃಛಾಯಾ’ ಎಂಬ ವಿಶಿಷ್ಟ ಪರಿಕಲ್ಪನೆಯನ್ನು ಆರಿಸಿಕೊಂಡಿದೆ. ಮಾತೃಛಾಯಾ ಎಂದರೆ ತಾಯಿ ಮತ್ತು ಮಗು ಜತೆಯಾಗಿ ನರ್ತಿಸುವ ನೃತ್ಯ ಕಾರ್ಯಕ್ರಮ. ಕಲಾವಿದೆಯಾದ ಅಮ್ಮ ತನ್ನ ಮಗುವಿನೊಂದಿಗೆ ನರ್ತಿಸುವುದೇ ಈ ಕಾರ್ಯಕ್ರಮದ ವೈಶಿಷ್ಟéತೆ. ಕಲೆ ತಾಯಿಯಿಂದ ಮಕ್ಕಳಿಗೆ ವಂಶವಾಹಿಯಾಗಿ ಹರಿದು ಬರುವ ವೈಜ್ಞಾನಿಕ ಸಿದ್ಧಾಂತದ ತಳಹದಿಯ ಮೇಲೆ ಸಂಸ್ಥೆಯ ರೂವಾರಿ ಎ.ಚಂದ್ರಶೇಖರ ನಾವಡ ಈ ಹೊಸ ರೀತಿಯ ಕಾರ್ಯಕ್ರಮವನ್ನು ಪರಿಕಲ್ಪಿಸಿದ್ದಾರೆ. ಕಲೆ ಬಹುತೇಕ ಸಂದರ್ಭದಲ್ಲಿ ತಲೆಮಾರಿಗೆ ಬಳುವಳಿಯಾಗಿ ಬರುತ್ತದೆ ಎಂಬ ವೈಜ್ಞಾನಿಕ ಸತ್ಯವನ್ನು ಅನಾವರಣಗೊಳಿಸುವ ಸಂದೇಶ ನೀಡುವುದು ಕಾರ್ಯಕ್ರಮದ ಉದ್ದೇಶ ಎನ್ನುತ್ತಾರೆ ನಾವಡ. ಜ.6ರಂದು ಸಂಜೆ 4 ಗಂಟೆಗೆ ಮಂಗಳೂರು ಪುರಭವನದಲ್ಲಿ ನೃತ್ಯ ಸಂಪದ ಕಾರ್ಯಕ್ರಮ ಜರಗಲಿದೆ. 

Advertisement

ಈ ಬಾರಿಯ ನೃತ್ಯ ಸಂಪದ ಕಾರ್ಯಕ್ರಮದಲ್ಲಿ ಮಂಗಳೂರು, ಉಡುಪಿ, ಸುರತ್ಕಲ್‌, ಉಳ್ಳಾಲ, ಬೆಂಗಳೂರಿನ ಸುಮಾರು 14 ಅಮ್ಮ-ಮಗು ಜೋಡಿ ಭಾಗವಹಿಸಲಿದೆ. ಪ್ರತಿ ಜೋಡಿ 20 ನಿಮಿಷಗಳ ಅವಧಿಯಲ್ಲಿ ಯಾವುದಾದರೊಂದು ಶಾಸ್ತ್ರೀಯ ನೃತ್ಯವನ್ನು ಪ್ರದರ್ಶಿಸಲಿದ್ದಾರೆ. ಭರತನಾಟ್ಯ, ಕೂಚಿಪುಡಿ ಸೇರಿ ವಿವಿಧ ನೃತ್ಯ ಪ್ರಕಾರಗಳು ಈ ಸಲ ಸಾಕಾರಗೊಳ್ಳಲಿದೆ. ವೈಜಯಂತಿ ಕಾಶಿ-ಪ್ರತೀಕ್ಷಾ ಕಾಶಿ, ಡಾ|ಸುಪರ್ಣಾ ವೆಂಕಟೇಶ್‌-ಶ್ವೇತಾ ವೆಂಕಟೇಶ್‌, ಶೈಲಜಾ ಶಿವಶಂಕರ್‌-ಶ್ರೀರಕ್ಷಾ, ಮಮತಾ ಕಾರಂತ್‌-ಮಯೂರಿ ಕಾರಂತ್‌, ಶ್ರೀವಿದ್ಯಾ ಮುರಳೀಧರ್‌-ಅಭಿರಾಮ್‌ ಮುರಳೀಧರ್‌, ಮಾನಸಿ ಸುಧೀರ್‌-ಸುರಭಿ ಸುಧೀರ್‌, ಸೌಮ್ಯಾ ಸುಧೀಂದ್ರ-ಶ್ರೀಯಾ ರಾವ್‌, ಡಾ| ಆರತಿ ಶೆಟ್ಟಿ-ಸಾತ್ವಿಕಾ ರೈ, ಶಾರದಾಮಣಿ ಶೇಖರ್‌- ಶುಭಮಣಿ, ಲಕ್ಷ್ಮೀ ಗುರುರಾಜ್‌-ಮಯೂರಿ ಗುರುರಾಜ್‌, ಶ್ರದ್ಧಾ ಭಟ್‌-ಸಾಕ್ಷಿ, ಭಾರತಿ ಸುರೇಶ್‌- ಚಿನ್ಮಯಿ, ವಿದ್ಯಾಶ್ರೀ ರಾಧಾಕೃಷ್ಣ-ಪೂರ್ವಿ, ಸುನೀತಾ ಜಯಂತ್‌-ಮಯೂರಿ ಭಾಗವಹಿಸಲಿರುವ ಅಮ್ಮ-ಮಗು ಜೋಡಿ. ಗುರು ಉಳ್ಳಾಲ ಮೋಹನ್‌ ಕುಮಾರ್‌ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾರೆ. ವಿದುಷಿ ಸರೋಜಾ ಮೋಹನ್‌ದಾಸ್‌ ರಾವ್‌ ಉದ್ಘಾಟಿಸುತ್ತಾರೆ. ವಿದುಷಿ ಪ್ರತಿಭಾ ಎಲ್‌. ಸಾಮಗ, ಅಪರ್ಣಾ ಸಾಮಗ ಮತ್ತಿತರರ ಸಹಕಾರವಿದೆ. 

ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಹಲವಾರು ವರ್ಷಗಳಿಂದ ವಿನೂತನ ಪರಿಕಲ್ಪನೆಯಲ್ಲಿ ರಾಷ್ಟ್ರೀಯ ನೃತ್ಯೋತ್ಸವಗಳನ್ನು ಆಯೋಜಿಸುತ್ತಿದೆ. ಭರತನಾಟ್ಯ, ಕಥಕ್‌,ಒಡಿಸ್ಸಿ, ಕಥಕ್ಕಳಿ, ಮೋಹಿನಿಯಾಟ್ಟಂ, ಕೂಚುಪುಡಿ ಮತ್ತಿತರ ಕಲಾಪ್ರಕಾರಗಳಿಗೆ ವೇದಿಕೆ ಒದಗಿಸಿದೆ. ಪುರುಷ, ಪ್ರಕೃತಿ-ಪುರುಷ, 30 ಸ್ತ್ರೀ ಕಲಾವಿದೆಯರ ಏಕವ್ಯಕ್ತಿ ಪ್ರದರ್ಶನ, ಅವಳಿ ಜವಳಿಗಳ ನೃತ್ಯ ಸಂಸ್ಥೆ ಏರ್ಪಡಿಸಿದ ಕೆಲವು ವಿಶಿಷ್ಟ ನೃತ್ಯ ಕಾರ್ಯಕ್ರಮಗಳು.

ಪ್ರತಿಭಾ ಎಂ. ಎಲ್‌.  ಸಾಮಗ

Advertisement

Udayavani is now on Telegram. Click here to join our channel and stay updated with the latest news.

Next