Advertisement
ಮಣಿಪಾಲಮಣಿಪಾಲ ಟೈಗರ್ ಸರ್ಕಲ್ ಬಸ್ಸು ನಿಲ್ದಾಣದ ಸಮೀಪ ಮಟ್ಕಾ ಜುಗಾರಿ ಆಟವಾಡುತ್ತಿದ್ದ ಬಾಲಕೃಷ್ಣ ನಾಯಕ್ (63) ನನ್ನು ಪೊಲೀಸರು ಬಂಧಿಸಿ, 630 ರೂ. ನಗದು ವಶಪಡಿಸಿಕೊಂಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಮಟ್ಕಾ ಜುಗಾರಿ ಮೂಲಕ ಹಣ ಸಂಗ್ರಹಿಸುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆನಗಳ್ಳಿ ಗ್ರಾಮದ ಕಳಿಂಜೆ ಬಸ್ ನಿಲ್ದಾಣ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಮೂಲಕ ಹಣ ಸಂಗ್ರಹಿಸುತ್ತಿದ್ದ ಆನಗಳ್ಳಿಯ ಮಾಧವ ಮೊಗವೀರ (53) ನನ್ನು ಎಸ್‌ಐ ಸದಾಶಿವ ಗವರೋಜಿ ನೇತೃತ್ವದ ಕುಂದಾಪುರ ಪೊಲೀಸರ ತಂಡ ವಶಕ್ಕೆ ಪಡೆದಿದೆ. ಇನ್ನೊಂದು ಪ್ರಕರಣದಲ್ಲಿ ಬಳ್ಕೂರು ಗ್ರಾಮದ ಬಸ್ ನಿಲ್ದಾಣ ಬಳಿ ಮಟ್ಕಾ ಜುಗಾರಿ ಮೂಲಕ ಹಣ ಸಂಗ್ರಹಿಸುತ್ತಿದ್ದ ಉಳ್ಳೂರಿನ ಗುರುರಾಜ್ (21) ನನ್ನು ಎಸ್‌ಐ ರಾಜ್‌ಕುಮಾರ್ ನೇತೃತ್ವದ ಕುಂದಾಪುರ ಗ್ರಾಮಾಂತರ ಪೊಲೀಸರ ತಂಡ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಟಪಾಡಿ: ಓರ್ವನ ಬಂಧನ
ಕಾಪು: ಕಟಪಾಡಿ ಯೇಣಗುಡ್ಡೆ ಗ್ರಾಮದ ಶಿರ್ವ ರಸ್ತೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟವಾಡುತ್ತಿದ್ದ ವ್ಯಕ್ತಿಯೋರ್ವನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ. ಉಡುಪಿ ಬೊಮ್ಮರಬೆಟ್ಟು ನಿವಾಸಿ ಪ್ರವೀಣ್ ಶೆಟ್ಟಿ (43) ಬಂಧಿತ ಆರೋಪಿ. ಆರೋಪಿಯಿಂದ ಮಟ್ಕಾ ಬರೆಯಲು ಬಳಸುತ್ತಿದ ಬಾಲ್ ಪೆನ್, ಮಟ್ಕಾ ಚೀಟಿ ಹಾಗೂ ನಗದು 7,600 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Related Articles
ಸಿದ್ದಾಪುರ: ಶಂಕರನಾರಾಯಣ ಗ್ರಾಮದ ಕ್ರೋಢಬೈಲೂರು ಬಸ್ ನಿಲ್ದಾಣದ ಬಳಿ ಮಟ್ಕಾ ಆಟಕ್ಕೆ ಹಣ ಸಂಗ್ರಹಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಶಂಕರನಾರಾಯಣ ಎಸ್‌ಐ ಶ್ರೀಧರ್ ನಾಯ್ಕ ಅವರು ದಾಳಿ ನಡೆಸಿ ಆರೋಪಿ ಶೇಖರ ಮೊಗವೀರ (38) ನನ್ನು ಬಂಧಿಸಿದ್ದಾರೆ. ಆರೋಪಿಯ ಬಳಿ ಇದ್ದ 740 ರೂ. ನಗದು , ಮಟ್ಕಾ ಚೀಟಿ ಮತ್ತು ಇತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
Advertisement
ಮುಂಡ್ಕಿನಜಡ್ಡುಬ್ರಹ್ಮಾವರ: ಮುಂಡ್ಕಿನಜಡ್ಡಿನಲ್ಲಿ ಶುಕ್ರವಾರ ಮಟ್ಕಾ ಜುಗಾರಿ ಆಟವಾಡುತ್ತಿದ್ದ ಆಲುಂಜೆಯ ಆನಂದ ಕುಲಾಲ್‌ನನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ 550 ರೂ. ನಗದು ಹಾಗೂ ಪರಿಕರ ಸ್ವಾಧೀನಪಡಿಸಿ ಪ್ರಕರಣ ದಾಖಲಿಸಲಾಗಿದೆ.