Advertisement
ಗಣಿತ ಪಾಠ ಬಹಳ ಕ್ಲಿಷ್ಟ ಎಂಬ ಭಾವನೆ ಬಹಳಷ್ಟು ಮಕ್ಕಳಿಗಿದೆ. ಆದರೆ ನಡ ಪ್ರೌಢಶಾಲೆಯ ಮಕ್ಕಳು ಹಾಗಲ್ಲ. ಇವರು ಗಣಿತ ಕಲಿಕೆಗೆ ಹೊಸ ದಿಕ್ಕೊಂದನ್ನು ಪರಿಚಯಿಸಿದ್ದಾರೆ.
Related Articles
Advertisement
“ಮ್ಯಾಥ್ಸ್ ಮ್ಯಾಜಿಕ್’ ಚಾನೆಲ್ ನಲ್ಲಿ ಶೇ. 90 ಗಣಿತ ಪಾಠಗಳ ಕುರಿತು ವಿವರಣೆ ಯಿದ್ದು, ಶೇ. 10 ಇತರ ಚಟು ವಟಿಕೆ ಗಳ ವೀಡಿಯೋ ಇದೆ. ಜತೆಗೆ ವಿದ್ಯಾರ್ಥಿಗಳು ಶಾಲಾ ಚಟು ವಟಿಕೆಗಳ ವಿವರ ನೀಡುವ ಸುದ್ದಿ ಚಾನೆಲ್ ಸೃಷ್ಟಿಸಿ ಸುದ್ದಿ ವಾಚನ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಚೀನಾ ಉದ್ಧಟತನ: ಮಾತುಕತೆ ವಿಫಲ ; ಪರಿಹಾರ ನಿಟ್ಟಿನಲ್ಲಿ ನಡೆದಿದ್ದ 13ನೇ ಸುತ್ತಿನ ಮಾತುಕತೆ
6 ವಿಷಯಗಳಿಗೂ ಲ್ಯಾಬ್100ಕ್ಕೂ ಮಿಕ್ಕಿ ಗಣಿತ ಮಾಡೆಲ್ ಜತೆಗೆ ಉತ್ಕೃಷ್ಟ ಮಟ್ಟದ ಲ್ಯಾಬ್ ಹೊಂದಿರುವ ಪ್ರೌಢಶಾಲೆ ಇದು. ಎಲ್ಲ 6 ವಿಷಯಗಳಿಗೆ ಸಂಬಂಧಿಸಿದ ಲ್ಯಾಬ್‌ಗಳನ್ನು ನಿರ್ಮಿಸಲು ಶಾಲಾ ಶಿಕ್ಷಕ ವರ್ಗ ಶ್ರಮಿಸುತ್ತಿದೆ. ಗಣಿತ, ಹಿಂದಿ ಲ್ಯಾಬ್ ಈಗಾಗಲೇ ಇದ್ದರೆ ಸಮಾಜ, ವಿಜ್ಞಾನಗಳ ಅಟಲ್ ಟಿಂಕರಿಂಗ್ ಲ್ಯಾಬ್ ಸಿದ್ಧಗೊಳ್ಳುತ್ತಿದೆ. ಇನ್ನುಳಿದಂತೆ ಇಂಗ್ಲಿಷ್, ಕನ್ನಡ ಲ್ಯಾಬ್, ಆಧುನಿಕ ಗ್ರಂಥಾಲಯ, ಶಾಸಕರ ಮತ್ತು ಶಿಕ್ಷಣ ಇಲಾಖೆಯ ಅನು ದಾನದಡಿ ಸುಸಜ್ಜಿತ ಸಭಾಂಗಣ ನಿರ್ಮಿಸಲು ರೂಪುರೇಷೆ ಸಿದ್ಧಗೊಂಡಿದೆ. ಮಕ್ಕಳ ಸ್ನೇಹಿ, ಭಯಮುಕ್ತ ಕಲಿಕಾ ವಾತಾವರಣ, ವಿಧಾನ ರೂಪಿಸಿದಾಗ ಅವರು ಸುಲಭವಾಗಿ ಅರ್ಥೈಸಿಕೊಳ್ಳುತ್ತಾರೆ. ಪೈಥಾಗೊರಸ್ ಪ್ರಮೇಯ, ಥೇಲ್ಸ್ ಪ್ರಮೇಯ, ಬೀಜ ಗಣಿತದ ಸೂತ್ರಗಳು, ಮೋಜಿನ ಗಣಿತ ಇತ್ಯಾದಿಗಳನ್ನು ಮಕ್ಕಳೇ ಮಾಡುತ್ತಿದ್ದಾರೆ.
-ಯಾಕೂಬ್ ಕೊಯ್ಯೂರು,
ಶಿಕ್ಷಕ, ನಡ ಪ್ರೌಢಶಾಲೆ -ಚೈತ್ರೇಶ್ ಇಳಂತಿಲ