Advertisement
ಪುರಾಣಗಳಲ್ಲಿರುವ ಒಂದು ಮಾತು ಇಂದಿಗೂ ಅಸ್ತಿತ್ವಕ್ಕೆ ಬರವಂಥದು. ನಮ್ಮ ಕಷ್ಟದ ಸಮಯದಲ್ಲಿ ನಮಗೆ ಯಾರು ಸಹಾಯ ಮಾಡುತ್ತಾರೋ ಅಂಥವರನ್ನು ನಾವು ಜೀವನಪೂರ್ತಿ ನೆನಪಿಟ್ಟುಕೊಳ್ಳಬೇಕೆಂಬುದು. ಎಲ್ಲರ ಲೈಫ್ನಲ್ಲಿ ಒಂದು ಆಶಾಭಾವನೆಯ ಬೆಳಕನ್ನು ಮೂಡಿಸಿದಂಥ ವ್ಯಕ್ತಿ ಬಂದೇ ಬರುತ್ತಾರೆ ಅಂತೆ. ಅದು ಯಾವ ರೀತಿಯಲ್ಲಿ ಬೇಕಾದ್ರೂ ಬರಬಹುದು. ಒಬ್ಬ ವ್ಯಕ್ತಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಹೊರಡುವಾಗಲೂ ಅವನ ಮನಸ್ಸಿನಲ್ಲಿ ಮತ್ತೆ ಮತ್ತೆ ಬೇಕು-ಬೇಡಗಳ ದುಡುಕು ನಿರ್ಧಾರದ ಪ್ರಶ್ನೆಗಳು ಮೂಡುತ್ತಲೇ ಇರುತ್ತವೆ. ನನ್ನ ಜೀವನದಲ್ಲಿ ಇಂಥ ಮಹಾನ್ ವ್ಯಕ್ತಿಗಳು ಬರುತ್ತಾರೆ ಅಂಥ ಅಂದುಕೊಳ್ಳಲೇ ಇಲ್ಲ. ಅಂತೂ ಅದನ್ನು ನಾನು ಕಂಡುಕೊಂಡದ್ದು ನನ್ನ ಹೈಸ್ಕೂಲಿನಲ್ಲಿ.
Related Articles
Advertisement
ಎಲ್ಲರಂತೆ ನನ್ನ ತಲೆಗೆ ಕೂಡ ಗಣಿತ ಕಬ್ಬಿಣದ ಕಡಲೆಯಂತೆ. ಪ್ರತಿಸಲ ನಾನು ಗಣಿತದಲ್ಲೇ ಫೇಲಾಗುತ್ತಿದ್ದೆ. ಆದ್ರೂ ವಿಜಯಲಕ್ಷ್ಮಿ ಟೀಚರ್ ನನ್ನನ್ನು ಒಂದು ಸಲವೂ ಬೈಯದೇ ನನ್ನ ತಪ್ಪುಗಳನ್ನು ಸರಿ ಮಾಡಿ ಅವರ ಕರ್ತವ್ಯವನ್ನು ಸಂಪೂರ್ಣವಾಗಿ ನಿಭಾಯಿಸಿದರು. ಅವರು ಗಣಿತದ ಕುರಿತಾಗಿ ಹೇಳುತ್ತ ಇದ್ದಾಗ ನಾನು ಪಾಠ ಕೇಳದೇ ರಫ್ ಬುಕ್‌ನಲ್ಲಿ ಅದೇನೋ ಗೀಚುತ್ತ ಕಾಲಹರಣ ಮಾಡುತ್ತ ಇರುತ್ತಿದ್ದೆ. ಸದಾ ಮುಗುಳುನಗುವಿನಿಂದ ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು. ಅವರ ಪೀರಿಯೆಡ್‌ನಲ್ಲಿ ಪಾಠದ ಜೊತೆಗೆ ಜೀವನದ ಮೌಲ್ಯಕ್ಕೂ ಹೆಚ್ಚು ಒತ್ತು ನೀಡುತ್ತ ಇದ್ದರು.ಒಂದು ದಿನ ಗಣಿತ ಕ್ಲಾಸ್‌ನಲ್ಲಿ ಇರುತ್ತಿದ್ದ ಸೂತ್ರಗಳು ಇರಲಿಲ್ಲ. ವಿಜಯಲಕ್ಷ್ಮಿ ಟೀಚರ್ ಕ್ಲಾಸಿಗೆ ಬಂದು ನನ್ನನ್ನು ಕರೆದ್ರು. ನಾನು ಸ್ವಲ್ಪ ಹೆದರಿಕೆಯಿಂದಲೇ ಹೋದೆ. ಆವತ್ತು ಅವರು ಹೇಳಿದ ಮಾತು ನನ್ನ ಜೀವನದ ಉತ್ಸಾಹಕ್ಕೆ ನಾಂದಿ ಹಾಡಿತು. “ನೀನು ಒಳ್ಳೆ ಮಾಡಿ ಕಲಿಯಬೇಕು. ಕಲಿತು ನಿನ್ನ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡ್ಕೊàಬೇಕು, ಉದಾಸೀನ ಮಾಡಬಾರದು’ – ಹೀಗೆ ಹೇಳುತ್ತ ಅವರು ಒಂದು ಪೀರಿಯೆಡ್ ವೇ… ಮಾಡಿದ್ರು ಅಂದೊRಂಡಿ¨ªೆ. ಆದ್ರೆ ಇದೇ ಸ್ಫೂರ್ತಿದಾಯಕ ಮಾತುಗಳು ನನ್ನ ಮುಂದಿನ ಕಲಿಕೆಗೆ ಮಾರ್ಗವಾಗಿ ಬಿಟ್ಟಿತು. ಬದಲಾವಣೆ ತನ್ನಿಂದ ತಾನಾಗಿಯೇ ಆಗಿತ್ತು. ಗಣಿತ ಹಾಗೂ ವಿಜ್ಞಾನ ಎರಡು ವಿಷಯದಲ್ಲಿ ಪಾಠ ಮಾಡುತ್ತಿದ್ದ ಅವರು, ಆ ವರ್ಷ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಆಯೋಜನೆ ಮಾಡಿದ್ದ ಕಾರ್ಯಕ್ರಮಕ್ಕೆ ಪ್ರತಿಭಾವಂತ ವಿದ್ಯಾರ್ಥಿಗಳ ಭಂಡಾರದಲ್ಲಿ ನನ್ನನ್ನು ಕೂಡ ಸೆಲೆಕr… ಮಾಡಿದರು. ಅಂದು ವಿಜಯಲಕ್ಷ್ಮಿ ಟೀಚರ್ ಹೇಳಿದ ಮಾತು ಇವತ್ತಿಗೂ ನೆನಪಲ್ಲಿ ಇದ್ದು, ಮುಂದೆಯೂ ನೆನಪಲ್ಲಿ ಉಳಿಯುವ ಹಾಗೆ ಮಾಡಿದೆ. ಅವರು ಹೇಳಿದ ಬುದ್ಧಿಮಾತುಗಳಿಂದ ಕಲ್ಲಾಗಿದ್ದ ನನ್ನ ವಿದ್ಯಾರ್ಥಿ ಜೀವನವನ್ನು ಮೂರ್ತಿಯಾಗಿಸಿ ಉತ್ಸಾಹದ ಹೊರೆಯನ್ನು ಕುತೂಹಲದ ಕಣ್ಣುನೋಟವನ್ನು ನನ್ನಲ್ಲಿ ಪ್ರೇರೇಪಿಸಿದ್ದಾರೆ. ಅವರು ಕಲಿಸಿದ ಜೀವನ ಪಾಠಕ್ಕೆ ನಾನು ಸದಾ ತಲೆಬಾಗುತ್ತೇನೆ.
ಥ್ಯಾಂಕ್ಯೂ… ವಿಜಯಲಕ್ಷ್ಮಿ ಟೀಚರ್. ಸುಹಾನ್
ಪತ್ರಿಕೋದ್ಯಮ ವಿಭಾಗ, ಎಂಜಿಎಂ ಕಾಲೇಜು , ಉಡುಪಿ