Advertisement

ಮದ್ಯ ಮಾರಾಟ ನಿಲ್ಲಿಸಿ: ಮಾತೆ ಗಂಗಾದೇವಿ ಆಗ್ರಹ

01:43 PM May 05, 2020 | Suhan S |

ಕೂಡಲಸಂಗಮ: ರಾಜ್ಯ ಸರ್ಕಾರ ಮದ್ಯ ಮಾರಾಟ ಕೂಡಲೇ ನಿಲ್ಲಿಸಬೇಕು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಗಂಗಾದೇವಿ ಆಗ್ರಹಿಸಿದ್ದಾರೆ.

Advertisement

ಅನೇಕ ಕುಟುಂಬಗಳ ನೆಮ್ಮದಿ ಹಾಳು ಮಾಡಿರುವ ಮದ್ಯಪಾನವನ್ನು ಸರ್ಕಾರ ಸಂಪೂರ್ಣ ನಿಷೇಧ ಮಾಡುವ ಮೂಲಕ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕು. ಆದಾಯ ದೊರೆಯುತ್ತದೆ ಎಂದು ಜನರ ಆರೋಗ್ಯ ಕೆಡಿಸುವುದು ಸರಿಯಲ್ಲ. ಸರ್ಕಾರ ಪ್ರಜೆಗಳ ಆರೋಗ್ಯ, ಸಂತೋಷ ಬಯಸಬೇಕು ಹೊರತು ಹಣವನ್ನಲ್ಲ. ಲಾಕ್‌ಡೌನ್‌ ಅವಧಿಯಲ್ಲಿ ಮದ್ಯಪಾನ ನಿಷೇಧ ಮಾಡಿದ್ದರಿಂದ ಅನೇಕ ಕುಟುಂಬಗಳು ನೆಮ್ಮದಿಯಿಂದ ಇದ್ದವು. ಮತ್ತೆ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟ ಪರಿಣಾಮ ಕುಡಿತ ಬಿಟ್ಟ ಜನರು ಇಂದು ಮತ್ತೆ ಕುಡಿಯಲು ಆರಂಭಿಸಿದ್ದಾರೆ. ಮದ್ಯಪಾನ ನಿಷೇಧಕ್ಕೆ ಸೂಕ್ತ ಕಾಲ ಇದಾಗಿದೆ. ಮದ್ಯ ನಿಷೇಧ ಮಾಡುವ ಮೂಲಕ ಜನರು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಆದಾಯ ಗಳಿಕೆಯ ದೃಷ್ಟಿಯಿಂದ ಮದ್ಯ ಮಾರಾಟಕ್ಕೆ ಅವಕಾಶ ಕೊಡುವುದು ಸರಿಯಲ್ಲ. ಆದಾಯಕ್ಕಿಂತ ಮದ್ಯವ್ಯಸನಿಗಳ ಆರೋಗ್ಯಕ್ಕಾಗಿ ಸರಕಾರ ಅಧಿಕ ವೆಚ್ಚ ಮಾಡುತ್ತಿದೆ ಎಂದು ಹಲವು ಸಮೀಕ್ಷಾ ವರದಿಗಳು ತಿಳಿಸಿವೆ. ಮುಖ್ಯಮಂತ್ರಿಗಳು ವರದಿಗಳ ಪರಿಶೀಲನೆ ಮಾಡಿ ಸಮಾಜದಲ್ಲಿ ನಿತ್ಯ ನಡೆಯುವ ಅಪರಾಧ, ಅಪಘಾತ ಕಡಿಮೆ ಮಾಡಿ ಸಾಮಾನ್ಯ ಜನರ ಆರೋಗ್ಯ ಕಾಪಾಡುವ ಕೆಲಸ ಮಾಡಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next