Advertisement
ಆದರೆ, ಮಾಸಿಕ 15 ಸಾವಿರ ರೂ.ಗಳಿಗಿಂತ ಹೆಚ್ಚಿನ ವೇತನ ಪಡೆಯುತ್ತಿರುವಂಥ ಮಹಿಳೆಯರ ಹೆರಿಗೆ ರಜೆಗೆ ಮಾತ್ರ ಈ ನಿಯಮ ಅನ್ವಯಿಸುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಕಾರ್ಯದರ್ಶಿ ರಾಕೇಶ್ ಶ್ರೀವಾಸ್ತವ ತಿಳಿಸಿದ್ದಾರೆ. 12 ರಿಂದ 26 ವಾರಗಳ ಕಾಲ ಹೆರಿಗೆ ರಜೆ ವಿಸ್ತರಿಸಿದ ಬಳಿಕ ಮಹಿಳೆಯರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳದೇ ಇರುವ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ರಾಜ್ಯ ಸರಕಾರಗಳ ಬಳಿ ಲೇಬರ್ ಸೆಸ್ ಎಂದು ಸಂಗ್ರಹಿಸಲಾಗುವ ಮೊತ್ತ ಹೆಚ್ಚಿನ ರೀತಿಯಲ್ಲಿ ಬಳಕೆಯಾಗುತ್ತಿಲ್ಲ. ಹೀಗಾಗಿ ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಪ್ರತಿ ತಿಂಗಳು 15 ಸಾವಿರ ರೂ.ಗಿಂತ ಹೆಚ್ಚಿನ ಸಂಬಳ ಪಡೆಯುತ್ತಿರುವ ಮಹಿಳೆಯರ 26 ವಾರಗಳ ಹೆರಿಗೆ ರಜೆ ಪೈಕಿ 7 ವಾರಗಳ ವೇತನವನ್ನು ಭರಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ. 2017ರ ಮಾರ್ಚ್‌ವರೆಗೆ ಈ ನಿಧಿಯಲ್ಲಿ 32,632 ಕೋಟಿ ರೂ.ಗಳಿದ್ದವು. ಈ ಪೈಕಿ 7,500 ಕೋಟಿ ರೂ. ಮೊತ್ತವನ್ನು ಮಾತ್ರ ಬಳಕೆ ಮಾಡಲಾಗಿದೆ. Advertisement
ಸರಕಾರ ಭರಿಸಲಿದೆ ಏಳು ವಾರದ ಹೆರಿಗೆ ರಜೆ ಸಂಬಳ
07:40 AM Nov 16, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.