Advertisement

ಪಾತಕಿ ದಾವೂದ್‌ಗೆ ಮ್ಯಾಚ್ ಫಿಕ್ಸಿಂಗ್‌ ಸುಲಭದ ಕೆಲಸ!

01:13 AM May 18, 2019 | Team Udayavani |

ನವದೆ‌ಹಲಿ: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಗ್ಯಾಂಗ್‌ಗೆ ಮ್ಯಾಚ್ ಫಿಕ್ಸಿಂಗ್‌ ಎಂಬುದು ಅತ್ಯಂತ ಸುಲಭದ ಕೆಲಸ ಎಂದು ಭೂಗತ ಪಾತಕಿಗಳ ಕುರಿತು ಪ್ರಕಟವಾದ ಪುಸ್ತಕವೊಂದರಲ್ಲಿ ವಿವರಿಸಲಾಗಿದೆ. ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಯಾರನ್ನೂ ಕೊಲ್ಲಬೇಕಿಲ್ಲ, ಭೂಮಿ ವಶಪಡಿಸಿಕೊಳ್ಳುವುದು, ಸ್ಲಂ ಅನ್ನು ಬಲವಂತವಾಗಿ ಒಕ್ಕಲೆಬ್ಬಿಸುವಂಥ ಕೆಲಸಗಳು ಇರುವುದಿಲ್ಲ. ಕೇವಲ ಕೆಲವೇ ಆಟಗಾರರನ್ನು ಫಿಕ್ಸ್‌ ಮಾಡಿಕೊಂಡು ಅವರಿಗೆ ಹಣ ಸಂದಾಯ ಮಾಡಿದರೆ ಸಾಕು. ಹೀಗಾಗಿ ಇದನ್ನು ವೈಟ್ ಕಾಲರ್‌ ಉದ್ಯೋಗದ ರೀತಿ ದಾವೂದ್‌ ಇಬ್ರಾಹಿಂ ಗ್ಯಾಂಗ್‌ ಭಾವಿಸಿತ್ತು ಎಂದು ಚಂದ್ರಮೋಹನ ಪುಪ್ಪಲ ಬರೆದ ನೋ ಬಾಲ್: ದಿ ಮುರ್ಕಿ ವಲ್ಡ್ರ್ ಆಫ್ ಮ್ಯಾಚ್ ಫಿಕ್ಸಿಂಗ್‌ನಲ್ಲಿ ವಿವರಿಸಲಾಗಿದೆ.

Advertisement

ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ ಆರಂಭವಾಗಿದ್ದೇ ದಾವೂದ್‌ನಿಂದ ಎಂದೂ ಕೃತಿಯಲ್ಲಿ ವಿವರಿಸಲಾಗಿದೆ. ಹಲವು ಮೂಲಗಳನ್ನು ಆಧರಿಸಿ ಭಾರತದ ಕ್ರಿಕೆಟ್‌ನಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್‌ ಹಗರಣದ ಬಗ್ಗೆಯೂ ವಿವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next