Advertisement
ಈ ಸಂಬಂಧ ಕೇಂದ್ರ ಗುಪ್ತಚರ ಸಂಸ್ಥೆಯು ದೇಶಾದ್ಯಂತ ತನಿಖೆಯನ್ನು ತೀವ್ರಗೊಳಿಸಿದೆ. ದಿಲ್ಲಿ, ಹೈದರಾಬಾದ್, ಜೈಪುರ ಮತ್ತು ಜೋಧ್‌ಪುರ ಸಹಿತ ಏಳು ಕಡೆ ಸಿಬಿಐ ತಂಡ ದಾಳಿ ನಡೆಸಿ ಮಾಹಿತಿ ಸಂಗ್ರಹಿಸಿದೆ.
Related Articles
Advertisement
ಪಾಕಿಸ್ಥಾನದಿಂದ ಪಡೆದ ಮಾಹಿತಿಯ ಆಧಾರದಲ್ಲಿ ಈ ಬೆಟ್ಟಿಂಗ್ ಜಾಲವು ಸಾರ್ವಜನಿಕರನ್ನು ಬೆಟ್ಟಿಂಗ್‌ಗೆ ಪ್ರೇರೇಪಿಸುವ ಮೂಲಕ ವಂಚಿಸುತ್ತಿದ್ದವು ಎಂದು ಸಿಬಿಐ ತಿಳಿಸಿದೆ.
ಬೆಟ್ಟಿಂಗ್ ಕಾರ್ಯಾಚರಣೆ ನಡೆಸುವವರು ನಕಲಿ ಗುರುತಿನ ಮೂಲಕ ಬ್ಯಾಂಕ್ ಖಾತೆ ಹೊಂದಿದ್ದಾರೆ ಮತ್ತು ಅಪರಿಚಿತ ಬ್ಯಾಂಕ್ ಅಧಿಕಾರಿಗಳ ಜತೆ ಶಾಮೀಲಾಗಿ ಗ್ರಾಹಕರ ದಾಖಲೆಗಳನ್ನು ತಿಳಿದಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸದ ಕಾರಣ ಬೆಟ್ಟಿಂಗ್ ನಡೆಸುವವರು ನಕಲಿ ದಾಖಲೆಗಳನ್ನು ನೀಡಿ ಖಾತೆ ತೆರೆದಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಬೆಟ್ಟಿಂಗ್ ಚಟುವಟಿಕೆಗಳ ಮೂಲಕ ದೇಶದಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ ಹಣದ ಒಂದು ಭಾಗವನ್ನು ಹವಾಲಾ ವಹಿವಾಟುಗಳನ್ನು ಬಳಸಿಕೊಂಡು ವಿದೇಶದಲ್ಲಿರುವ ಅವರ ಸಹಚರರ ಜತೆ ಹಂಚಿಕೊಳ್ಳಲಾಗುತ್ತದೆ ಎಂದು ಎಫ್ಐಆರ್‌ನಲ್ಲಿ ಆರೋಪಿಸಲಾಗಿದೆ.
ರಾಜಸ್ಥಾನದಲ್ಲಿ ನಡೆದ ಬೆಟ್ಟಿಂಗ್ ದಂಧೆಯಲ್ಲಿ ಬೆಟ್ಟಿಂಗ್ ಜಾಲದವರು ಹವಾಲಾ ವಹಿವಾಟುಗಳನ್ನು ಬಳಸಿಕೊಂಡು ವಿದೇಶದಲ್ಲಿ ನೆಲೆಸಿರುವ ತಮ್ಮ ಸಹಚರರೊಂದಿಗೆ ಬೆಟ್ಟಿಂಗ್ ಚಟುವಟಿಕೆಗಳಿಂದ ಭಾರತದಲ್ಲಿ ಸಾರ್ವಜನಿಕರಿಂದ ಪಡೆದ ಹಣದ ಒಂದು ಭಾಗವನ್ನು ಹಂಚಿಕೊಳ್ಳುತ್ತಿದ್ದಾರೆಂದು ಸಿಬಿಐ ಬಹಿರಂಗಪಡಿಸಿದೆ.
ರಾಜಸ್ಥಾನದಲ್ಲೂ ಬೆಟ್ಟಿಂಗ್ರಾಜಸ್ಥಾನದಲ್ಲಿ ನಡೆದ ಬೆಟ್ಟಿಂಗ್ ಜಾಲದಲ್ಲಿ ಆರೋಪಿಗಳಾದ ಸಿಂಗ್, ಮೀನಾ, ರಾಮ್ ಅವತಾರ್ ಮತ್ತು ಶರ್ಮ ಅವರು ಪಾಕಿಸ್ಥಾನದ ಶಂಕಿತ ಬುಕ್ಕಿಯೊಬ್ಬರ ಜತೆ ಸಂಪರ್ಕದಲ್ಲಿದ್ದರು ಮತ್ತು ಪಾಕಿಸ್ಥಾನಿ ಸಂಖ್ಯೆ +9233222226666 ಮೂಲಕ ಭಾರತದಲ್ಲಿನ ಕೆಲವು ಅಪರಿಚಿತ ವ್ಯಕ್ತಿಗಳನ್ನು ಸಂಪರ್ಕಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಮೇಲಿನ ಆರೋಪಿಗಳು ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ಚಟುವಟಿಕೆಗಳಲ್ಲಿ ತೊಡಗಿರುವ ಜಾಲದ ಭಾಗವಾಗಿದ್ದಾರೆ ಎಂದು ಈ ಮಾಹಿತಿ ಬಹಿರಂಗಪಡಿಸುತ್ತದೆ ಎಂದು ಎಫ್ಐಆರ್‌ನಲ್ಲಿ ಅರೋಪಿಸಲಾಗಿದೆ.