Advertisement

ಮ್ಯಾಚ್‌ ಫಿಕ್ಸಿಂಗ್‌: ತನಿಖಾ ತಂಡ ರಚಿಸಲು ಮುಂದಾದ ಐಸಿಸಿ

03:05 AM Jun 23, 2020 | Sriram |

ದುಬಾೖ: ಭಾರತ- ಶ್ರೀಲಂಕಾ ನಡುವಿನ 2011ರ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯ ಫಿಕ್ಸ್‌ ಆಗಿತ್ತು ಎಂಬ ಲಂಕೆಯ ಅಂದಿನ ಕ್ರೀಡಾ ಸಚಿವ ಮಹಿಂದಾನಂದ ಅಲುತಗಾಮೆ ಅವರ ಸ್ಫೋಟಕ ಹೇಳಿಕೆ ಐಸಿಸಿಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದಕ್ಕಾಗಿ ತನಿಖಾ ತಂಡವೊಂದನ್ನು ರಚಿಸಿ ಅಲುತಗಾಮಗೆ ಅವರ ವಿಚಾರಣೆ ನಡೆಸಲು ಮುಂದಾಗಿದ್ದು, ಶೀಘ್ರದಲ್ಲೇ ಇದರ ವಿವರವನ್ನು ಪ್ರಕಟಿಸಲಿದೆ.

Advertisement

ಈ ಪ್ರಕರಣವನ್ನು ಐಸಿಸಿ ಮತ್ತು ಬಿಸಿಸಿಐ ಸೇರಿಕೊಂಡು ತನಿಖೆ ನಡೆಸಬೇಕು ಎಂದು ಲಂಕೆಯ ಮಾಜಿ ಕ್ರಿಕೆಟಿಗ ಅರವಿಂದ ಡಿ ಸಿಲ್ವ ಆಗ್ರಹಿಸಿದ ಒಂದೇ ದಿನದಲ್ಲಿ ಈ ಬೆಳವಣಿಗೆ ಸಂಭವಿಸಿದೆ.

ಮಹಿಂದಾನಂದ ಅವರನ್ನು ಶ್ರೀಲಂಕಾದಲ್ಲೇ ವಿಚಾರಣೆ ನಡಸುವ ಸಾಧ್ಯತೆ ಇದೆ. ಅವರು ಈವರೆಗೆ ಯಾವುದೇ ಸಾಕ್ಷ್ಯಾಧಾರ ನೀಡಿಲ್ಲ. ಇದನ್ನು ಸಂಗ್ರಹಿಸಿ ತನಿಖೆ ಯನ್ನು ಚುರುಕುಗೊಳಿಸುವುದು ಐಸಿಸಿ ಉದ್ದೇಶವಾಗಿದೆ.

ತಂಡದಲ್ಲಿ ಭಾರೀ ಬದಲಾವಣೆ
ಅಂದು ಮಹಿಂದಾನಂದ ಶ್ರೀಲಂಕಾದ ಕ್ರೀಡಾ ಸಚಿವರಾಗಿದ್ದರು. ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಪಾಲಿಗೆ ಇದು ಕೊನೆಯ ವಿಶ್ವಕಪ್‌ ಟೂರ್ನಿಯಾಗಿತ್ತು. ಗೆದ್ದು ಸಚಿನ್‌ಗೆ ವಿಶ್ವಕಪ್‌ ಅರ್ಪಿಸುವುದು ಭಾರತದ ಗುರಿಯಾಗಿತ್ತು.

ಆದರೆ ಯಾವುದೇ ತಂಡದ ಆಟ ಗಾರರು ಫಿಕ್ಸಿಂಗ್‌ನಲ್ಲಿ ಭಾಗಿಯಾಗಿಲ್ಲ, ಹೊರಗಿನ “ತಂಡಗಳು’ ಪಂದ್ಯವನ್ನು ಫಿಕ್ಸ್‌ ಮಾಡಿವೆ ಎಂಬುದು ಮಹಿಂದಾ ನಂದ ಅವರ ಆರೋಪ. ಅಲ್ಲದೇ ಲಂಕೆಯ ಆಡುವ ಬಳಗದಲ್ಲಿ ಸಂಭವಿಸಿದ ಭಾರೀ ಬದಲಾವಣೆ ಕೂಡ ಅನುಮಾನಕ್ಕೆ ಕಾರಣವಾಗಿದೆ ಎಂದಿದ್ದಾರೆ.

Advertisement

“ಇದು ನಾವು ಅಂತಿಮಗೊಳಿಸಿದ ಆಡುವ ಬಳಗವಾಗಿರಲಿಲ್ಲ. ಕೊನೆ ಕ್ಷಣದಲ್ಲಿ ಇಲ್ಲಿ 4 ಬದಲಾವಣೆ ಸಂಭವಿಸಿತ್ತು. ನನ್ನ ಅಥವಾ ಲಂಕಾ ಕ್ರಿಕೆಟ್‌ ಮಂಡಳಿಯ ಗಮನಕ್ಕೆ ತಾರದೇ ದೊಡ್ಡ ಮಟ್ಟದ ಪರಿ ವರ್ತನೆ ಮಾಡಲಾಗಿತ್ತು. ಇದು ಅನು ಮಾನಕ್ಕೆ ಕಾರಣವಾಗಿದೆ’ ಎಂದು ಮಹಿಂದಾನಂದ ಹೇಳಿರುವುದು ತೀವ್ರ ಕುತೂಹಲ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next