Advertisement
ಮೊಹಾಲಿಯಲ್ಲಿ ನಡೆದ ಮೊದಲ ಸುತ್ತಿನ ಮುಖಾಮುಖೀಯಲ್ಲಿ ಪಂಜಾಬ್ 8 ವಿಕೆಟ್‌ಗಳಿಂದ ರೋಹಿತ್ ಬಳಗವನ್ನು ಮಣಿಸಿತ್ತು. ಮುಂಬೈ 7 ವಿಕೆಟಿಗೆ 176 ರನ್ ಪೇರಿಸಿದರೂ ಪಂಜಾಬ್ 18.4 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 177 ರನ್ ಬಾರಿಸಿ ಗೆದ್ದು ಬಂದಿತ್ತು.
ಪಂಜಾಬ್ ತಂಡದ ದೊಡ್ಡ ಬಲವೆಂದರೆ ಕನ್ನಡಿಗರಾದ ಕೆ.ಎಲ್. ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ಉತ್ತಮ ಫಾರ್ಮ್ನಲ್ಲಿರುವುದು. ಮೊದಲ ಸುತ್ತಿನ ಪಂದ್ಯದಲ್ಲಿ ಇವರಿಬ್ಬರ ಜತೆಗೆ ಗೇಲ್ ಕೂಡ ಅಮೋಘ ಆಟವಾಡಿ ಪಂಜಾಬ್‌ಗ ಭರ್ಜರಿ ಜಯ ತಂದಿತ್ತಿದ್ದರು. ಸೋಮವಾರವಷ್ಟೇ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಮತ್ತು ಅಗರ್ವಾಲ್ ಅರ್ಧ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಂಬೈ ಎದುರಿನ ಮರು ಪಂದ್ಯದಲ್ಲೂ ಇವರ ಆಟ ನಿರ್ಣಾಯಕ. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಮಿಂಚಿದ “ಯುನಿವರ್ಸ್ ಬಾಸ್’ ಗೇಲ್ ಅವರ ಬ್ಯಾಟ್ ಸದ್ದು ಮಾಡದಿರುವುದು ಪಂಜಾಬ್‌ಗ ಕೊಂಚ ಹಿನ್ನಡೆಯಾಗಿದೆ. ಗೇಲ್ ಮತ್ತೆ ಅಬ್ಬರಿಸಿದರೆ ಪಂಜಾಬ್ ದೊಡ್ಡ ಮೊತ್ತ ಕಲೆಹಾಕುವಲ್ಲಿ ಅನುಮಾನವಿಲ್ಲ.
Related Articles
ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳೆರಡರಲ್ಲೂ ಮುಂಬೈ ಈಗ ಚಿಗುರಿಕೊಂಡಿದೆ. ಐದರಲ್ಲಿ 3 ಪಂದ್ಯ ಗೆದ್ದು 5ನೇ ಸ್ಥಾನದಲ್ಲಿದೆ. ಅಲ್ಜಾರಿ ಜೋಸೆಫ್ ಎಂಬ ವೇಗದ ಅಸ್ತ್ರ ಬೌಲಿಂಗ್ ಬತ್ತಳಿಕೆಯನ್ನು ಸೇರಿಕೊಂಡಿರುವುದರಿಂದ ಮುಂಬೈ ಸಾಮರ್ಥ್ಯವನ್ನು ಬೇರೆಯೇ ದೃಷ್ಟಿಯಿಂದ ನೋಡಬೇಕಿದೆ. ಹೈದರಾಬಾದ್ ವಿರುದ್ಧ ಕೇವಲ 136 ರನ್ ಗಳಿಸಿಯೂ ಮುಂಬೈ ಗೆಲ್ಲುವಂತಾದದ್ದು ಜೋಸೆಫ್ ಅವರ ಘಾತಕ ದಾಳಿಯಿಂದ ಎಂಬುದನ್ನು ಮರೆಯುವಂತಿಲ್ಲ. ಐಪಿಎಲ್‌ನ ಪದಾರ್ಪಣ ಪಂದ್ಯದಲ್ಲೇ ಅವರು 12 ರನ್ನಿಗೆ 6 ವಿಕೆಟ್ ಉರುಳಿಸಿ ಇತಿಹಾಸ ಬರೆದರು. ಇವರೊಂದಿಗೆ ಬುಮ್ರಾ, ಬೆಹೆÅಂಡಾಫ್ì, ಪಾಂಡ್ಯಾ ಸಹೋದರರನ್ನು ಒಳಗೊಂಡ ಮುಂಬೈ ಬೌಲಿಂಗ್ ವಿಭಾಗ ಘಾತಕವಾಗಿದೆ.
Advertisement