Advertisement

ನೋಟ್‌ ಬ್ಯಾನ್‌ ಸುತ್ತ ಮಟಾಶ್‌

06:00 AM Dec 07, 2018 | |

    ಈ ಹಿಂದೆ “ಜುಗಾರಿ ಕ್ರಾಸ್‌’, “ಲಾಸ್ಟ್‌ ಬಸ್‌’ನಂತಹ ವಿಭಿನ್ನ ಕಥಾಹಂದರದ ಚಿತ್ರಗಳನ್ನು ತೆರೆಮೇಲೆ ತಂದು ಸೈ ಎನಿಸಿಕೊಂಡಿದ್ದ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ ಎಸ್‌.ಡಿ ಅರವಿಂದ್‌ ಈ ಬಾರಿ “ಮಟಾಶ್‌’ ಎಂಬ ಮತ್ತೂಂದು ಅಂಥದ್ದೇ ಚಿತ್ರವನ್ನು ಪ್ರೇಕ್ಷಕರ ಮುಂದಿಡುತ್ತಿದ್ದಾರೆ. 

Advertisement

2016ರ ನವೆಂಬರ್‌ 8ರಂದು ಆದ ಐನೂರು ಮತ್ತು ಒಂದು ಸಾವಿರ ನೋಟುಗಳ ಅಮಾನ್ಯಿಕರಣ. ಆನಂತರ ನಡೆದ ಬೆಳವಣಿಗೆಗಳು, ಅದರಿಂದಾದ ಜನ ಸಾಮಾನ್ಯರಿಗಾದ ಉಪಯೋಗ ಮತ್ತು ಸಂಕಷ್ಟಗಳ ಸುತ್ತ ಮಟಾಶ್‌ ಚಿತ್ರದ ಕಥೆ ನಡೆಯಲಿದೆ. “ಮಟಾಶ್‌’ ಚಿತ್ರಕ್ಕೆ ಎಸ್‌.ಡಿ ಅರವಿಂದ್‌ ನಿರ್ದೇಶನದ ಜೊತೆಗೆ ಸಂಗೀತ ಸಂಯೋಜನೆ ಮತ್ತು ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. 

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಎಸ್‌.ಡಿ ಅರವಿಂದ್‌, “ಮಟಾಶ್‌ ಚಿತ್ರದಲ್ಲಿ ಡಿಮಾನಿಟೈಸೇಷನ್‌ ಸರಿಯೋ, ತಪ್ಪೋ ಎಂಬ ಸಂಗತಿಗಳನ್ನು ಎಲ್ಲಿಯೂ ಚರ್ಚಿಸಿಲ್ಲ. ಆದರೆ ನೋಟ್‌ಬ್ಯಾನ್‌ ಆದ ಸಂದರ್ಭದಲ್ಲಿ ಏನೇನು ಘಟನೆಗಳು ನಡೆದವು, ನಾವು-ನೀವು ಕಣ್ಣಾರೆ ಏನೇನು ನೋಡಿದ್ದೇವು, ಕೇಳಿದ್ದೆವೋ, ಅಂತಹ ಹಲವು ಸಂಗತಿಗಳನ್ನು ಇಟ್ಟುಕೊಂಡು ಈ ಚಿತ್ರದಲ್ಲಿ ಅವುಗಳನ್ನು ಕಟ್ಟಿಕೊಟ್ಟಿದ್ದೇವೆ. ಚಿತ್ರವನ್ನು ಮನರಂಜನಾತ್ಮಕವಾಗಿ ಹೇಳಿದ್ದು, ನೋಡುವ ಪ್ರೇಕ್ಷಕರಿಗೆ ಮಟಾಶ್‌ ಹೊಸಥರದ ಅನುಭವ ನೀಡಲಿದೆ’ ಎನ್ನುತ್ತಾರೆ. 

“ಮಟಾಶ್‌’ ಚಿತ್ರವನ್ನು ಇತ್ತೀಚೆಗೆ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಚಿತ್ರದ ಯಾವುದೇ ದೃಶ್ಯಗಳಿಗೆ ಕಟ್‌ ಅಥವಾ ಮ್ಯೂಟ್‌ ಇಲ್ಲದೆ “ಯು/ಎ’ ಪ್ರಮಾಣ ಪತ್ರ ಕೊಟ್ಟಿದೆ. ಸದ್ಯ, ಚಿತ್ರದ ಟೀಸರ್‌ ಮತ್ತು ಲಿರಿಕಲ್‌ ಹಾಡುಗಳು ಬಿಡುಗಡೆಯಾಗಿದ್ದು, ಪ್ರೇಕ್ಷಕರನ್ನ ಆಕರ್ಷಿಸುತ್ತಿದೆ. ಅದರಲ್ಲೂ ನಟ ಪುನೀತ್‌ ರಾಜಕುಮಾರ್‌ ಹಾಡಿರುವ ಉತ್ತರ ಕರ್ನಾಟಕ ಶೈಲಿಯ “ಚವಳಿಕಾಯಿ…’ ಹಾಡು ಸಖತ್‌ ಸದ್ದು ಮಾಡುತ್ತಿದೆ. ಅದರ ಜೊತೆಗೇ, “ನಮೋ ವೆಂಕಟೇಶಾ…’ ಹಾಗೂ “ವಾಟ್‌ ಎ ಟ್ರಾÂಜಿಡಿ…’ ಹಾಡುಗಳು ಕೂಡ ಕೇಳುಗರ ಗಮನ ಸೆಳೆದಿವೆ. ಚಿತ್ರದ ಟೈಟಲ್‌ ಮತ್ತು ಹಾಡುಗಳನ್ನು ಕೇಳಿದವರು, ಟ್ರೇಲರ್‌ನ್ನು ನೋಡಿದವರು ಸೋಷಿಯಲ್‌ ಮೀಡಿಯಾಗಳಲ್ಲಿ ಚಿತ್ರದ ಬಗ್ಗೆ ಸಾಕಷ್ಟು ಮೆಚ್ಚುಗೆಯ ಅಭಿಪ್ರಾಯಗಳು ವ್ಯಕ್ತಪಡಿಸುತ್ತಿದ್ದಾರೆ. ಅವರ ನಿರೀಕ್ಷೆಯನ್ನು ಹುಸಿ ಮಾಡದೆ “ಮಟಾಶ್‌’ ಚಿತ್ರವನ್ನು ಈ ವಾರ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ ಎನ್ನುತ್ತಾರೆ ನಿರ್ದೇಶಕ ಎಸ್‌.ಡಿ ಅರವಿಂದ್‌. 

ಇನ್ನುಳಿದಂತೆ ಸಮರ್ಥ ನರಸಿಂಹ ರಾಜು, ಐಶ್ವರ್ಯ ಸಿಂಧೋಗಿ, ರಜನಿ ಭಾರಧ್ವಾಜ್‌, ರೂಪ ಶ್ರೀಧರ್‌ ಸೇರಿದಂತೆ ಹಲವರು ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅರವಿಂದ್‌ ನರಸಿಂಹರಾಜು ಚಿತ್ರದ ಕಲಾ ನಿರ್ದೇಶನ ಮಾಡಿದ್ದಾರೆ. “ಗೋಲ್ಸ… ಆ್ಯಂಡ್‌ ಡ್ರೀಮ್ಸ…’, “ಕ್ರೋಮ್ಸ… ಆ್ಯಂಡ್‌ ಬಲ್ಮಾನಿ’ ಬ್ಯಾನರ್‌ ಅಡಿ ಸತೀಶ್‌ ಪಾಠಕ್‌, ಗಿರೀಶ್‌ ಪಟೇಲ…, ಚಂದ್ರಶೇಖರ್‌ ಮನೂರ್‌, ಎಸ್‌.ಡಿ ಅರವಿಂದ್‌, ಆನಂದ್‌ ಚಿಟ್ಟವಾಡಗಿ, ರೂಪಾ ಬಡಿಗೇರ್‌, ಉಮೇಶ್‌ ಸುರೇಬಾನ್‌ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸಿದ್ದಾರೆ. ಒಟ್ಟಾರೆ ಮನರಂಜನೆ ಜೊತೆಗೆ ಒಂದು ಹದವಾದ ಸಂದೇಶವನ್ನು ಹೊತ್ತು ಬರುತ್ತಿರುವ “ಮಟಾಶ್‌’ ಎಷ್ಟರ ಮಟ್ಟಿಗೆ ಪ್ರೇಕ್ಷಕ ಪ್ರಭುಗಳಿಗೆ ಇಷ್ಟವಾಗುತ್ತದೆ ಅನ್ನೋದು ಇದೇ ವಾರಾಂತ್ಯಕ್ಕೆ ಗೊತ್ತಾಗಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next