Advertisement

“ಮಾತಾಜಿ ಸಮಾಜ ಸೇವೆ ಪ್ರತಿ ಮಹಿಳೆಗೂ ಚೈತನ್ಯ’

12:06 AM Apr 30, 2019 | sudhir |

ಕಾಸರಗೋಡು: “ಅಮ್ಮ’ ಎಂಬ ಸಂಕಲ್ಪವನ್ನು ಸಾಕ್ಷಾತ್ಕರಿಸುವ ಮಾತಾ ಅಮೃತಾನಂದಮಯಿ ಅವರ ಸಮಾಜ ಸೇವೆ ಪ್ರತೀಯೊಬ್ಬ ಮಹಿಳೆಗೂ ಚೈತನ್ಯವನ್ನು ತುಂಬುತ್ತದೆ ಎಂದು ಚಲನಚಿತ್ರ ನಿರ್ದೇಶಕ ಮೇಜರ್‌ ರವಿ ಹೇಳಿದರು.

Advertisement

ಕಾಸರಗೋಡು ನಗರದ ತಾಳಿಪಾಡು³ ಮೈದಾನದಲ್ಲಿ ನಡೆದ “ಅಮೃತಶ್ರೀ ಸಂಗಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು ಕಾರ್ಯಕ್ರಮವನ್ನು ಉದ್ಘಾ ಟಿಸಿದರು.

458 ಅಮೃತಶ್ರೀ ಸ್ವಸಹಾಯ ಸಂಘಟನೆಗಳ ಕಾರ್ಯ ಚಟುವಟಿಕೆಗಳಿಗೆ ಮೂಲಧನ ಮೊತ್ತ ಮತ್ತು ಹೊಸ ಬಟ್ಟೆಯನ್ನು ವಿತರಿಸಲಾಯಿತು.

ಮಾತಾ ಅಮೃತಾ ನಂದಮಯಿ ಮಠ ಕಣ್ಣೂರು ಮಠಾಧಿಪತಿ ಸ್ವಾಮಿ ಅಮೃತಾ ಕೃಪಾನಂದಪುರಿ, ಶಾಸಕ ಎನ್‌.ಎ.ನೆಲ್ಲಿಕುನ್ನು, ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು, ನಗರಸಭಾ ಪ್ರತಿಪಕ್ಷ ನೇತಾರ ಪಿ.ರಮೇಶ್‌, ಬ್ರಹ್ಮಚಾರಿ ಪ್ರಜಿತ್‌, ಅಮೃತಶ್ರೀ ಚೀಫ್‌ ಕೋಆರ್ಡಿನೇಟರ್‌ ಆರ್‌.ರಂಗನಾಥನ್‌, ಅಮೃತಶ್ರೀ ಜಿಲ್ಲಾ ಕೋರ್ಡಿನೇಟರ್‌ ಜಯಶ್ರೀ ಮೊದಲಾದವರು ಮಾತ ನಾಡಿದರು.

Advertisement

ಸೊÌàದ್ಯೋಗ ಕಂಡು ಕೊಳ್ಳಲು ಮಹಿಳೆಯರಿಗೆ ಸಾಧ್ಯವಾಗಬೇಕು ಎಂಬ ಗುರಿಯೊಂದಿಗೆ 20 ಮಂದಿಯ ತಂಡಗಳಿಗೆ ಪ್ರತೀ ವರ್ಷ 30 ಸಾವಿರ ರೂ. ಚಟುವಟಿಕೆ ಮೂಲ ಧನವನ್ನಾಗಿ ನೀಡ ಲಾಗುತ್ತಿದೆ. ಅಲ್ಲದೆ ಹೊಸ ಬಟ್ಟೆ ವಿತರಿಸಲಾಗುತ್ತಿದೆ ಹಾಗೂ ಇತರ ನೆರವನ್ನು ನೀಡಲಾ ಗುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ 15 ಸಾವಿರದಷ್ಟು ಸದಸ್ಯರಿದ್ದಾರೆ. ಕಾಸರಗೋಡು ಜಿಲ್ಲೆಯ ವಿವಿಧ ಪ್ರದೇಶಗಳಿಂದ ಸಾವಿರಾರು ಮಹಿಳೆಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next