Advertisement

ಮಾತಾ ಡೆವಲಪರ್: ಮಜಿ ಶಾಲೆ ದತ್ತು ಸ್ವೀಕಾರ

09:43 AM Oct 31, 2017 | |

ಮಂಗಳೂರು: ಎಂಜಿನಿಯರ್‌ ಸಂತೋಷ್‌ ಕುಮಾರ್‌ ಶೆಟ್ಟಿ ಸುರತ್ಕಲ್‌ ಮಾಲಕತ್ವದ ಮಾತಾ ಡೆವಲಪರ್ ಮತ್ತು ದುರ್ಗಾಂಬಾ ಕನ್‌ಸ್ಟ್ರಕ್ಷನ್ಸ್‌ ಸಂಸ್ಥೆಯು ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಮಜಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಿದೆ. 96 ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಸೇವೆ ಒದಗಿಸುವ ಜವಾಬ್ದಾರಿಯನ್ನು ಸಂಸ್ಥೆ ವಹಿಸಿಕೊಂಡಿದೆ.

Advertisement

ಸಂಸ್ಥೆಯ ಕೊಡುಗೆಗಳು
ದಕ್ಷಿಣ ಕನ್ನಡ ಜಿಲ್ಲೆಯನ್ನು ಬಯಲು ಶೌಚ ಮುಕ್ತಗೊಳಿಸುವ ನಿಟ್ಟಿನಲ್ಲಿ ಸಂಸದರ ಆದರ್ಶ ಗ್ರಾಮವಾದ ಸುಳ್ಯ ತಾಲೂಕಿನ ಬಳ್ಪ ಗ್ರಾಮದಲ್ಲಿ 10 ಶೌಚಾಲಯ, ಮಂಗಳೂರು ತಾಲೂಕು ಕಿನ್ನಿಗೋಳಿ-ಪದ್ಮನ್ನೂರಿನಲ್ಲಿ ಹಕ್ಕುಪತ್ರ ಇಲ್ಲದ 30 ವಸತಿಗಳಿಗೆ ಶೌಚಾಲಯ ಸೇರಿದಂತೆ ಅನೇಕ ಕಡೆ ಶೌಚಾಲಯ ನಿರ್ಮಿಸಿಕೊಟ್ಟಿದೆ.

ಮಾತಾ ಡೆವಲಪರ್ ಸಂಸ್ಥೆಯು ಹಳೆಯಂಗಡಿ ಗ್ರಾ.ಪಂ.ಗೆ ಕಚೇರಿ ಕಟ್ಟಡವನ್ನು ಕೊಡುಗೆಯಾಗಿ ನಿರ್ಮಿಸಿ ಕೊಟ್ಟಿದೆ. ಯಕ್ಷಗಾನ ಕಲಾವಿದರಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಮೂಲಕ ಯಕ್ಷಾಶ್ರಯ 100 ಮನೆ ಯೋಜನೆಯಲ್ಲಿ ಪ್ರಥಮ ಮನೆ ಕೊಡುಗೆಯಾಗಿ ನೀಡಿದ್ದು, ಮೂಲ್ಕಿ ಮೂಡಬಿದಿರೆ ಮತ್ತು ಸುರತ್ಕಲ್‌ ಪರಿಸರದಲ್ಲಿ ರಸ್ತೆ ನಿರ್ಮಾಣ ಹಾಗೂ ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಆರೋಗ್ಯ ವಿಮೆ ಒದಗಿಸಿದೆ.

“ಎಲ್ಲರಿಗೂ ಮನೆ’
ಮಾತಾ ಡೆವಲಪರ್ ಸಂಸ್ಥೆಯು 18 ವರ್ಷಗಳಿಂದ ಮಂಗಳೂರು ಹಾಗೂ ಉಡುಪಿಯಲ್ಲಿ “ಎಲ್ಲರಿಗೂ ಮನೆ’ ಎಂಬ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲ ವರ್ಗದವರಿಗೆ ಕೈಗೆಟಕುವ ರೀತಿಯಲ್ಲಿ 15 ಲಕ್ಷ ರೂ. ಗಳಿಂದ 50 ಲಕ್ಷ ರೂ. ವರೆಗಿನ ದರಗಳಲ್ಲಿ ಮನೆಗಳು ಲಭ್ಯವಿವೆ.

ಈಗಿನ ಪ್ರಾಜೆಕ್ಟ್ಗಳು
ಮಂಗಳೂರಿನ ಮೇರಿಹಿಲ್‌, ಸುರತ್ಕಲ್‌ನಲ್ಲಿ 7 ವಸತಿ ಸಮುಚ್ಚಯಗಳು, ಮುಕ್ಕ ಶ್ರೀನಿವಾಸ ಇನ್‌ಸ್ಟಿಟಿಟ್ಯೂಶನ್‌ ಸಮೀಪ 4 ಪ್ರಾಜೆಕ್ಟ್ಗಳು, ಹಳೆಯಂಗಡಿ, ಮೂಲ್ಕಿ ಸಮೀಪ 2, ಪಡುಬಿದ್ರಿಯಲ್ಲಿ 3 ಪ್ರಾಜೆಕ್ಟ್ಗಳು ಪ್ರಗತಿಯಲ್ಲಿವೆ. 24 ಗಂಟೆ ನೀರು, ವಿದ್ಯುತ್‌, ಲಿಫ್ಟ್‌ ಸೌಲಭ್ಯ, ವಿಶಾಲ ಪಾರ್ಕಿಂಗ್‌, ಸಮೀಪದಲ್ಲಿ ಶಾಲೆ, ಕಾಲೇಜು, ಮಾರ್ಕೆಟ್‌, ರೈಲು ನಿಲ್ದಾಣ ಹಾಗೂ ಉತ್ತಮ ಗಾಳಿ, ಬೆಳಕು ವ್ಯವಸ್ಥೆ ಇದೆ. ಅನುಭವೀ ಎಂಜಿನಿಯರ್‌ಗಳಿಂದ ವಾಸ್ತು ಪ್ರಕಾರ ನಿರ್ಮಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌: www.mathadevelopers.com ನಿಂದ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next