Advertisement
ಪ್ರಸಿದ್ಧ ಸಾಹಿತಿ ಜಿ.ಪಿ.ರಾಜರತ್ನಂ (5.12.1908- 13.3.1979) ಇಂದಿಗೂ ಜನಮಾನಸದಲ್ಲಿದ್ದಾರೆ.ಇಂತಹ ಮಹಾನ್ ಕೃತಿಕಾರ ಹೇಗೆ ರೂಪುಗೊಂಡರು ಎಂಬುದು ಕುತೂಹಲಕರ. ಮೂಲತಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯವರು. ಪೂರ್ವಜರು ತಮಿಳುನಾಡಿನಿಂದ ಬಂದವರು. ಮನೆತನದ ಹೆಸರು ಗುಂಡ್ಲು ಪಂಡಿತ (ಜಿ.ಪಿ.). 1931ರಲ್ಲಿ ಎಂಎ ಕನ್ನಡ ಪಾಸಾಗಿ ತಂದೆಯ ಶಾಲೆಯಲ್ಲಿ ತಂದೆ ರಜೆ ಇರುವಾಗ ಎರಡನೆಯ ತರಗತಿಗೆ ಶಿಕ್ಷಕರಾದರು. ತರಗತಿಯ ಪಾಠದ ಕಷ್ಟ ನೋಡಿದ ಪರಿಣಾಮವೇ
Related Articles
Advertisement
ಭಾಷಾಂತರ ಕೆಲಸ ತಿಳಿದು ಹೆಸರಾಂತ ಸಾಹಿತಿ, ಪ್ರಾಧ್ಯಾಪಕ ಪ್ರೊ|ಎ.ಆರ್.ಕೃಷ್ಣಶಾಸಿŒಯವರು ಬೆಂಗಳೂರಿನಲ್ಲಿ ಕನ್ನಡ
ಸಂಘದಿಂದ ಹೊರತರುತ್ತಿದ್ದ “ಪ್ರಬುದ್ಧ ಕರ್ನಾಟಕ’ ತ್ತೈಮಾಸಿಕದಲ್ಲಿ ಸರಣಿ ರೂಪದಲ್ಲಿ ಪ್ರಕಟಿಸಿದರು. ಪ್ರಕಟನೆಗಾಗಿ ಸಿಕ್ಕಿದ 150 ರೂ.ವನ್ನು ಮಾಸ್ತಿಯವರಿಗೆ ನೀಡಲು ರಾಜರತ್ನಂ ಮುಂದಾದರು. “ನಾನು ಕೊಟ್ಟದ್ದು ಸಂಬಳವಲ್ಲ, ಮಾಸಾಶನ. ಈ ಹಣ ನೀವು ಸಂಪಾದಿಸಿದ್ದು ಎಂದು ಇಟ್ಟುಕೊಳ್ಳಿ. ಕೆಲಸವನ್ನು ಇನ್ನಷ್ಟು ದಿನ ಮಾಡಿ. ನಾನು ತಿಂಗಳೂ 25 ರೂ. ಕೊಡುತ್ತೇನೆ’ ಎಂದು ಮಾಸ್ತಿ ಹೇಳಿದರು. ಮತ್ತೆ ರಾಜರತ್ನಂ ಬರಲಿಲ್ಲ. “ಕೃಷ್ಣಶಾಸಿŒಗಳು ಕೊಟ್ಟ ಕಾಸು ಕೈಯಲ್ಲಿದೆ. ಜೀವನ ನಡೆಯುತ್ತಿದೆ. ಕಾಸು ಬೇಕಾದಾಗ ಬರುತ್ತೇನೆ’ ಎಂದು ಯಾವತ್ತೋ ಸಿಕ್ಕಿದಾಗ ಮಾಸ್ತಿಯವರಿಗೆ ರಾಜರತ್ನಂ ಹೇಳಿದರಂತೆ.
ರಾಜರತ್ನಂರಿಗೆ 1969ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1970ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1977ರಲ್ಲಿ ಮೈಸೂರು ವಿ.ವಿ. ಡಾಕ್ಟರೇಟ್ ಪದವಿ, ಕಾರ್ಕಳದಲ್ಲಿ ನಡೆದ ದ.ಕ. ಜಿಲ್ಲಾ, ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನ (1976), ದಿಲ್ಲಿಯಲ್ಲಿ ನಡೆದ ಅ.ಭಾ. ಕನ್ನಡ (ಸುವರ್ಣ ಸಮ್ಮೇಳನ) ಸಾಹಿತ್ಯ ಸಮ್ಮೇಳನದ (1978)ಅಧ್ಯಕ್ಷತೆ ಗೌರವ ದೊರಕಿತು.”ರಾಜರತ್ನಂ ಪಾಲಿ ಭಾಷೆಯನ್ನು ಕಲಿತು ಬೌದ್ಧ, ಜೈನಸಾಹಿತ್ಯದಲ್ಲಿ ಪ್ರಕಾಂಡ ಪಂಡಿತರಾದರು. ಇವರ ಮನಸ್ಸನ್ನುಈ ಕೆಲಸದತ್ತ ಮೊದಲು ತಿರುಗಿಸಿದ ಭಾಗ್ಯ ನನ್ನದು ಎನ್ನುವುದು ಈಗಲೂ ನನಗೆ ಸಂತೋಷದ ಸಂಗತಿಯಾಗಿದೆ’ ಎಂದು ಮಾಸ್ತಿಯವರು ಇಳಿವಯಸ್ಸಿನಲ್ಲಿ ಬರೆದ “ಭಾವ-2′ ಸಂಪುಟದಲ್ಲಿ ಹೇಳಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ದಿನದ ಕೊನೆಯಲ್ಲಿ ಈ ಆತ್ಮಸಂತೃಪ್ತ ಭಾವ ಬರಬೇಕು. ಇದನ್ನು “ಎಟ್ ದಿ ಎಂಡ್ ಆಫ್ ದಿ ಡೇ…’ ಎನ್ನುತ್ತಾರೆ, ಈ ಎಲ್ಲ “ಎಂಡ್ ಆಫ್ ದಿ ಡೇ’ ಸೇರಿ “ಎಟ್ ದಿ ಎಂಡ್ ಆಫ್ ದಿ ಲೈಫ್…’ ಆಗುತ್ತದೆ…
****
ಬಹುತೇಕ ಎಲ್ಲರೂ ಕಲಿತು ಹೊರಬರುವಾಗ ರಾಜರತ್ನಂ ಆಗಿರುತ್ತಾರೆ. ಬೇರೆ ಪ್ರಾಣಿ ಸಂಕುಲಗಳಿಗೆ ಹೋಲಿಸಿದರೆ ಮನುಷ್ಯ ಹುಟ್ಟುವಾಗ ಅಷ್ಟೂ ದುರ್ಬಲ, ಒಂದು ಮಾಂಸದ ಮುದ್ದೆ ಮಾತ್ರ. ಹಸು, ಪಕ್ಷಿಇನ್ಯಾವುದೇ ಪ್ರಾಣಿಗಳು ಹುಟ್ಟಿದ ತತ್‌ಕ್ಷಣ ತನ್ನ ಸಹಜ ಚಟು
ವಟಿಕೆಗಳನ್ನು ಆರಂಭಿಸುತ್ತವೆ. ಮನುಷ್ಯನಿಗೆ ಮಾತ್ರ ಕನಿಷ್ಠ ಒಂದೂವರೆ ವರ್ಷ ತಾಯಿ ಆರೈಕೆ ಬೇಕು. ಬಳಿಕ ತಂದೆ, ಬಂಧುಗಳು, ಶಿಕ್ಷಕರು, ಒಟ್ಟಾರೆ ಸಮಾಜದಿಂದ ಬೆಳೆಯುತ್ತಾನೆ/ಳೆ. ಬೆಳೆದ ಅನಂತರ ಎಲ್ಲ ಪ್ರಾಣಿಗಳನ್ನು ಮೀರಿಸುವ ಕಾಮ (ದುರಾಸೆ), ಕ್ರೋಧ, ಮದ, ಮೋಹ, ಮತ್ಸರ (ಹೊಟ್ಟೆಕಿಚ್ಚು), ಲೋಭ ಈ ಷಡ್ವರ್ಗ ಹೊಂದುತ್ತಾನೆ/ಳೆ. ಪ್ರಾಣಿಗಳಲ್ಲಿ ಇವು ಸೀಮಿತವಾಗಿರುತ್ತವೆ. ಉದಾಹರಣೆಗೆ ನೈಸರ್ಗಿಕ ಕಾಮ-ಹಸಿವು-ಬಾಯಾರಿಕೆ ಮಾತ್ರ. ಕಲಿತ ಬಳಿಕವೂ ವ್ಯಾವಹಾರಿಕ ಲೋಕದಲ್ಲಿ ಮಗು ಇದ್ದಂತೆಯೇ. ಮೊತ್ತ ಮೊದಲ ಬಾರಿ ಮೆಟ್ರೋ ನಗರಗಳಿಗೆ ಹೋಗಿ ಬೆಳಗ್ಗೆ ಬಸ್ -ರೈಲ್ವೇ ನಿಲ್ದಾಣದಲ್ಲಿಳಿದಾಗ ಏನನ್ನಿಸುತ್ತದೋ ಕಲಿತಬಳಿಕ ವ್ಯಾವಹಾರಿಕ ಲೋಕವೂ ಹಾಗೆಯೇ. ಅಂತಹ ಮಗುವಾಗಿದ್ದ ರಾಜರತ್ನಂರಿಗೆ ಮಾಸ್ತಿಯವರು ನೀಡಿದ ಆರೈಕೆ
ಯನ್ನು ಎಲ್ಲ ದೊಡ್ಡ ಅಧಿಕಾರಸ್ಥರು ಮಾಡಬೇಕಾಗಿದೆ. ಮಾಸ್ತಿಯವರು ರಾಜರತ್ನಂ ಅವರಿಗೆ ಮಾತ್ರವಲ್ಲ, ದ.ರಾ.ಬೇಂದ್ರೆಯವರಿಗೂ ಕಷ್ಟದ ಕಾಲದಲ್ಲಿ ನೆರವಾಗಿದ್ದರು. ಮಾಸ್ತಿ ಪ್ರಶಸ್ತಿಯ ಪೂರ್ವದ ಕತೆಯೂ ಇಂಥದ್ದೆ. ಕಷ್ಟದಲ್ಲಿರುವ ಬರೆಹಗಾರರಿಗೆ ನೆರವಾಗಬೇಕೆಂದು ಸ್ವತಃ ಅವರು ಆಸಕ್ತಿ ವಹಿಸಿ ಮನೆಗಳಿಗೆ ಹೋಗಿ ಕೊಟ್ಟಿದ್ದರು. ಯಾರೋ ಒಬ್ಬನಿಂದ ಭಾರತ
ಮಹಾನ್ ಆಗದು, ಅಲ್ಲಲ್ಲಿ ವಿಶಾಲ ಹೃದಯಿಗಳು ಬೇಕು. ತಂತಾನೆ ಹೃದಯಗಳು ವಿಶಾಲವಾಗದು, ತಮ್ಮನ್ನು ತಾವೇ ಅರಳಿಸಿಕೊಳ್ಳಬೇಕು.
-ಮಟಪಾಡಿ ಕುಮಾರಸ್ವಾಮಿ