ಬ್ರೆಜಿಲಿಯಾ: ನಗದು ಪಾವತಿ ಹಿಂದಿನದ್ದು, ಡಿಜಿಟಲ್ ಪಾವತಿ ಈಗಿನದ್ದು… ಆದರೆ ಇನ್ನುಮುಂದೆ ನಾವು ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಲಿದ್ದೇವೆ ಎನ್ನುತ್ತಿದೆ ಮಾಸ್ಟರ್‌ಕಾರ್ಡ್ ಸಂಸ್ಥೆ.
ಅವರ ಹೊಸ ತಂತ್ರಜ್ಞಾನ ಬಳಸಿ ಒಂದೇ ನಗುವಿನ ಮೂಲಕ ನೀವು ಹಣ ಪಾವತಿ ಮಾಡಬಹುದು!
ಮಾಸ್ಟರ್‌ಕಾರ್ಡ್ ಸಂಸ್ಥೆಯು ಇಂತದ್ದೊಂದು ಕುತೂಹಲಕಾರಿ ವಿಚಾರವನ್ನು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಹೇಳಿದೆ. ಸಂಸ್ಥೆಯು ಗ್ರಾಹಕರ ನಗು ಮತ್ತು ಅವರ ಕೈ ಮೂಲಕವೇ ಪಾವತಿಗೆ ಅವಕಾಶ ಮಾಡಿಕೊಡಲು ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದೆ.
ಈಗಾಗಲೇ ಬ್ರೆಜಿಲ್‌ನ ಸಾವೊ ಪಾಲೊ ನಗರದ 5 ಸೂಪರ್ ಮಾರ್ಕೆಟ್‌ಗಳಲ್ಲಿ ಈ ವಿಶೇಷ ತಂತ್ರಜ್ಞಾವನ್ನು ಅಳವಡಿಸಿಕೊಳ್ಳಲಾಗಿದೆ.
ಅದರ ಮೂಲಕ ಗ್ರಾಹಕರು ತಾವು ಕೊಂಡ ಸಾಮಾಗ್ರಿಯ ರಶೀದಿ ಪರಿಶೀಲಿಸಿದ ನಂತರ ಸೂಪರ್‌ಮಾರ್ಕೆಟ್‌ನಲ್ಲಿ ಅಳವಡಿಸಲಾಗಿರುವ ಕ್ಯಾಮರಾ ಮುಂದೆ ಒಂದು ನಗು ಬೀರಬಹುದು ಅಥವಾ ಅಲ್ಲೇ ಇರುವ ರೀಡರ್ ಎದುರು ಕೈಯನ್ನು ಒಮ್ಮೆ ಬೀಸಿದರೆ ಸಾಕು. ನಿಮ್ಮ ರಶೀದಿಯಲ್ಲಿರುವಷ್ಟು ಹಣ ನೇರವಾಗಿ ಮಾರ್ಕೆಟ್‌ನ ಖಾತೆಗೆ ವರ್ಗಾವಣೆ ಆಗುತ್ತದೆ.
ಇದನ್ನೂ ಓದಿ:ಆರೂವರೆ ವರ್ಷಗಳ ನಂತರ ಜೈಲಿನಿಂದ ಹೊರಬಂದ ಇಂದ್ರಾಣಿ ಮುಖರ್ಜಿ
ನೋಂದಣಿ ಬೇಕು:
ಅಂದ ಹಾಗೆ ಈ ರೀತಿ ಪಾವತಿಗೂ ಮೊದಲು ನೀವು ನಿಮ್ಮ ಮುಖ ಚಹರೆ ಮತ್ತು ಪಾವತಿ ಮಾಹಿತಿಯನ್ನು ಪೇಫೇಸ್ ಆ್ಯಪ್(Payface) ಮೂಲಕ ನೋಂದಣಿ ಮಾಡಿಟ್ಟುಕೊಳ್ಳಬೇಕು. ಈಗ ಸದ್ಯಕ್ಕೆ ಐದೇ ಸೂಪರ್‌ಮಾರ್ಕೆಟ್‌ಗಳಲ್ಲಿ ಆರಂಭವಾಗಿರುವ ಈ ಸೌಲಭ್ಯವನ್ನು ಇನ್ನು ಕೆಲ ಕಾಲದಲ್ಲಿ ಜಾಗತಿಕವಾಗಿ ಎಲ್ಲೆಡೆ ತರುವುದಾಗಿ ಮಾಸ್ಟರ್ ಕಾರ್ಡ್ ಹೇಳಿಕೊಂಡಿದೆ.