Advertisement

ಮಹಾನಗರ ಅಭಿವೃದ್ಧಿಗೆ ದಶಕದ ಮಾಸ್ಟ ರ್‌ ಪ್ಲ್ರಾನ್‌

07:28 PM Jun 09, 2021 | Team Udayavani |

‌ಕಲಬುರಗಿ: ಮುಂದಿನ ಹತ್ತು ವರ್ಷಗಳಲ್ಲಿ ಮಹಾನಗರ ಯಾವ ರೀತಿ ಅಭಿವೃದ್ಧಿ ಹೊಂದಬೇಕು ಹಾಗೂ ಯಾವೆಲ್ಲ ಸಿದ್ಧತೆ ಮಾಡಿಕೊಂಡರೆ ಉತ್ತಮ ಎನ್ನುವ ನಿಟ್ಟಿನಲ್ಲಿ ಸಿಡಿಪಿ ಯೋಜನೆಗೆ ಶುರುವಾಗಿದೆ. ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲಬುರಗಿ ನಗರವನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸುವ ಕುರಿತು ದೂರದೃಷ್ಟಿಯೊಂದಿಗೆ ಸಮಗ್ರ ಮಹಾ ಅಭಿವೃದ್ಧಿ ಯೋಜನೆ ಸಿದ್ಧಪಡಿಸುವ ಕೆಲಸ ನಡೆದಿದೆ.

Advertisement

ಇನ್ನಾರು ತಿಂಗಳಲ್ಲಿ 2021-2031ರ ದಶ ಸಾಲಿನ ಯೋಜನೆ ಹೊರ ಬೀಳಲಿದೆ. 2021-2031ನೇ ಅವಧಿಗೆ ಮುಂದಿನ ಹತ್ತು ವರ್ಷಗಳಿಗಾಗಿ ಸಿಡಿಪಿ ಪರಿಷ್ಕರಿಸ ಲಾಗುತ್ತಿದೆ. ಈಗ ರೂಪಿಸು ತ್ತಿರುವುದು 3ನೇ ಯೋಜನೆ ಯಾಗಿದೆ. ಈಗಾಗಲೇ ಕೇಂದ್ರ ಸರ್ಕಾರವೇ ದೆಹಲಿ ಮೂಲದ ಡಿಡಿಎಫ್ ಎನ್ನುವ ಖಾಸಗಿ ಏಜೆನ್ಸಿಗೆ ಯೋಜನೆ ರೂಪಿಸುವ ಹೊಣೆಯನ್ನು ಟೆಂಡರ್‌ ಮೂಲಕ ವಹಿಸಿಕೊಡಲಾಗಿದೆ.

ಮುಂದಿನ ಆರು ತಿಂಗಳಲ್ಲಿ ಪರಿಷ್ಕೃತ ಸಿಡಿಪಿ ಸಿದ್ಧಪಡಿಸಿ ಸರ್ಕಾರದ ಅನುಮೋದನೆ ಪಡೆದು ಬಿಡುಗಡೆ ಮಾಡಲಾಗುವುದು ಎಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್‌ ಧಾರವಾಡಕರ್‌ ಸುದ್ದಿಗಾರರರಿಗೆ ತಿಳಿಸಿದರು. ದಶಕದ ಹಿಂದೆ 2011-21ರ ದಶಕ ಸಾಲಿನ ಸಿಡಿಪಿ ಯೋಜನೆಯನ್ನು ಈ ಹಿಂದೆ ತಾವು ಅಧ್ಯಕ್ಷರಾಗಿದ್ದ ವೇಳೆಯಲ್ಲಿ ರೂಪಿಸಲಾಗಿತ್ತು. ಈಗ ಪರಿಷ್ಕರಿಸಲಾಗುತ್ತಿದೆ.

ಇದರಿಂದ ನಗರ ಹೇಗೆ ಬೆಳವಣಿಗೆ ಕಾಣಲಿದೆ. ಯಾವ ಪ್ರದೇಶದಲ್ಲಿ ವಸತಿ ಯೋಜನೆ ಕೈಗೆತ್ತಿಕೊಳ್ಳಬೇಕು, ಅಗತ್ಯವಾದಲ್ಲಿ ಪ್ಲೆ„ ಓವರ್‌ ನಿರ್ಮಾಣ, ಸಂಚಾರ ಸಮೀಕ್ಷೆ ಆಧರಿಸಿ ಹೊಸ ಮಾದರಿರಸ್ತೆಗಳ ಅಭಿವೃದ್ಧಿ, ಕೈಗಾರಿಕಾ ಪ್ರದೇಶ ಎಲ್ಲಿ ನಿರ್ಮಿಸಬೇಕು ಎನ್ನುವುದರಿಂದ ಹಿಡಿದು ನಗರದಲ್ಲಿ ರಸ್ತೆಗಳ ಅಗಲೀಕರಣ, ಹೊಸದಾಗಿ ದೊಡ್ಡ ಪ್ರಮಾಣದ ರಸ್ತೆಗಳು, ಒಳಚರಂಡಿ ಇನ್ನಿತರ ಯೋಜನೆಗಳನ್ನು ಹಾಕಿಕೊಳ್ಳುವುದರ ಕುರಿತು ಮುಂದಿನ ದಶಕದ ವಿಸ್ತೃತ ಯೋಜನೆ ಇದಾಗಲಿದೆ.

ಅಮೃತ ಯೋಜನೆಯಡಿ ಪ್ಲ್ಯಾನ್‌ ಸಿದ್ಧಪಡಿಸಲಾಗುತ್ತಿದೆ. ರಾಜ್ಯದ 25 ಪ್ರಾಧಿಕಾರಗಳಲ್ಲಿ ಇಂತಹ ಕೆಲಸ ನಡೆದಿದೆ ಎಂದು ವಿವರಿಸಿದರು. ಮಹಾನಗರ ವೇಗವಾಗಿ ಬೆಳೆಯುತ್ತಿದೆ. ಆದರೆ ರೂಪು ರೇಷೆಗಳೊಂದಿಗೆ ಬೆಳೆದಲ್ಲಿ ಅಭಿವೃದ್ಧಿಗೆ ಪೂರಕವಾಗುತ್ತದೆ. ಅದರಲ್ಲೂ ಸ್ಮಾರ್ಟ್‌ ಸಿಟಿಗೆ ಅನುಕೂಲವಾಗಲಿದೆ.

Advertisement

ಒಟ್ಟಾರೆ ಸಿಡಿಪಿಯು ಮುಂದಿನ ದಶಕಗಳ ನ್ಯೂಟೌನ್‌ ದೂರದೃಷ್ಟಿಯೊಂದಿಗೆ ಹೊಸ ಮಾಸ್ಟರ್‌ ಪ್ಲಾನ್‌ ರೂಪಿಸಲಾಗುವುದು. ಜಿಐಎಸ್‌ ನೆರವಿನೊಂದಿಗೆ ಪ್ಲಾÂನ್‌ ರೂಪಿಸಲಾಗುತ್ತದೆ. ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಾಗುತ್ತದೆ. ಕರೊನಾ ಅಬ್ಬರ ಕಡಿಮೆಯಾಗಿದ್ದರಿಂದ ಶೀಘ್ರದಲ್ಲಿ ಸಿಡಿಪಿ ತಯಾರಿಸುವ ಕೆಲಸ ಶುರುವಾಗಲಿದೆ. ಸಮಗ್ರ ಅಭಿವೃದ್ಧಿ ಯೋಜನಾ ಬದ್ಧವಾಗಿರ ಲಿದೆ. ನಗರದ ಎಲ್ಲ ಗಾರ್ಡನ್‌ಗಳನ್ನು ಅಭಿವೃದ್ಧಿ ಮಾಡಿ ನಿರ್ವಹಣೆಗೆ ವಾರ್ಡ್‌ ವಾರು ಸಮಿತಿ ರಚಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಹೈಟೆಕ್‌ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಟೆಂಡರ್‌: ಎಂಎಸ್‌ಕೆ ಪ್ರದೇಶದಲ್ಲಿರುವ ಕಣ್ಣಿ ಮಾರ್ಕೇಟ್‌ ಸ್ಥಳದಲ್ಲಿ ಹೈಟೆಕ್‌ ತರಕಾರಿ ಮಾರುಕಟ್ಟೆ ನಿರ್ಮಿಸುವ 26 ಕೋಟಿ ರೂ. ಗಳ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಕಾಮಗಾರಿ ಆರಂಭಿಸಲು ಟೆಂಡರ್‌ ಕರೆಯಲಾಗಿದೆ ಎಂದು ಕುಡಾ ಅದ್ಯಕ್ಷ ದಯಾಘನ್‌ ಧಾರವಾಡಕರ್‌, ಆಯುಕ್ತ ಎಂ.ರಾಚಪ್ಪ ತಿಳಿಸಿದರು. ಕೆಪಿಟಿಸಿ ಕಾಯ್ದೆ ಅಡಿಯಲ್ಲಿ ಆನ್‌ ಲೈನ್‌ ಮೂಲಕ ಗ್ಲೋಬಲ್‌ ಟೆಂಡರ್‌ ಆಹ್ವಾನಿಸಲಾಗುವುದು. ಇದರಿಂದ ಹಲವಾರು ಗುತ್ತಿಗೆದಾರರು ಭಾಗಿ ಆಗುವುದರಿಂದ ಅತ್ಯುತ್ತಮ ಕೆಲಸ ಮಾಡುವವರನ್ನು ಆಯ್ಕೆ ಮಾಡಬಹುದು.

ಈ ಭಾಗದಲ್ಲಿಯೇ ಇದೊಂದು ಮಾದರಿ ತರಕಾರಿ ಮಾರುಕಟ್ಟೆ ಆಗಲಿದೆ ಎಂದು ಹೇಳಿದರು. ಎಂಎಸ್‌ಕೆ ಮಿಲ್‌ ಗೇಟ್‌ ಇರುವ ಪ್ರದೇಶವು ಇನ್ನೂ ಎನ್‌ಟಿಸಿ ಅಡಿಯಲ್ಲಿಯೇ ಇದೆ. ಹೀಗಾಗಿ ಅದನ್ನು ಹಾಗೆ ಉಳಿಸಿಕೊಂಡು, ಮುಂದಿನ ದಿನಗಳಲ್ಲಿ ಅನುಮತಿ ಪಡೆದು ದುರಸ್ತಿಗೊಳಿಸುವ ಉದ್ದೇಶವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next