Advertisement

ರಸ್ತೆಗಳ ಪುನರ್‌ ನಿರ್ಮಾಣಕ್ಕೆ ಸೇನೆಯಿಂದ ಮಾಸ್ಟರ್‌ ಪ್ಲಾನ್‌

06:30 AM Aug 28, 2018 | Team Udayavani |

ಮಡಿಕೇರಿ: ಮಹಾಮಳೆ ಮತ್ತು ಗುಡ್ಡ ಕುಸಿತದಿಂದ ಕೊಡಗಿನ ಬಹಳಷ್ಟು ವಿಭಾಗಗಳಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿ ಕುಸಿದು ಹೋಗಿರುವ ರಸ್ತೆ ಹಾಗೂ ಸೇತುವೆಗಳನ್ನು ಪುನರ್‌ ನಿರ್ಮಿಸಿ ಊರಿಂದ ಊರಿಗೆ ಸಂಪರ್ಕ ಕಲ್ಪಿಸಲು ಭಾರತೀಯ ಸೇನೆಯ ನೆರವು ಪಡೆಯುವ ಪ್ರಯತ್ನಗಳು ಸದ್ದುಗದ್ದಲವಿಲ್ಲದೆ ನಡೆಯುತ್ತಿದೆ. 

Advertisement

ಕೊಡಗು ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳು ಸೇರಿ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ 32 ಪಂಚಾಯ್ತಿಗಳ ಹಲವಾರು ಗ್ರಾಮಗಳ ಸಂಪರ್ಕ ರಸ್ತೆಗಳು ಬಹುತೇಕ ಕಡಿತಗೊಂಡಿವೆ.

ಹಲವೆಡೆಗಳಲ್ಲಿ ಸೇತುವೆಗಳು ಭಗ್ನಗೊಂಡು ಗ್ರಾಮಗಳಿಗೆ ತೆರಳಲಾಗದ ಕಠಿಣ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತೀಯ ಸೇನೆಯಲ್ಲಿನ ಸೇವಾನುಭದಲ್ಲಿ ಕಂಡುಕೊಂಡಿರುವ ಜಿಲ್ಲೆಯ ಮಾಜಿ ಸೈನ್ಯಾಧಿಕಾರಿಗಳು, ಸೈನ್ಯದಲ್ಲಿನ ಅಧಿಕಾರಿಗಳೊಂದಿಗಿನ ತಮ್ಮ ಸಂಪರ್ಕವನ್ನು ಬಳಸಿ ಇದೀಗ ಕೊಡಗಿನ ಸಂಪರ್ಕ ರಸ್ತೆಗಳ ಮರು ನಿರ್ಮಾಣಕ್ಕೆ ಸೈನ್ಯ ಮತ್ತು ರಕ್ಷಣಾ ಇಲಾಖೆಯ ತಂತ್ರಜ್ಞರನ್ನು ಬಳಸಿಕೊಳ್ಳುವ ಮಹತ್ವದ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಸಂಪರ್ಕದಲ್ಲೂ ನಿವೃತ್ತ ಸೇನಾಧಿಕಾರಿಗಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next