Advertisement
ಮತದಾನಕ್ಕೆ 3 ದಿನ ಬಾಕಿ ಇರುವಂತೆ ಹದಿನೈದು ಕ್ಷೇತ್ರಗಳಲ್ಲಿನ ಸ್ಥಿತಿಗತಿ ಬಗ್ಗೆ ಚರ್ಚಿಸಿರುವ ಇಬ್ಬರೂನಾಯಕರು, ಅಂತಿಮ ಕಾರ್ಯತಂತ್ರದ ಭಾಗವಾಗಿ ಹತ್ತು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು -ಮುಖಂಡರು ಕೆಲಸ ಮಾಡುವಂತೆ ಪ್ರಮುಖರಿಗೆ ನಿರ್ದೇಶನ ನೀಡಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ. ಅದೇ ರೀತಿ, ಕೆ.ಆರ್.ಪೇಟೆ, ಹುಣಸೂರು, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಮಹಾಲಕ್ಷ್ಮಿಲೇ ಔಟ್, ಯಶವಂತಪುರ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯಕ್ಕೆ ಗುಪ್ತ ಸಂದೇಶ ರವಾನೆಗೂ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಡಿ.ಕೆ.ಶಿವಕುಮಾರ್ ಪ್ರಚಾರದಲ್ಲಿ ತೊಡಗಿದ್ದಾರೆ. ಮುಸ್ಲಿಂ ಮತ ಕ್ರೋಢೀಕರಣಕ್ಕೆ ಜಮೀರ್ ಅಹಮದ್,
ನಸೀರ್ ಅಹಮದ್, ಎನ್.ಎ. ಹ್ಯಾರೀಸ್‌ಗೆ ಹೊಣೆಗಾರಿಕೆ ನೀಡಿದ್ದಾರೆ. ತಮಿಳು ಹಾಗೂ ಕ್ರಿಶ್ಚಿಯನ್ ಮತಗಳನ್ನು ಸೆಳೆಯಲು ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇಲ್ಲಿ ಜೆಡಿಎಸ್ ಅಭ್ಯರ್ಥಿ ಇದ್ದರೂ ಮುಸ್ಲಿಂ ಮತಗಳು ಕಾಂಗ್ರೆಸ್‌ಗೆ ವರ್ಗಾವಣೆಯಾಗುವ ಸಾಧ್ಯತೆಯೇ ಹೆಚ್ಚಾ ಗಿದೆ. ಈ ಮಧ್ಯೆ, ದೇವೇಗೌಡ ಹಾಗೂ ಕುಮಾರಸ್ವಾಮಿಯವರು, ಯಶವಂತಪುರ, ಮಹಾಲಕ್ಷ್ಮಿಲೇ ಔಟ್, ಚಿಕ್ಕಬಳ್ಳಾಪುರ, ಕೆ.ಆರ್.ಪೇಟೆ, ಹುಣಸೂರು ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಅಲ್ಲಿ ಅಭ್ಯರ್ಥಿಗಳು ಕೇಳಿದಾಗಲೆಲ್ಲಾ ಪ್ರಚಾರಕ್ಕೆ ಹೋಗಿ ಸಮುದಾಯದ ಮುಖಂಡರನ್ನು ಕರೆಸಿಕೊಂಡು ಮಾತನಾಡಿದ್ದಾರೆ. ಮಹಾಲಕ್ಷ್ಮಿ ಲೇ ಔಟ್‌ನಲ್ಲಿ ಲಿಂಗಾಯತ ಅಭ್ಯರ್ಥಿ ಗಿರೀಶ್ ಕೆ.ನಾಶಿ ಅವರಿಗೆ ಟಿಕೆಟ್ ನೀಡಿದ್ದೇವೆ. ಅವರಿಗೆ ಒಕ್ಕಲಿಗ ಸಮುದಾಯದ ಬೆಂಬಲ ನೀಡುವ ಮೂಲಕ ನಮ್ಮ ಕೈ ಬಲಪಡಿಸಬೇಕು ಎಂದು, ಯಶವಂತಪುರ ದಲ್ಲಿ ನಮ್ಮ ಪ್ರತಿಷ್ಠೆಯ ಪ್ರಶ್ನೆ ಎಂದು, ಹುಣಸೂರು,
ಕೆ.ಆರ್.ಪೇಟೆ, ಚಿಕ್ಕಬಳ್ಳಾಪುರದಲ್ಲಿ ಪಕ್ಷದ ಅಳಿವು-ಉಳಿವು ಎಂದು ಆಂತರಿಕವಾಗಿ ನಾಯಕರಿಗೆ ಹೇಳಿದ್ದಾರೆ ಎಂದು ಹೇಳಲಾಗಿದೆ.
Related Articles
ಕಾರ್ಯಕರ್ತರು ಹಾಗೂ ಮುಖಂಡರುಗಳಿಗೆ ಸಂದೇಶ ಎಂದು ಹೇಳಲಾಗುತ್ತಿದೆ. ರಹಸ್ಯ ಚರ್ಚೆ
ನಡೆಸುವುದಕ್ಕಿಂತ ಬಹಿರಂಗವಾಗಿಯೇ ಭೇಟಿಯಾದರೆ ಕಾರ್ಯಕರ್ತರು ಹಾಗೂ ಮುಖಂಡರಲ್ಲಿನ
ಅನುಮಾನ, ಗೊಂದಲ ಪರಿಹಾರವಾಗುತ್ತದೆ. ಮತ್ತೆ ಮೈತ್ರಿಯಾಗಲೂಬಹುದು ಎಂಬ ಧೈರ್ಯ ಬರುತ್ತದೆ. ನಾವು ರವಾನಿಸುವ ಸಂದೇಶ ವರ್ಕ್ ಔಟ್ ಆಗುತ್ತದೆ ಎಂಬ ಕಾರ್ಯತಂತ್ರದಡಿಯೇ ಇಬ್ಬರೂ
ಭೇಟಿಯಾಗಿದ್ದಾರೆ ಎನ್ನಲಾಗಿದೆ.
Advertisement
● ಎಸ್. ಲಕ್ಷ್ಮಿನಾರಾಯಣ