Advertisement

ಗಣ್ಯಾತೀಗಣ್ಯರಿಂದ ಮಾಸ್ಟರ್‌ ಹಿರಣ್ಣಯ್ಯ ಅಂತಿಮ ದರ್ಶನ

10:10 AM May 03, 2019 | Vishnu Das |

ಬೆಂಗಳೂರು: ಇಂದು ಗುರುವಾರ ಬೆಳಗ್ಗೆ ಇಹಲೋಕ ತ್ಯಜಿಸಿದ ರಂಗಭೂಮಿ ದಿಗ್ಗಜ ಮಾಸ್ಟರ್‌ ಹಿರಣ್ಣಯ್ಯ ಅವರ ಅಂತಿಮ ದರ್ಶನವನ್ನು ಗಣ್ಯಾತೀಗಣ್ಯರು ಸೇರಿದಂತೆ ಸಾವಿರಾರು ಮಂದಿ ಪಡೆಯುತ್ತಿದ್ದಾರೆ.

Advertisement

ಬನಶಂಕರಿಯ 2 ನೇ ಹಂತದಲ್ಲಿರುವ ಹಿರಣ್ಣಯ್ಯ ಅವರ ನಿವಾಸ ಶಾಂತಿಸಾಗರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ,ಸಚಿವ ಡಿ.ಕೆ.ಶಿವಕುಮಾರ್‌ , ಮಾಜಿ , ಡಿಸಿಎಂ ಆರ್‌.ಅಶೋಕ್‌ , ಮುಖ್ಯಮಂತ್ರಿ ಚಂದ್ರು , ನಟರಾದ ಶ್ರೀನಾಥ್‌ , ದೇವ್‌ರಾಜ್‌, ದರ್ಶನ್‌, ಪ್ರಜ್ವಲ್‌ ದೇವ್‌ರಾಜ್‌ ಸೇರಿದಂತೆ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆಯ ನೂರಾರು ಕಲಾವಿದರು ಆಗಮಿಸಿ ಹಿರಿಯ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದರು.

Advertisement

ಸಂಜೆ ಮೆರವಣಿಗೆ ಬಳಿಕ ಅಂತ್ಯಕ್ರಿಯೆ

ಇಂದು ಸಂಜೆ4.30 ರ ವೇಳೆಗೆ ಬನಶಂಕರಿಯ ಚಿತಾಗಾರದಲ್ಲಿ ಬ್ರಾಹ್ಮಣ ವಿಧಿ ವಿಧಾನದಂತೆ ಹಿರಣ್ಣಯ್ಯ ಅವರ ಅಂತ್ಯ ಸಂಸ್ಕಾರ ನಡೆಯಲಿದೆ. ಇದಕ್ಕೂ ಮುನ್ನ ನಿವಾಸದಿಂದ ವಿಶೇಷ ಅಲಂಕೃತ ವಾಹನದಲ್ಲಿ ಮಾಸ್ಟರ್‌ ಹಿರಣ್ಣಯ್ಯ ಅವರ ಅಂತಿಮ ಯಾತ್ರೆಯ ಮೆರವಣಿಗೆ ನಡೆಯಿದೆ. ಈಗಾಗಲೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.

ಲಿವರ್‌ ಸಮಸ್ಯೆಯಿಂದ ಬಳಲುತ್ತಿದ್ದ 86 ರ ಹರೆಯದ ಮಾಸ್ಟರ್‌ ಹಿರಣ್ಣಯ್ಯ ಅವರು ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಫೋಟೋ: ಫ‌ಕ್ರುದ್ದೀನ್‌

Advertisement

Udayavani is now on Telegram. Click here to join our channel and stay updated with the latest news.

Next