Advertisement

Sandalwood: ಕನಸು ಆಕಾಶದೆತ್ತರ…

05:12 PM Jan 09, 2024 | Team Udayavani |

ಸಾಮಾನ್ಯವಾಗಿ ಸ್ಟಾರ್‌ಗಳ ಹುಟ್ಟುಹಬ್ಬಕ್ಕೆ ಹೊಸ ಹೊಸ ಸಿನಿಮಾಗಳು ಘೋಷಣೆಯಾಗುತ್ತವೆ. ಆದರೆ, ಇಲ್ಲೊಬ್ಬ ಬಾಲನಟನ ಹುಟ್ಟುಹಬ್ಬ ದಿನ ಮೂರ್‍ನಾಲ್ಕು ಹೊಸ ಸಿನಿಮಾಗಳು ಅನೌನ್ಸ್‌ ಆಗುವ ಮೂಲಕ ಭವಿಷ್ಯದ ಭರವಸೆ ಮೂಡಿದೆ.

Advertisement

ಮಾಸ್ಟರ್‌ ಆಕಾಶ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಹೊಸ ಹೊಸ ಸಿನಿಮಾಗಳು ಅನೌನ್ಸ್‌ ಆಗಿವೆ. ಅಂದಹಾಗೆ, ಆಕಾಶ್‌ ಈಗಾಗಲೇ ವಿನೋದ್‌ ಪ್ರಭಾಕರ್‌ ನಟನೆಯ “ಫೈಟರ್‌’ ಚಿತ್ರದಲ್ಲಿ ವಿನೋದ್‌ ಅವರ ಚಿಕ್ಕವಯಸ್ಸಿನ ಪಾತ್ರವನ್ನು ನಿಭಾಹಿಸಿದ್ದಾರೆ. ಶ್ರೀ ಮಧ್ಯಮಾಂಬಿಕಾ ಎಂಟರ್‌ ಪ್ರೈಸಸ್‌ ಹಾಗೂ ಎಂ.ಪಿ. ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಮುನೀಂದ್ರ ಕೆ ಪುರ ಆಕಾಶ್‌ಗಾಗಿ ಸಿನಿಮಾ ನಿರ್ಮಿಸಲಿದ್ದಾರೆ.

ಸಿ.ಎಸ್‌ ಪ್ರೊಡಕ್ಷನ್ಸ್‌ನಡಿ ನಿರ್ಮಾಪಕ ನವೀನ್‌ ಕೂಡಾ ಆಕಾಶ್‌ಗೆ ಸಿನಿಮಾ ಮಾಡಿದರೆ, ಜೈ ಭಜರಂಗಿ ಕಂಬೈನ್ಸ್‌ ಬ್ಯಾನರ್‌ನಲ್ಲಿ ಜಗದೀಶ್‌ ಎನ್‌ ಚೇರ್ಮನ್‌ ಸಹ ಆಕಾಶ್‌ ಗಾಗಿ ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ. ಇದರ ಜೊತೆಗೆ ಸೋಮಶೇಖರ್‌ ಕಟ್ಟಿಗೇನಹಳ್ಳಿ ಕೂಡಾ ಸಂಕ್ರಾಂತಿ ಬಳಿಕ ಹೊಸ ಸಿನಿಮಾವನ್ನು ನಿರ್ಮಿಸಲಿದ್ದಾರೆ. ಇನ್ನು, ಆಕಾಶ್‌ ಸಿನಿಮಾಕ್ಕೆ ಬೇಕಾದ ಪೂರ್ವತಯಾರಿ ಕೂಡಾ ಮಾಡಿಕೊಳ್ಳುತ್ತಿದ್ದಾರೆ. ಡ್ಯಾನ್ಸ್‌,ಫೈಟ್‌, ಆ್ಯಕ್ಟಿಂಗ್‌… ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next