Advertisement

ಮರ ಬಿದ್ದರೂ ಜಗ್ಗದ ಟೆಸ್ಲಾ ಕಾರು, ಇದು ವಿಶ್ವದ ಅತಿ ಸುರಕ್ಷಿತ ಕಾರು : ಎಲಾನ್‌ ಮಸ್ಕ್

10:37 AM Jun 12, 2022 | Team Udayavani |

ಬೀಜಿಂಗ್‌: ಟೆಸ್ಲಾ ಸಂಸ್ಥೆಯ ಸಂಸ್ಥಾಪಕ ಎಲಾನ್‌ ಮಸ್ಕ್ ಯಾವಾಗಲೂ ಒಂದಿಲ್ಲೊಂದು ಹೇಳಿಕೆ ಕೊಟ್ಟು ಸುದ್ದಿಯಲ್ಲಿರುವಂತವರು. ಇದೀಗ ಅವರ ಕಂಪನಿಯ ಕಾರಿನಿಂದಾಗಿ ಅವರು ಸುದ್ದಿಯಲ್ಲಿದ್ದಾರೆ. ಟೆಸ್ಲಾ ಕಾರು ಯಾರಿಗೂ ಜಗ್ಗದು ಎಂದು ನೆಟ್ಟಿಗರು ಮಾತನಾಡಿಕೊಳ್ಳಲಾರಂಭಿಸಿದ್ದಾರೆ.

Advertisement

ಚೀನಾದಲ್ಲಿ ಇತ್ತೀಚೆಗೆ ರಸ್ತೆ ಬದಿಯಲ್ಲಿದ್ದ ಟೆಸ್ಲಾ ಮಾಡೆಲ್‌ 3 ಕಾರಿನ ಮೇಲೆ ದೊಡ್ಡದೊಂದು ಮರ ಬಿದ್ದಿದೆ. ಕಾರಿನ ರೂಫಿಂಗ್‌ ಗ್ಲಾಸ್‌ನದ್ದಾಗಿದ್ದು, ಬೃಹದಾಕಾರಾದ ಮರ ಬಿದ್ದರೂ ಆ ರೂಫ್ ಪುಡಿಯಾಗಿಲ್ಲ ಅಥವಾ ನೆಗ್ಗಿಲ್ಲ. ಕಾರಿನ ಚಾಲಕನಿಗೂ ಯಾವುದೇ ಗಾಯವಾಗದೆ ಆತ ಸುರಕ್ಷಿತವಾಗಿ ಕಾರಿನಿಂದ ಹೊರಗೆ ಬಂದಿದ್ದಾನೆ.

ಈ ವಿಡಿಯೋವನ್ನು ಟ್ವಿಟರ್‌ನಲ್ಲಿ “ಜೇ ಇನ್‌ ಸಂಘೈ’ ಹೆಸರಿನ ಹ್ಯಾಂಡಲ್‌ಬಾರ್‌ನಡಿ ಹಂಚಿಕೊಂಡಿದ್ದು, ಅದಕ್ಕೆ ಪ್ರತಿಕ್ರಿಯಿಸಿರುವ ಮಸ್ಕ್, “ವಿಶ್ವದಲ್ಲಿ ಅತಿ ಹೆಚ್ಚು ಸುರಕ್ಷಿತ ಕಾರು ಮಾಡೆಲ್‌ 3′ ಎಂದಿರುವ ವರದಿಯೊಂದನ್ನು ಹಂಚಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next