Advertisement
ಕೇಂದ್ರ ಪರಿಸರ ಸಚಿವ ಹರ್ಷವರ್ಧನ್ ಅವರೇ ಲೋಕಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ. ಪ್ರಶ್ನೆ ಯೊಂದಕ್ಕೆ ಲಿಖೀತ ಉತ್ತರ ನೀಡಿದ ಹರ್ಷವರ್ಧನ್, “ಮಳೆ, ಪ್ರವಾಹದಿಂದಾಗಿ 7 ಘೇಂಡಾಮೃಗಗಳು, 84 ಜಿಂಕೆಗಳು ಸಾವಿಗೀಡಾಗಿವೆ. ಅಸ್ಸಾಂನ 29 ಜಿಲ್ಲೆಗಳಲ್ಲಿನ 25 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಡಳಿತವು ಇಲ್ಲಿ 1,098 ಪರಿಹಾರ ಶಿಬಿರಗಳನ್ನು ನಿರ್ಮಿಸಿದ್ದು, ಜನರಿಗೆ ತೊಂದರೆ ಯಾಗ ದಂತೆ ಕ್ರಮ ಕೈಗೊಳ್ಳುತ್ತಿದೆ,’ ಎಂದು ಹೇಳಿದ್ದಾರೆ.
ಪ್ರವಾಹಪೀಡಿತ ಅಸ್ಸಾಂಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭೇಟಿ ನೀಡಲಿದ್ದಾರೆ. ರಾಜ್ಯದಲ್ಲಿ ಪ್ರತಿ ವರ್ಷ ಪ್ರವಾಹದಿಂದಾಗುವ ಸಮಸ್ಯೆಗಳ ಕುರಿತು ಚರ್ಚಿಸಿ, ಅದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಚಿವರ ಸಮಿತಿ ಮತ್ತು ರಾಜ್ಯದ ಅಧಿಕಾರಿಗಳ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಅಸ್ಸಾಂನ ಹಣಕಾಸು ಸಚಿವ ಹಿಮಾಂತ ಬಿಸ್ವಾ ಸರ್ಮಾ ಹೇಳಿದ್ದಾರೆ.
Related Articles
ಪಶ್ಚಿಮ ಬಂಗಾಳದ ದಾಮೋದರ ನದಿಯಲ್ಲಿ ಕೊಚ್ಚಿ ಹೋಗಿದ್ದ 62 ವರ್ಷದ ತಪಥಿ ಚೌಧರಿ ಎಂಬ ಮಹಿಳೆಯನ್ನು ಭಾನುವಾರ ರಕ್ಷಿಸಲಾಗಿದೆ. 13 ಗಂಟೆಗಳ ಕಾಲ ತಪಥಿ ನೀರಲ್ಲಿದ್ದರೂ, ಸಾವಿನ ಜತೆ ಹೋರಾಡಿ ಗೆದ್ದಿದ್ದಾರೆ. ಶನಿವಾರ ಸಂಜೆ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಅವರನ್ನು 13 ಗಂಟೆಗಳ ಬಳಿಕ ಅಂದರೆ ಭಾನುವಾರ ಬೆಳಗ್ಗೆ 80 ಕಿ.ಮೀ. ದೂರದಲ್ಲಿ ಮೀನುಗಾರರು ರಕ್ಷಿಸಿದ್ದಾರೆ.
Advertisement
ದೇಶದ ಪ್ರವಾಹ ಪೀಡಿತ ಪ್ರದೇಶ ಗಳು, ಸಂಕಷ್ಟದಲ್ಲಿರುವ ಜನರ ಬಗ್ಗೆ ಸರಕಾರಕ್ಕೆ ಸೂಕ್ಷ್ಮ ಸಂವೇದನೆಯೇ ಇಲ್ಲ. ಸಚಿವರೆಲ್ಲ ಬೇರೆ ಪಕ್ಷಗಳ ಶಾಸಕ ರನ್ನು ಪಕ್ಷಾಂತರ ಮಾಡಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ಅವರಿಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಬೇಕೆಂಬ ಕನಿಷ್ಠ ಕಾಳಜಿಯೂ ಇಲ್ಲ.ಗುಲಾಂ ನಬಿ ಆಜಾದ್, ಕಾಂಗ್ರೆಸ್ ನಾಯಕ