Advertisement

Python;ಮೊಟ್ಟೆಗಳಿಗೆ ಕೈ ಹಾಕಿದಾಗ ದಾಳಿ ಮಾಡಿದ ದೈತ್ಯ ಹೆಬ್ಬಾವು: Viral Video

06:40 PM Jun 24, 2023 | Team Udayavani |

ಸರೀಸೃಪಗಳು, ವಿಶೇಷವಾಗಿ ಹಾವುಗಳ ಬಗ್ಗೆ ತುಂಬಾ ಹೆದರುವವರು ಅಂತೆಯೇ ಆಕರ್ಷಿತರಾದವರು ಕೆಲವರು ಇರುತ್ತಾರೆ. ಜೇ ಬ್ರೂವರ್ ಎನ್ನುವವರು ಹಂಚಿಕೊಂಡಿರುವ ಮೃಗಾಲಯದೊಳಗಿನ ವಿಡಿಯೋವೊಂದು ವೈರಲ್ ಆಗಿದ್ದು, ಬೃಹತ್ ಮಾಮಾ ಹೆಬ್ಬಾವು ಮತ್ತು ಅದರ ಮೊಟ್ಟೆಗಳ ಒಂದು ನೋಟವನ್ನು ಹಂಚಿಕೊಂಡಿದ್ದಾರೆ.

Advertisement

ಕ್ಲಿಪ್‌ನಲ್ಲಿ, ಬ್ರೂವರ್ ಅವರು ಮೊಟ್ಟೆಗಳನ್ನು ಸುರಕ್ಷಿತವಾಗಿಡಲು ಪ್ರಯತ್ನಿಸುತ್ತಾರೆ ಆದರೆ ಕೋಪಗೊಂಡ ಕಾವು ಕೊಡುತ್ತಿದ್ದ ತಾಯಿ ಹೆಬ್ಬಾವು ಅನೇಕ ಬಾರಿ ದಾಳಿ ನಡೆಸಲು ಮುಂದಾಗುತ್ತದೆ. ಒಂದು ಬಾರಿ ಹಾವು ಬ್ರೂವರ್ ರನ್ನು ಹಿಡಿಯುತ್ತದೆ!.

“ಈ ಬೃಹತ್ ಗಾತ್ರದ ಸುಂದರವಾದ ಹೆಬ್ಬಾವು ಮೊಟ್ಟೆಗಳನ್ನು ಇಟ್ಟಿತು! ಮೊಟ್ಟೆಗಳನ್ನು ಉಳಿಸುವಾಗ ಹೆಬ್ಬಾವುಗಳು ಹೊಡೆಯುತ್ತವೆ, ಆದರೆ ಇದು ಲೆಕ್ಕಾಚಾರದ ಅಪಾಯವಾಗಿದೆ. ಮೊಟ್ಟೆಗಳು ಬದುಕುಳಿಯಬೇಕಾಗಿದೆ” ಎಂದು ವಿಡಿಯೋ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next