Advertisement
ಹೈ.ಕ ಜನಪರ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ನೇತೃತ್ವದಲ್ಲಿ ನೂರಾರು ಕಾಯಕರ್ತರು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ನಂತರ ರೈಲು ನಿಲ್ದಾಣದ ಎದುರು ಧರಣಿ ಹಮ್ಮಿಕೊಂಡು ಕಲಬುರಗಿ ವಿಭಾಗೀಯ ಕಚೇರಿ ಆರಂಭಕ್ಕೆ ತಕ್ಷಣವೇ ಕ್ರಮಕೈಗೊಳ್ಳಬೇಕೆಂದು ಪ್ರಧಾನಿ, ರೈಲ್ವೆ ಸಚಿವಾಲಯಕ್ಕೆ ಮನವಿ ಪತ್ರ ಸಲ್ಲಿಸಿದರು.
Related Articles
Advertisement
ಆದರೂ, ಈ ಭಾಗದ ಜನತೆಗೆ ರೈಲ್ವೆ ಸೌಕರ್ಯಗಳನ್ನು ಒದಗಿಸದೆ ವಂಚಿಸಲಾಗುತ್ತಿದೆ ಎಂದು ಕಿಡಿಕಾರಿದರು. ಬೀದರ್-ಕಲಬುರಗಿ (112 ಕಿ.ಮೀ) ನಡುವೆ ಹೊಸ ರೈಲು ಮಾರ್ಗ ಪೂರ್ಣಗೊಂಡಿದೆ. ರಾಯಚೂರು-ಗಿಣಿಗೇರ (125 ಕಿ.ಮೀ) ಮತ್ತು ಗದಗ-ವಾಡಿ (252 ಕಿ.ಮೀ) ರೈಲುಮಾರ್ಗಗಳ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ವಿಜಯಪುರ-ಶಹಾಬಾದ (140 ಕಿ.ಮೀ), ಕಲಬುರಗಿ-ಲಾತೂರ್ (150 ಕಿ.ಮೀ) ಹೊಸ ರೈಲು ಮಾರ್ಗದ ಪ್ರಸ್ತಾಪವಿದೆ. ಇವೆಲ್ಲವೂ ಪೂರ್ಣಗೊಳ್ಳಲು ರೈಲ್ವೆ ವಿಭಾಗ ಆರಂಭ ಅವಶ್ಯವಾಗಿದೆ ಎಂದರು. ವಾಡಿ-ವಿಕಾರಾಬಾದ್, ವಾಡಿ-ರಾಯಚೂರು ಮಾರ್ಗಗಳ ವಿದ್ಯುತ್ತೀಕರಣ, ವಾಡಿ-ಹೊಟಗಿ ಹಾಗೂ ಹೊಟಗಿ ಬಾಗಲಕೋಟೆ ಮಾರ್ಗದಲ್ಲಿ ಡಬ್ಲಿಂಗ್ ಮಾರ್ಗ ಸ್ಥಾಪನೆ ಸೇರಿದಂತೆ ಹಲವು ರೈಲ್ವೆ ಕಾಮಗಾರಿಗಳು ಕಲಬುರಗಿ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆ ಪ್ರಸ್ತಾವನೆಯಲ್ಲಿ ಇವೆ. ಕಲಬುರಗಿ-ಬೆಂಗಳೂರು ಪ್ರತಿದಿನ ಎಕ್ಸ್‌ಪ್ರೆಸ್ ರೈಲು, ಬೀದರ್-ಕಲಬುರಗಿ-ಬಳ್ಳಾರಿ ಮಾರ್ಗದಲ್ಲಿ ಇಂಟರ್ ಸಿಟಿ ರೈಲು, ಕಲಬುರಗಿ-ಮುಂಬೈ ಎಕ್ಸ್‌ಪ್ರೆಸ್ ರೈಲು ಹಾಗೂ ಬೀದರ್-ಬೆಂಗಳೂರು (ಕಲಬುರಗಿ-ವಾಡಿ ವಾಯಾ) ಅಂತೋದಯ ಎಕ್ಸ್‌ಪ್ರೆಸ್ ರೈಲುಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿದರು. ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿಯನ್ನು ಮುಂದಿನ ಜನವರಿ 1ರೊಳಗೆ ಆರಂಭಿಸಬೇಕು. ಇಲ್ಲವಾದಲ್ಲಿ ಹೈ.ಕ ಭಾಗವನ್ನು ನಿರ್ಲಕ್ಷ್ಯಿಸಲಾಗುತ್ತಿದೆ ಎಂದು ಜ.26ರ ಗಣರಾಜ್ಯೋತ್ಸವ ಆಚರಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಪ್ರತಿಭಟನೆಯಲ್ಲಿ ಆಕಾಶ ರಾಠೊಡ, ಮನೀಷ್ ಜಾಜು, ರಾಹುಲ್ ಹೊನ್ನಳ್ಳಿ, ಬಸವರಾಜ ಅನ್ವರ, ಸುರೇಶ ಪೂಜಾರಿ, ಸುನೀಲ ಕುಲಕರ್ಣಿ, ಶಿವಲಿಂಗಪ್ಪ ಬಂಡಕ, ಬಸವರಾಜ್ ಚಿಡಗುಂಪಿ, ಅಸ್ಲಂ ಚೌಂಗೆ, ಮೊಹ್ಮದ್ ಮಿರಾಜೋದ್ದೀನ್, ಶಾಂತಪ್ಪ ಕಾರಭಾಸಗಿ, ಬಾಬಾ ಫಕ್ರೋದ್ದೀನ್, ಸಂತೋಷ ಬಿ, ವೀರೇಶ ಪುರಾಣಿಕ, ಜ್ಞಾನಮಿತ್ರ, ಮಾರುತಿ ಪಾಟೀಲ ಮುಂತಾದವರು ಭಾಗವಹಿಸಿದ್ದರು. ಕಲಬುರಗಿಯಲ್ಲಿ ವಿಭಾಗೀಯ ಕಚೇರಿ ಆರಂಭಿಸದೇ ಕೇಂದ್ರ ಸರ್ಕಾರ ಹೈಕ ಭಾಗದ ಜನತೆಯನ್ನು ವಂಚಿಸುತ್ತಿದೆ. ರೈಲ್ವೆ ವಿಭಾಗ ಮಂಜೂರಾಗಿ ನಾಲ್ಕು ವರ್ಷ ಕಳೆದರೂ ಕಚೇರಿ ಸ್ಥಾಪಿಸಲು ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ. ಹೈ.ಕ ಭಾಗದಿಂದ ಕೋಟ್ಯಂತರ ರೂ. ಆದಾಯ ಮಧ್ಯ ಮತ್ತು ದಕ್ಷಿಣ ಮಧ್ಯ ವಲಯಕ್ಕೆ ಸಂದಾಯವಾಗುತ್ತಿದೆ. ಕಲಬುರಗಿ ವಿಭಾಗೀಯ ಕೇಂದ್ರ ಸ್ಥಾಪನೆಯಾದಲ್ಲಿ ಆದಾಯ ಸ್ಥಗಿತವಾಗುತ್ತದೆ ಎಂದು ಅಲ್ಲಿನ ಅಧಿಕಾರಿಗಳು ಕುತಂತ್ರ ನಡೆಸಿದ್ದಾರೆ. ಕೇಂದ್ರ ಸರ್ಕಾರ ಜನವರಿ ತಿಂಗಳೊಳಗೆ ಕಲಬುರಗಿ ವಿಭಾಗೀಯ ಕಚೇರಿ ಶುರು ಮಾಡಬೇಕು. ಇಲ್ಲವಾದರೆ ಗಣರಾಜ್ಯೋತ್ಸವ ಬಹಿಷ್ಕಾರ ಮಾಡಲಾಗುವುದು.
ಲಕ್ಷ್ಮಣ ದಸ್ತಿ, ಅಧ್ಯಕ್ಷ ಹೈ.ಕ ಜನಪರ ಹೋರಾಟ ಸಮಿತಿ