ಮಂಡ್ಯ: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ವ್ಯಾಪಾರ ಒಪ್ಪಂದ (ಆರ್‌ಸಿಇಪಿ) ಮಾಡಿಕೊಳ್ಳಲು ಹೊರಟಿರುವ ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿ ಭಟನೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಎರಡು ತಾಸಿಗೂ ಹೆಚ್ಚು ಕಾಲ ಸಂಚಾರ ಸ್ತಬ್ಧಗೊಂಡಿತ್ತು.
ನಗರದ ಮೈಷುಗರ್ ವೃತ್ತ, ಎಸ್.ಡಿ. ಜಯರಾಂ ವೃತ್ತದಲ್ಲಿ ಪೊಲೀಸರು ವಾಹನಗಳನ್ನು ಬೇರೆ ರಸ್ತೆಗಳಿಗೆ ಮಾರ್ಗ ಬದಲಿಸಿ ಸಂಚರಿಸುವಂತೆ ಸೂಚಿಸುತ್ತಿದ್ದರು. ಆದರೆ, ಬೆಂಗಳೂರು ಕಡೆಯಿಂದ ಬರುತ್ತಿದ್ದ ವಾಹನಗಳಿಗೆ ಹೆದ್ದಾರಿಗೆ ಸಂಪರ್ಕಕ್ಕೆ ಸೂಕ್ತ ಮಾರ್ಗದ ದೊರೆಯದ ಕಾರಣ ನಗರದ ಎಲ್ಲಾ ರಸ್ತೆ ಗಳಲ್ಲೂ ಸಂಚರಿಸಿದ್ದರಿಂದ ತೀವ್ರ ಅಡಚಣೆ ಉಂಟಾಯಿತು.
ಪೊಲೀಸರ ಬೇಜವಾಬ್ದಾರಿ : ಕಳೆದ ಎರಡು ದಿನಗಳ ಹಿಂದೆಯೇ ಮನ್‌ಮುಲ್ ಅಧ್ಯ ಕ್ಷರು, ನಿರ್ದೇಶ ಕರು ಸುದ್ಧಿ ಗೋಷ್ಠಿ ನಡೆಸಿ ಬೃಹತ್ ಪ್ರತಿಭಟನ ನಡೆಸುವುದಾಗಿ ತಿಳಿಸಿದ್ದರಾದರೂ, ಈ ಸಂಖ್ಯೆಯಲ್ಲಿ ಜನರು ಪ್ರತಿಭಟನೆಯಲ್ಲಿ ಭಾಗವಹಿಸುವರೆಂಬ ನಿರೀಕ್ಷೆ ಪೊಲೀಸರಿಗೇ ಇರಲಿಲ್ಲ. ಪ್ರತಿಭಟನೆ ವಿಷಯದಲ್ಲಿ ಪೊಲೀಸರು ವಹಿಸಿದ ನಿರ್ಲಕ್ಷ್ಯ ದಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.
ಬೆಂಗಳೂರು ಕಡೆಯಿಂದ ಬರುವ ವಾಹನಗಳನ್ನು ಒಂದು ಮಾರ್ಗವಾಗಿ, ಮೈಸೂರು ಕಡೆಯಿಂದ ಬರುವ ವಾಹನ ಗಳನ್ನು ಮತ್ತೂಂದು ಮಾರ್ಗವಾಗಿ ಚಲಿಸುವಂತೆ ಜವಾಬ್ದಾರಿ ಯುತವಾಗಿ ಕಾರ್ಯನಿರ್ವಹಿಸಿದ್ದರೆ ವಾಹನ ಸಂಚಾರದಲ್ಲಿ ಅಸ್ತ ವ್ಯ ಸ್ತ ವಾಗುತ್ತಿರಲಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ನಿತ್ಯ ಸಂಚಾರ ನಿಯಮ ಉಲಂಘಿಸುವವರಿಗೆ ದಂಡ ವಿಧಿಸುವಲ್ಲಿ ಆಸಕ್ತಿ ತೋರುವ ಪೊಲೀ ಸರು, ಇಂತಹ ಪ್ರತಿ ಭಟನೆ ವೇಳೆ ಮುನ್ನೆಚ್ಚರಿಕೆ ಕ್ರಮ ವಹಿಸುವಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದಾಗಿ ಬೆಂಗಳೂರು-ಮೈಸೂರು ಕಡೆಗೆ ಪ್ರಯಾಣಿಸುವವರು ತೊಂದರೆ ಅನುಭವಿಸುವಂತಾಯಿತು. ಇದಕ್ಕೆ ಪೊಲೀ ಸರ ಬೇಜವಾಬ್ದಾರಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು