Advertisement

Bangladesh: ಶೇಖ್‌ ಹಸೀನಾ ರಾಜೀನಾಮೆ ಬಳಿಕ 500ಕ್ಕೂ ಅಧಿಕ ಕೈದಿಗಳು ಜೈಲಿನಿಂದ ಪರಾರಿ!

12:43 PM Aug 06, 2024 | Team Udayavani |

ಢಾಕಾ: ತೀವ್ರ ಹಿಂಸಾಚಾರದ ನಡುವೆ ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ರಾಜೀನಾಮೆ ನೀಡಿದ ನಂತರ ಶೇರ್ಪುರ್‌ ಜೈಲಿನಿಂದ ಭಾರೀ ಪ್ರಮಾಣದಲ್ಲಿ ಕೈದಿಗಳು ಪರಾರಿಯಾಗಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಸೋಮವಾರ (ಆಗಸ್ಟ್‌ 05) ಮಧ್ಯಾಹ್ನ ಈ ಘಟನೆ ನಡೆದಿದ್ದು, ಕನಿಷ್ಠ 518 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ. ಜೀ ನ್ಯೂಸ್‌ ವರದಿ ಪ್ರಕಾರ, ಹಲವರು ಶಸ್ತ್ರಸ್ತ್ರಾ ಸಹಿತ ಎಸ್ಕೇಪ್‌ ಆಗಿರುವುದಾಗಿ ವಿವರಿಸಿದೆ.

ಭಾರತ-ಬಾಂಗ್ಲಾದೇಶ ಗಡಿಯಿಂದ ಸುಮಾರು 100 ಕಿಲೋ ಮೀಟರ್‌ ದೂರದಲ್ಲಿರುವ ಶೇರ್ಪುರ್‌ ಸೆಂಟ್ರಲ್‌ ಜೈಲಿನಿಂದ ಕೈದಿಗಳು ಪರಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಭಾರತ ಗಡಿ ಭಾಗದಲ್ಲಿ ಬಿಗು ಭದ್ರತೆಯನ್ನು ಕೈಗೊಂಡಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಗಡಿಯಲ್ಲಿ ಗಡಿ ಭದ್ರತಾ ಪಡೆ(BSF)ಯನ್ನು ಹೆಚ್ಚಿಸಲಾಗಿದೆ. ಪರಾರಿಯಾದ ಕೈದಿಗಳಲ್ಲಿ 20 ಮಂದಿ ಭಯೋತ್ಪಾದಕ ಸಂಘಟನೆಗೆ ಸೇರಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Sagara: ಭಟ್ಕಳ ದಿಂದ ಬೆಂಗಳೂರಿಗೆ ಹೊರಟಿದ್ದ ಸಾರಿಗೆ ಬಸ್ ಬೆಂಕಿಗಾಹುತಿ… ತಪ್ಪಿದ ದುರಂತ

Advertisement

Udayavani is now on Telegram. Click here to join our channel and stay updated with the latest news.

Next