Advertisement

ಮುಂಬಯಿ ಬಾಂದ್ರಾ ರೈಲ್ವೇ ಸ್ಟೇಶನ್‌ ಆವರಿಸಿದ ಭಾರೀ ಬೆಂಕಿ

07:10 PM Oct 26, 2017 | Team Udayavani |

ಮುಂಬಯಿ : ಇಂದು ಗುರುವಾರ ಸಂಜೆ ಜನ ದಟ್ಟನೆಯ ವೇಳೆಯಲ್ಲಿ ಬಾಂದ್ರಾ ರೈಲು ನಿಲ್ದಾಣದ ಕಾಲು ಸೇತುವೆಯನ್ನು ಭಾರೀ ಬೆಂಕಿ ಆವರಿಸಿಕೊಂಡಿತು. 

Advertisement

ಸಮೀಪದ ಬೆಹರಾಮ್‌ಪಾಡದ ಕೊಳೆಗೇರಿಯಲ್ಲಿ ಕಾಣಿಸಿಕೊಂಡ ಬೆಂಕಿ ಅತ್ಯಂತ ಕ್ಷಿಪ್ರಗತಿಯಲ್ಲಿ ನಗರದ ತೀವ್ರ ಚಟುವಟಿಕೆಯ ಬಾಂದ್ರಾ ರೈಲು ನಿಲ್ದಾಣಕ್ಕೂ ವ್ಯಾಪಿಸಿಕೊಂಡಿತು. 

ಇಲ್ಲಿನ ಕೊಳೆಗೇರಿಯೊಂದರಲ್ಲಿನ ಅನಧಿಕೃತ ನಿಮಾರ್ಣವನ್ನು ನೆಲಸಮ ಮಾಡುವ ಕಾರ್ಯಾಚರಣೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮವಾಗಿ ಉಂಟಾದ ಬೃಹತ್‌ ಬೆಂಕಿ ಅನಾಹುತದಲ್ಲಿ ಓರ್ವ ಅಗ್ನಿ ಶಾಮಕ ಸಿಬಂದಿ ಸೇರಿಂತೆ ಇಬ್ಬರು ಗಾಯಗೊಂಡರು. 

ವರದಿಗಳ ಪ್ರಕಾರ ಸುಮಾರು 16 ಅಗ್ನಿ ಶಾಮಕಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಅನೇಕ ಕಿಲೋ ಮೀಟರ್‌ ದೂರದಿಂದಲೂ ಆಗಸದಲ್ಲಿ ಬಹು ಎತ್ತರಕ್ಕೆ ದಟ್ಟನೆಯ ಕಪ್ಪು ಹೊಗೆ ಎದ್ದಿರುವುದು ಕಂಡು ಬರುತ್ತಿದೆ.

ಈ ತನಕ ಯಾವುದೇ ಜೀವ ಹಾನಿ ಆಗಿರುವ ವರದಿಗಳಿಲ್ಲ. 

Advertisement

ಮುನಿಸಿಪಲ್‌ ಕಾರ್ಪೊರೇಶನ್‌ನವರು ಕೊಳೆಗೇರಿಯಲ್ಲಿನ ಅನಧಿಕೃತ ನಿರ್ಮಾಣಗಳನ್ನು ನೆಲಸಮ ಮಾಡುವಾಗ ಸಂಭವಿಸಿದ ಗ್ಯಾಸ್‌ ಸಿಲಿಂಡರ್‌ ಸ್ಫೋಟದಿಂದ ಬಾಂದ್ರಾ ಲೋಕಲ್‌ ಸ್ಟೇಶನ್‌ನ ಪೂರ್ವ ಭಾಗದಲ್ಲಿ ಬೆಂಕಿ ಹಬ್ಬತೊಡಗಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ನಡುವೆ ಈ ಲೈನಿಲ್ಲಿ ಹಲವು ರೈಲುಗಳ ಸಂಚಾರವನ್ನು ನಿಲ್ಲಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next