Advertisement

ದೆಹಲಿ: ಮೂರು ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ಉಸಿರುಗಟ್ಟಿ ನಾಲ್ವರು ಸಾವು

10:54 AM Oct 26, 2021 | Team Udayavani |

ನವದೆಹಲಿ: ರಾಷ್ಟ್ರರಾಜಧಾನಿ ನವದೆಹಲಿಯ ಸೀಮಾಪುರಿ ಪ್ರದೇಶದಲ್ಲಿನ ಮೂರು ಅಂತಸ್ತಿನ ಹಳೇಯ ಕಟ್ಟಡವೊಂದರಲ್ಲಿ ಸಂಭವಿಸಿದ ಭಾರೀ ಅಗ್ನಿ ಅನಾಹುತದಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿರುವ ಘಟನೆ ಮಂಗಳವಾರ(ಅಕ್ಟೋಬರ್ 26) ನಸುಕಿನ ವೇಳೆ ಸಂಭವಿಸಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಬಿರುಕು ಬಿಟ್ಟ ರೈಲ್ವೆ ಹಳಿ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರೀ ದುರಂತ!

ಇಂದು ಮುಂಜಾನೆ 4ಗಂಟೆಗೆ ಈ ಅಗ್ನಿ ಅವಘಡ ಸಂಭವಿಸಿದೆ. ಮಾಹಿತಿ ತಿಳಿದ ಅಗ್ನಿಶಾಮಕದಳ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಇದೀಗ ಬೆಂಕಿಯ ಜ್ವಾಲೆ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿರುವುದಾಗಿ ಅಗ್ನಿಶಾಮಕದಳದ ಸಿಬಂದಿಗಳು ತಿಳಿಸಿದ್ದಾರೆ.

ಮೂರು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯ ಕೋಣೆಯೊಂದರಲ್ಲಿ ನಾಲ್ವರ ಶವ ಸಿಕ್ಕಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾಲ್ವರು ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಮೃತರನ್ನು 58 ವರ್ಷದ ಹೊರಿಲಾಲ್, ಪತ್ನಿ (55ವರ್ಷ) ರೀನಾ, 24ವರ್ಷದ ಪುತ್ರ ಆಶು ಹಾಗೂ 18 ವರ್ಷದ ಮಗಳು ರೋಹಿಣಿ ಎಂದು ಗುರುತಿಸಲಾಗಿದೆ. ಹೊರಿಲಾಲ್ ದಂಪತಿಯ ಮತ್ತೊಬ್ಬ ಪುತ್ರ ಅಕ್ಷಯ ಅಗ್ನಿಅವಘಡದಲ್ಲಿ ಬದುಕುಳಿದಿದ್ದು, ಆತ ಎರಡನೇ ಅಂತಸ್ತಿನಲ್ಲಿ ನಿದ್ದೆ ಮಾಡಿರುವುದರಿಂದ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿ ವಿವರಿಸಿದೆ.

Advertisement

ಪ್ರಾಥಮಿಕ ತನಿಖೆಯ ವರದಿ ಪ್ರಕಾರ, ಸೊಳ್ಳೆ ಕಾಯಿಲ್ ಗೆ ಬೆಂಕಿ ಹೊತ್ತಿದ ಪರಿಣಾಮ ಅಗ್ನಿಅವಘಡ ಸಂಭವಿಸಲು ಕಾರಣ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next