Advertisement
ಶುಕ್ರವಾರ ರಾತ್ರಿ(ನ.3 ರಂದು) ನೇಪಾಳದ ಜಾಜರ್ಕೋಟ್ ಮತ್ತು ರುಕುಮ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.4 ರ ತೀವ್ರತೆ ದಾಖಲಾಗಿದೆ. ಭೂಕಂಪದ ಕೇಂದ್ರಬಿಂದು ಜಾಜರ್ಕೋಟ್ ನ ಲ್ಯಾಮಿಡಾಂಡಾ ಪ್ರದೇಶದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ. ಶುಕ್ರವಾರ ರಾತ್ರಿ 11:32 ಕ್ಕೆ 10 ಕಿಮೀ ಆಳದಲ್ಲಿ ಭೂಕಂಪನ ಆಗಿವೆ ಎಂದು ವರದಿ ತಿಳಿಸಿದೆ.
Related Articles
Advertisement
ಜಾಜರ್ಕೋಟ್ ಮತ್ತು ರುಕುಮ್ ಮಾತ್ರವಲ್ಲದೆ ಡೈಲೇಖ್, ಸಾಲ್ಯಾನ್ ಮತ್ತು ರೋಲ್ಪಾ ಜಿಲ್ಲೆಗಳು ಸೇರಿದಂತೆ ಇತರ ಜಿಲ್ಲೆಗಳಲ್ಲೂ ಅಪಾರ ಹಾನಿ ಹಾಗೂ ಅನೇಕರಿಗೆ ಗಾಯಗಳಾಗಿವೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಗಾಯಾಳುಗಳು ಕಠ್ಮಂಡುವಿನಿಂದ ಪಶ್ಚಿಮಕ್ಕೆ 500 ಕಿಲೋಮೀಟರ್ ದೂರದಲ್ಲಿರುವ ಜಾಜರ್ಕೋಟ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವೆರದಿದೆ ಎಂದು ವರದಿ ತಿಳಿಸಿದೆ.
ಹಿಮಾಲಯ ರಾಷ್ಟ್ರವಾದ ನೇಪಾಳದಲ್ಲಿ ಭೂಕಂಪಗಳು ಸಾಮಾನ್ಯವಾಗಿವೆ. ಅಕ್ಟೋಬರ್ 3 ರಂದು- 6.2 ರ ತೀವ್ರತೆಯ ಭೂಕಂಪಗಳು ಸಂಭವಿಸಿತ್ತು. ನವೆಂಬರ್ 2022 ರಲ್ಲಿ, ದೋಟಿ ಜಿಲ್ಲೆಯಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಆರು ಜನರು ಸಾವನ್ನಪ್ಪಿದರು. 2015 ರಲ್ಲಿ 7.8 ತೀವ್ರತೆಯ ಭೂಕಂಪದಿಂದ 12,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.