Advertisement
ಎಷ್ಟು ಹತ್ತಿರ ಬರುತ್ತಿದೆ?ಭೂಮಿಯ ಹತ್ತಿರ ಬರಲಿದೆ ಎಂದಾಕ್ಷಣ ನೂರಿನ್ನೂರು ಕಿ.ಮೀ ದೂರ ಎಂದುಕೊಳ್ಳಬೇಡಿ. 30 ಲಕ್ಷ ಮೈಲಿಗಳಷ್ಟು ದೂರದಲ್ಲೇ ಅದು ಹಾದು ಹೋಗಲಿದೆ. ಅಯ್ಯೋ ಲಕ್ಷ ಮೈಲಿಯಷ್ಟು ದೂರದವರೆಗೆ ಬಂದು ಟಾಟಾ ಬೈಬೈ ಹೇಳುವ ಕಲ್ಲೊಂದಕ್ಕೆ ಯಾಕಿಷ್ಟು ಆತಂಕ ಎಂದುಕೊಳ್ಳಬೇಡಿ. ಎಕೆಂದರೆ ಸುಮಾರು 40 ಲಕ್ಷ ಮೈಲಿಗಳ ಅಂತರದ ಒಳಗೆ ಹಾದು ಹೋಗುವ ಯಾವುದೇ ಆಕಾಶಕಾಯವನ್ನು ಬಾಹ್ಯಾಕಾಶ ಸಂಸ್ಥೆಗಳು “ಅಪಾಯಕಾರಿ’ ಎಂದು ಪರಿಗಣಿಸುತ್ತವೆ. ಈ ಕ್ಷುದ್ರಗ್ರಹ ಆಪಾಯಕಾರಿ ವಲಯದೊಳಗೆ ಬಂದರೂ, ಭೂಮಿಗೆ ಗಂಡಾಂತರ ತರುವ ಆಕಾಶಕಾಯಗಳ ಪಟ್ಟಿ ಉದ್ದವಿದೆ. ಆದರಲ್ಲಿ 2000ಕಿಗ7 ಇಲ್ಲ!
ಗಂಟೆಗೆ 23,100 ಕಿ.ಮೀ ವೇಗದಲ್ಲಿ ಇದು ಚಲಿಸುತ್ತಿದೆ. ಈ ಹಿಂದೆಯೂ 2000ಕಿಗ7 ಕ್ಷುದ್ರಗ್ರಹ ಭೂಮಿಯ ಸಮೀಪದಲ್ಲಿ ಹಾದು ಹೋಗಿತ್ತು. ಅದು ಸೆಪ್ಟೆಂಬರ್ 1, 2000 ನೇ ಇಸವಿಯಲ್ಲಿ. ಈ ಬಾರಿಯೂ ಸೆಪ್ಟೆಂಬರ್ 1ರಂದೇ ಭೂಮಿಯನ್ನು ಹಾದು ಹೋಗಲಿದೆ. ಅದರ ಮುಂದಿನ ಭೇಟಿ ಅಕ್ಟೋಬರ್ 19, 2038ನೇ ಇಸವಿಗೆ. ಕ್ಷುದ್ರಗ್ರಹ ಮತ್ತು ಉಲ್ಕೆಗಳು
ಕ್ಷುದ್ರಗ್ರಹ ಎಂದರೆ, ಗ್ರಹಗಳಂತೆಯೇ ಸೂರ್ಯನನ್ನು ಸುತ್ತು ಹಾಕುವ ಕಲ್ಲಿನ ತುಣುಕು. ಯಾವ ರೀತಿ ಸೌರಮಂಡಲದ ಪ್ರತಿಯೊಂದು ಗ್ರಹಗಳಿಗೆ ಅದರದ್ದೇ ಆದ ಪಧ ಇದೆಯೋ ಅದೇ ರೀತಿ ಕ್ಷುದ್ರಗ್ರಹಗಳಿಗೂ ಅದರದ್ದೇ ಆದ ಪಥ ಇರುತ್ತದೆ. ಕ್ಷುದ್ರಗ್ರಹಗಳು, ಸಾಮಾನ್ಯವಾಗಿ ಮಂಗಳ ಮತ್ತು ಗುರು ಗ್ರಹದ ಪಥದಲ್ಲಿ ಇವು ಕಂಡುಬರುತ್ತವೆ. ಎರಡು ಕ್ಷುದ್ರಗ್ರಹಗಳು ಒಂದಕ್ಕೊಂದು ಢಿಕ್ಕಿ ಹೊಡೆದಾಗ ಸಿಡಿಯುವ ಚೂರುಗಳೇ ಉಲ್ಕೆಗಳು. ಪ್ರತಿನಿತ್ಯ ಚಿಕ್ಕ ಗಾತ್ರದ ಉಲ್ಕೆಗಳು ಭೂಮಿಗೆ ಬೀಳುತ್ತಲೇ ಇರುತ್ತವೆ. ಆದರೆ, ಇವು ಭೂಮಿಯ ವಾತಾವರಣವನ್ನು ಪ್ರವೇಶಿಸುವ ಮುನ್ನವೇ ಉರಿದು ನಾಶವಾಗುತ್ತವೆ. ಕ್ಷುದ್ರಗ್ರಹಗಳ ಉಗಮ ಸೌರಮಂಡಲದ ಉಗಮದ ಸಮಯದಲ್ಲೇ ಆಗಿತ್ತು.
Related Articles
Advertisement