Advertisement

ಸಾಮೂಹಿಕ ವಿವಾಹ ಪುಣ್ಯದ ಕೆಲಸ: ಜಾರಕಿಹೊಳಿ

06:06 PM Jun 29, 2022 | Team Udayavani |

ದೇವದುರ್ಗ: ಹೊಸ ಜೀವನಕ್ಕೆ ಕಾಲಿಟ್ಟ ನವಜೋಡಿಗಳು ಮಕ್ಕಳಿಗೆ ಡಾ| ಬಿ.ಆರ್‌. ಅಂಬೇಡ್ಕರ್‌, ಗೌತಮ ಬುದ್ಧ, ಬಸವಣ್ಣನವರ ವಿಚಾರ ಅಳವಡಿಸಿಕೊಳ್ಳಲು ತಿಳಿಸಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

Advertisement

ಅರಕೇರಾ ಗ್ರಾಮದಲ್ಲಿ ದಿ.ಎ. ವೆಂಕಟೇಶ ನಾಯಕ ಜನ್ಮದಿನ ನಿಮಿತ್ತ ಎ. ವೆಂಕಟೇಶ ನಾಯಕ ಫೌಂಡೇಶನ್‌ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ದ್ವೇಷ, ವೈಮನಸ್ಸು ಬಾರದ ರೀತಿಯಲ್ಲಿ ಬದುಕು ಸಾಗಿಸಿ. ಸಾಮೂಹಿಕ ವಿವಾಹ ಮಾಡುವುದು ಪುಣ್ಯದ ಕೆಲಸ. ಎಷ್ಟೇ ಹಣವಿದ್ದರೂ ಸಮಾಜಮುಖೀ ಕೆಲಸ ಕಾರ್ಯ ಮಾಡಲು ಮನಸ್ಸು ಮಾಡುವುದಿಲ್ಲ. ಸಮಾಜಕ್ಕೆ ಮಠ-ಮಾನ್ಯಗಳ ಕೊಡುಗೆ ಅಪಾರ. ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹ ಮಾಡಬೇಕು. ಮದುವೆಯಿಂದ ಬಡ ಕುಟುಂಬಗಳಿಗೆ ಆಗುತ್ತಿರುವ ಸಾಲದ ಹೊರೆ ತಗ್ಗಿಸಲು ಸಾಮೂಹಿಕ ವಿವಾಹಗಳು ಅತ್ಯವಶ್ಯ ಎಂದರು.

ಬೃಹನ್ಮಠ ಜಾಲಹಳ್ಳಿ ಜಯಶಾಂತೇಶ್ವರ ಶಿವಾಚಾರ್ಯ ಮಾತನಾಡಿ, ದಿ.ಎ. ವೆಂಕಟೇಶ ನಾಯಕ 40 ವರ್ಷ ರಾಜಕಾರಣದಲ್ಲಿ ಕಪ್ಪುಚುಕ್ಕಿ ಇಲ್ಲದಂತೆ ಸೇವೆ ಮಾಡಿ, ಜನರ ಮನಸ್ಸು ಗೆದ್ದಿದ್ದಾರೆ. ಇದೀಗ ತಂದೆಯ ಮಾರ್ಗದಲ್ಲೇ ಮಕ್ಕಳು ರಾಜಕಾರಣ ಮಾಡುತ್ತಿದ್ದಾರೆ ಎಂದರು.

ವೀರತಪಸ್ವಿ ವೀರಭದ್ರ ಶಿವಾಚಾರ್ಯ ಬಿಚ್ಚಾಲಿ ಮಟಮಾರಿ ಗಬ್ಬೂರು ಆಶೀರ್ವಚನ ನೀಡಿದರು. ಮಾಜಿ ಸಂಸದ ಬಿ.ವಿ. ನಾಯಕ ಮಾತನಾಡಿ, ರಾಜಕೀಯ ವ್ಯವಸ್ಥೆ ಕಲುಷಿತಗೊಂಡಿದ್ದು ದ್ವೇಷ ರಾಜಕಾರಣ ಮಾಡಬಾರದು. ಅಧಿಕಾರ ಯಾರಿಗೂ ಶಾಶ್ವತಲ್ಲ ಎಂದರು. ತಂದೆ ಹಾಕಿಕೊಟ್ಟ ಮಾರ್ಗದಲ್ಲೇ ರಾಜಕಾರಣ ಮಾಡುತ್ತಿದ್ದೇವೆ. ಯಾರಿಗೂ ಕೆಟ್ಟದ್ದು, ಮಾಡುವುದಿರಲಿ ಅಂತಹ ಆಲೋಚನೆಗಳನ್ನೇ ಮಾಡುವುದಿಲ್ಲ ಎಂದರು.

Advertisement

ವಿಧಾನ ಪರಿಷತ್‌ ಮಾಜಿ ಸದಸ್ಯ ಎನ್‌.ಎಸ್‌. ಬೋಸರಾಜ್‌, ಎ. ರಾಜಶೇಖರ ನಾಯಕ, ಶ್ರೀದೇವಿ ಎ. ರಾಜಶೇಖರ ನಾಯಕ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಪಿಲ ಸಿದ್ದರಾಮೇಶ್ವರ ಶಿವಾಚಾರ್ಯ, ಡಾ| ಪಂಚಾಕ್ಷರ ಶಿವಾಚಾರ್ಯ ಬೃಹನ್ಮಠ ನೀಲಗಲ್‌, ಶಾಂತಮಲ್ಲ ಶಿವಾಚಾರ್ಯ 108 ಸಾವಿರ ದೇವರ ಸಂಸ್ಥಾನ ಕಿಲ್ಲೇ ಬೃಹನ್ಮಠ ರಾಯಚೂರು, ಅಡವಿಲಿಂಗ ಮಹಾರಾಜರು ವೀರಗೋಟ, ಗಂಗಪ್ಪಯ್ಯ ಪೂಜಾರಿ, ಚರಬಸವ ಸ್ವಾಮಿಗಳು ಯರಮರಸ್‌, ಅಭಿನವ ಸೋಮನಾಥ ಶಿವಾಚಾರ್ಯ ಬೃಹನ್ಮಠ ನವಲಕಲ್‌, ಸದಾಶಿವ ತಾತ ಮುಂಡರಗಿ, ಸೈಯದ್‌ ಜೈಹಿರುದ್ಧೀನ್‌ ಪಾಷಾ, ಗಿರಿಮಲ್ಲೇಶ್ವರ ತಾತನವರು ದೇವರಗುಡ್ಡ, ಶಿವಣ್ಣ ತಾತ ಮುಂಡರಗಿ, ಸಾಂಬಯಪ್ಪ ತಾತನವರು ಜಾಗಟಗಲ್‌, ಶಾಸಕ ಬಸನಗೌಡ ದದ್ದಲ್‌, ಡಿ.ಎಸ್‌. ಹೂಲಗೇರಿ, ಎಂಎಲ್ಸಿ ಶರಣಗೌಡ ಬಯ್ಯಪೂರ, ಮಾಜಿ ಶಾಸಕ ಹನುಮಂತಪ್ಪ ಆಲ್ಕೋಡ್‌, ಹಂಪಯ್ಯ ನಾಯಕ, ಮಾಜಿ ಎಂಎಲ್ಸಿ ಬಸವರಾಜ ಪಾಟೀಲ್‌ ಇಟಗಿ, ಪುರಸಭೆ ಅಧ್ಯಕ್ಷ ಶರಣಗೌಡ ಗೌರಂಪೇಟೆ, ವಿಎಸ್‌ಎಸ್‌ಎನ್‌ ಅಧ್ಯಕ್ಷ ನಾಗರಾಜ ಪಾಟೀಲ್‌, ಆದನಗೌಡ ಬುಂಕಲದೊಡ್ಡಿ, ಬೂತಪ್ಪ ಹೇರುಂಡಿ, ಮಹಾದೇವಪ್ಪಗೌಡ, ರಂಗಪ್ಪ ಗೋಸಲ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next