Advertisement
ರಾಜ್ಯದ ಆಯ್ದ 100 “ಎ’ ದರ್ಜೆ ದೇಗುಲಗಳಲ್ಲಿ ಸರಕಾರದ ವತಿಯಿಂದ ವರ್ಷಕ್ಕೆ ಒಮ್ಮೆ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಿದೆ. ಎಂಟು ಗ್ರಾಂ ಚಿನ್ನದ ಮಾಂಗಲ್ಯ, ವಧು ಮತ್ತು ವರನಿಗೆ ವಿವಾಹ ವಸ್ತ್ರ ವಿತರಿಸುವ ಜತೆಗೆ ವಿವಾಹ ನೋಂದಣಿಯನ್ನು ಮಾಡಿಸಿ ನೀಡುವ ಬಗ್ಗೆ ಯೋಚಿಸಿದೆ. ಜಿಲ್ಲಾ ಧಾರ್ಮಿಕ ಪರಿಷತ್ ಅಧ್ಯಕ್ಷರ ನೇತೃತ್ವದಲ್ಲಿ ಸಚಿವರು, ಸಂಸದರು, ಶಾಸಕರು, ಇತರ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳನ್ನು ಒಟ್ಟುಗೂಡಿಸಿಕೊಂಡು ವರ್ಷದಲ್ಲಿ ಬರೋಬ್ಬರಿ 1,000 ಜೋಡಿಗಳಿಗೆ ಕಂಕಣ ಭಾಗ್ಯ ಕಲ್ಪಿಸಲು ಚಿಂತಿಸಿದೆ.
Related Articles
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ ಯೋಜಿತ ರೀತಿಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಅದೇ ಮಾದರಿ ಯನ್ನಿಟ್ಟುಕೊಂಡು ಸಾಮೂಹಿಕ ವಿವಾಹ ಆಯೋಜಿಸಬೇಕು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸೂಚನೆ ನೀಡಿದ್ದಾರೆ.
Advertisement
ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡವರು, ಸಾಮಾನ್ಯರು ಆರ್ಥಿಕ ಹೊರೆಯಿಲ್ಲದೆ ಸರಳವಾಗಿ ಹಿಂದೂ ಸಂಪ್ರದಾಯದಂತೆ ವಿವಾಹ ವಾಗಲು ಅನುಕೂಲವಾಗು ವಂತೆ ಇಲಾಖೆಯಿಂದಲೇ ಸಾಮೂಹಿಕ ವಿವಾಹ ನಡೆಸಲು ನಿರ್ಧರಿಸಲಾಗಿದೆ. ಯಾವುದೇ ಜಾತಿ ಭೇದವಿಲ್ಲದೆ ಆಯ್ದ 100 “ಎ’ ದರ್ಜೆ ದೇಗುಲಗಳಲ್ಲಿ ವರ್ಷದಲ್ಲಿ 1,000 ಜೋಡಿಗಳ ವಿವಾಹ ನಡೆಸುವ ಗುರಿ ಹೊಂದಲಾಗಿದೆ.– ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ