Advertisement

ಯಜಮಾನ ಫ‌ಸ್ಟ್‌ಲುಕ್‌ನಲ್ಲಿ ಮಾಸ್‌ ದರ್ಶನ

11:37 AM Sep 24, 2018 | Team Udayavani |

“ಭೂಮಿ ತೂಕದ ಆನೆ ಬೆಳೆದ ತನ್ನಿಂದ ತಾನೆ ಕೂಗಿ ಹೇಳಿತು ಜಮಾನ ಅಭಿಮಾನಿಗಳ ಸುಲ್ತಾನ …’ ಇದನ್ನು ಓದಿದ ಕೂಡಲೇ ಈ ಸಂಭಾಷಣೆಯನ್ನು ಯಾವ ನಟನಿಗೆ ಹೇಳಿರಬಹುದು ಮತ್ತು ಯಾವ ನಟನ ಸಿನಿಮಾದ್ದಿರಬಹುದೆಂಬುದು ಅಭಿಮಾನಿಗಳಿಗೆ ಊಹಿಸಿಕೊಳ್ಳೋದು ಕಷ್ಟದ ವಿಷಯವೇನಲ್ಲ. “ಇದು ನಮ್‌ ಬಾಸ್‌ ಸಿನಿಮಾದ್ದು’ ಎಂದು ದರ್ಶನ್‌ ಅಭಿಮಾನಿಗಳು ಖಂಡಿತವಾಗಿಯೂ ಹೇಳುತ್ತಾರೆ.

Advertisement

ಹೌದು, ದರ್ಶನ್‌ ಅಭಿನಯದ “ಯಜನಮಾನ’ ಚಿತ್ರದ ಫ‌ಸ್ಟ್‌ಲುಕ್‌ ಭಾನುವಾರ ಬಿಡುಗಡೆಯಾಗಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ. “ಭೂಮಿ ತೂಕದ ಆನೆ ಬೆಳೆದ ತನ್ನಿಂದ ತಾನೆ ಕೂಗಿ ಹೇಳಿತು ಜಮಾನ ಅಭಿಮಾನಿಗಳ ಸುಲ್ತಾನ …’ ಎಂಬ ಸಂಭಾಷಣೆ ಕೂಡಾ ಮೋಶನ್‌ ಪೋಸ್ಟರ್‌ನಲ್ಲಿದ್ದು, ರಗಡ್‌ ಲುಕ್‌ನಲ್ಲಿ ದರ್ಶನ್‌ ಕಾಣಿಸಿಕೊಂಡಿದ್ದಾರೆ.

ಈ ಮೂಲಕ “ಯಜಮಾನ’ದಲ್ಲಿ ಮಾಸ್‌ ಪ್ರಿಯರಿಗೆ ಇಷ್ಟವಾಗುವ ಅಂಶಗಳು ಸ್ವಲ್ಪ ಹೆಚ್ಚೇ ಇರಲಿದೆ ಎಂಬ ಲೆಕ್ಕಾಚಾರ ಕೂಡಾ ಶುರುವಾಗಿದೆ. ಇನ್ನು, “ಯಜಮಾನ’ ಫ‌ಸ್ಟ್‌ಲುಕ್‌ ಸಖತ್‌ ವೈರಲ್‌ ಆಗಿದ್ದು, ಯುಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಸದ್ಯ “ಯಜಮಾನ’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಎರಡು ಹಾಡುಗಳು ಬಾಕಿ ಇವೆ.

ಯುರೋಪ್‌ನಲ್ಲಿ ಈ ಹಾಡುಗಳ ಚಿತ್ರೀಕರಣ ನಡೆಯಲಿದ್ದು, ಅಕ್ಟೋಬರ್‌ನಲ್ಲಿ ಚಿತ್ರತಂಡ ಯುರೋಪ್‌ಗೆ ಹಾರಲಿದೆ. ಈ ಚಿತ್ರವನ್ನು ಪಿಕುಮಾರ್‌ ನಿರ್ದೇಶಿಸಿದ್ದು, ಬಿ.ಸುರೇಶ್‌ ಹಾಗೂ ಶೈಲಜಾ ನಾಗ್‌ ನಿರ್ಮಾಪಕರು. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಸದ್ಯ ದರ್ಶನ್‌ ಅವರ “ಒಡೆಯ’ ಚಿತ್ರೀಕರಣ ನಡೆಯುತ್ತಿದ್ದು, ಎಂ.ಡಿ.ಶ್ರೀಧರ್‌ ಈ ಚಿತ್ರದ ನಿರ್ದೇಶಕರು.

Advertisement

Udayavani is now on Telegram. Click here to join our channel and stay updated with the latest news.

Next