Advertisement

ಸಾಧ್ವಿ ಮೇಲೆ ಸಾಮೂಹಿಕ ಅತ್ಯಾಚಾರ

09:39 AM Oct 29, 2019 | Team Udayavani |

ಶೇಖ್‌ಪುರ: ಸಾಧ್ವಿಯೊಬ್ಬರ ಮೇಲೆ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವಂಥ ಘಟನೆ ಬಿಹಾರದ ಶೇಖ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಸಾಧ್ವಿಯು ಉತ್ತರಪ್ರದೇಶದ ಬಸ್ತಿ ಜಿಲ್ಲೆಯ ತಮ್ಮ ಊರಿಗೆ ತೆರಳುತ್ತಿದ್ದಾಗ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಧ್ವಿಯು ಕಾಕೋಲಟ್‌ನ ಆಶ್ರಮವೊಂದರಲ್ಲಿ ವಾಸಿಸುತ್ತಿದ್ದು, ಭಾನುವಾರ ಅವರ ಊರಿನವರಾದ ಇಬ್ಬರು ಪುರುಷರು ಆಶ್ರಮಕ್ಕೆ ಬಂದು, ಸಾಧ್ವಿಯ ತಾಯಿಯು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಮಾಹಿತಿ ನೀಡಿದರು. ಕೂಡಲೇ ಸಾಧ್ವಿ ಊರಿಗೆ ಹೊರಟರು. ದಾರಿ ಮಧ್ಯೆ ಈ ಇಬ್ಬರ ಜೊತೆಗೆ ಮತ್ತಿಬ್ಬರು ಸೇರಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿದ್ದಾಗಿ ಸಾಧ್ವಿ ದೂರಿನಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next