Advertisement

ದಲಿತ ಸಂಘಟನೆಗಳ ಬೃಹತ್‌ ಪ್ರತಿಭಟನೆ

11:33 AM Nov 17, 2019 | Suhan S |

ಚಿಕ್ಕೋಡಿ: ಡಾ| ಬಾಬಾಸಾಹೇಬ ಅಂಬೇಡ್ಕರ ಸಂವಿಧಾನ ರಚಿಸಿಲ್ಲ ಎನ್ನುವ ಸಿಎಂಸಿಎ ಸಂಸ್ಥೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಚಿಕ್ಕೋಡಿ ತಾಲೂಕು ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಶನಿವಾರ ನಗರದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾ ಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

Advertisement

ಡಾ| ಅಂಬೇಡ್ಕರ ಅವರು ರಚಿಸಿದ ಭಾರತ ಸಂವಿಧಾನ ಕುರಿತು ಸಿಎಂಸಿಎ ಸಂಸ್ಥೆಯವರು ರಚಿಸಿದ ಕೈಪಿಡಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಿಂದ ಬಿಡುಗಡೆ ಮಾಡಿ ಸಂವಿಧಾನ ಬರೆದವರು ಅಂಬೇಡ್ಕರ ಅಲ್ಲ ಎಂದು ರಾಜ್ಯದ ಎಲ್ಲ ಶಾಲೆಗಳಿಗೆ ಸುತ್ತೋಲೆ ಹೊರಡಿಸಿ ತಪ್ಪು ಸಂದೇಶ ಬಿತ್ತಿದ್ದಾರೆ. ಇದು ಸಂವಿಧಾನ ಶಿಲ್ಪಿಗೆ ಅವಹೇಳನಕಾರಿ. ಈ ವಿವಾದ ತಾರಕಕ್ಕೆ ಏರಿದಾಗಲೇ ತಪ್ಪು ಒಪ್ಪಿಕೊಂಡು ಡಾ| ಅಂಬೇಡ್ಕರ ಸಂವಿಧಾನ ರಚಿಸಿಲ್ಲ ಎನ್ನುವ ಬದಲಾಗಿ ಅಂಬೇಡ್ಕರ ಒಬ್ಬರೇ ಸಂವಿಧಾನ ರಚಿಸಿಲ್ಲ ಅಂತ ಮತ್ತೂಂದು ಹೇಳಿಕೆ ನೀಡಿದ್ದು, ಅದು ಕೂಡಾ ಅವಹೇಳನಕಾರಿ ಎಂದು ದಲಿತ ಸಂಘಟನೆಗಳು ದೂರಿದರು.

ಕೈಪಿಡಿಯಲ್ಲಿಯೇ ಅಂಬೇಡ್ಕರ ಬಗ್ಗೆ ಇರುವ ಗೌರವಾರ್ಥ ಪದಗಳನ್ನು ಉಲ್ಲೇಖೀಸದೇ ಇರುವುದು ಖೇದಕರ ಸಂಗತಿ. ಹೀಗೆ ಅವಹೇಳನಕಾರಿ ಸುದ್ದಿ ಹರಡಿ ಅಂಬೇಡ್ಕರ ಅವರಿಗೆ ಅವಮಾನಿಸುತ್ತಿರುವ ಸಿಎಂಸಿಎ ಸಂಸ್ಥೆ ಮತ್ತು ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಆಯುಕ್ತ ಉಮಾಶಂಕರ ಇವರನ್ನು ವಜಾಗೊಳಿಸಿ ಸಿಎಂಸಿಎ ಸಂಸ್ಥೆಯನ್ನು ರದ್ದು ಪಡಿಸಬೇಕು ಹಾಗೂ ಎಲ್ಲ ಹೊಣೆಗಾರಿಕೆ ಹೊತ್ತು ಶಿಕ್ಷಣ ಸಚಿವರಾದ ಸುರೇಶಕುಮಾರ ತಕ್ಷಣ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಚಿಕ್ಕೋಡಿ ಸರ್ಕಲ್‌ ಬಂದ್‌ ಮಾಡಿ ಟಯರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರಿಂದ ಸುಮಾರುಒಂದು ಗಂಟೆ ಕಾಲ ವಾಹನ ದಟ್ಟಣೆ ಉಂಟಾಗಿ ಪೊಲೀಸರು ಸಂಚಾರ ವ್ಯವಸ್ಥೆ ಸರಿ ಮಾಡಲು ಹರ ಸಾಹಸ ಪಟ್ಟರು. ದಲಿತ ಮುಖಂಡರಾದ, ಮಹಾವೀರ ಮೋಹಿತೆ, ಶ್ಯಾಮ ರೇವಡೆ, ಬಸವರಾಜ ಢಾಕೆ, ರಾಮಾ ಮಾನೆ, ಅಶೋಕ ಭಂಡಾರಕರ, ಸುದರ್ಶನ್‌ ತಮ್ಮಣ್ಣವರ, ಸುಜಾತಾ ಕಾಂಬಳೆ, ರಾವಸಾಬ ಫಕೀರೆ, ತ್ಯಾಗರಾಜ ಕದಂ ಪಾಲ್ಗೊಂಡಿದ್ದರು

Advertisement

Udayavani is now on Telegram. Click here to join our channel and stay updated with the latest news.

Next