Advertisement

ಸಾಮೂಹಿಕ ವಿವಾಹ ಹೆಚ್ಚಾಗಿ ನಡೆಯಲಿ

01:21 PM Jan 01, 2018 | |

ಸಿಂದಗಿ: ಸಾಮೂಹಿಕ ವಿವಾಹಗಳು ಬಡ-ಮಧ್ಯಮ ವರ್ಗದ ಕುಟುಂಬದ ವಧು-ವರನಿಗೆ ಬದುಕಿನ ಭದ್ರತೆ ಜೊತೆಗೆ ಕಾನೂನು ಭದ್ರತೆ ನೀಡುತ್ತವೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು. ಶನಿವಾರ ಪಟ್ಟಣದ ಹಜರತ್‌ ಮೆಹಬೂಬ ಸುಭಾನಿ ಉರುಸ್‌ ನಿಮಿತ್ತ ಹಮ್ಮಿಕೊಂಡಿದ್ದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸಾಮೂಹಿಕ ವಿವಾಹದಲ್ಲಿ ನಡೆಯುವ ವಧು-ವರನ ಮದುವೆ ಕಾನೂನು ಪ್ರಕಾರ ನೋಂದಣಿಯಾಗುತ್ತದೆ. ಇದರಿಂದ ಎರಡು ಕುಟುಂಬದವರಿಗೆ ಕಾನೂನು ಭದ್ರತೆ ಸಿಗುತ್ತದೆ.

ಹಜರತ್‌ ಮೆಹಬೂಬ ಸುಭಾನಿ ಉರುಸ್‌ ನಿಮಿತ್ತ ಪುರಸಭೆ ಅಧ್ಯಕ್ಷ ಭಾಚಾಸಾಬ ತಾಂಬೊಳಿ ನಡೆಸುವ ಸಾಮೂಹಿಕ ವಿವಾಹಗಳು ಬಡ ಮತ್ತ ಮಧ್ಯಮ ವರ್ಗದವರಿಗೆ ಆಸರೆಯಾಗಿವೆ. ಉರುಸ್‌ ನಿಮಿತ್ತ ಹಮ್ಮಿಕೊಂಡ ಸಾಮೂಹಿಕ ವಿವಾಹದ ಕಾರ್ಯ ಶ್ಲಾಘನೀಯ ಎಂದರು.
 
ಜೆಡಿಎಸ್‌ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಎಂ.ಸಿ. ಮನಗೂಳಿ ಮಾತನಾಡಿ, ಪುರಸಭೆ ಆಧ್ಯಕ್ಷ ಭಾಷಾಸಾಬ ತಾಂಬೋಳಿ ಬಡ ಕುಟುಂಬದಿಂದ ಬಂದ ವ್ಯಕ್ತಿಯಾಗಿದ್ದು ಉರುಸ್‌ ನಿಮಿತ್ತ ಬಡ ಕುಟುಂಬಗಳ ಮದುವೆ ಮಾಡುತ್ತಿರುವ ಕಾರ್ಯ
ಇತರರಿಗೆ ಮಾದರಿಯಾಗಲಿ ಎಂದರು. 

ಅಧ್ಯಕ್ಷತೆ ವಹಿಸಿ ಮಾಜಿ ಶಾಸಕ ಶರಣಪ್ಪ ಸುಣಗಾರ, ಸಿಂದಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿಠ್ಠಲ ಕೊಳ್ಳೂರ, ಜೆಡಿಎಸ್‌ ಯುವ ಧುರೀಣ ಯಶವಂತ್ರಾಯಗೌಡ ರೂಗಿ, ಮಾಜಿ ಮಹಾಪೌರ ಸಜ್ಜಾದೇ ಪೀರಾ ಮುಶ್ರಫ್‌, ಯಾಕೂಬ ನಾಟೀಕಾರ ಮಾತನಾಡಿ, ಉರುಸ್‌ ನಿಮಿತ್ತ ಹಮ್ಮಿಕೊಂಡ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಸಾಮೂಹಿಕ ವಿವಾಹಗಳು ಹೆಚ್ಚು ಹೆಚ್ಚು ನಡೆಯಬೇಕು. ಈ ಕಾರ್ಯ ಇತರರಿಗೆ ಮಾದರಿಯಾಗಲಿ ಎಂದರು.

ಇದೇ ಸಂದರ್ಭದಲ್ಲಿ ಹಿಂದು 6 ಜೊಡಿ, ಮುಸ್ಲಿಂ 4 ಜೊಡಿಗಳು ನವ ದಾಂಪತ್ಯಕ್ಕೆ ಕಾಲಿಟ್ಟರು. ಪುರಸಭೆ ಅಧ್ಯಕ್ಷ ಭಾಷಾಸಾಬ ತಾಂಬೋಳಿ ಅವರು ತಾಳಿ ಕಾಲುಂಗರ, ಬಟ್ಟೆ, ಸುರಗಿ ಸಾಮಾನುಗಳಾದ ಬಾಂಡೆ ಸಾಮಾನುಗಳು, ತಿಜೋರಿ ಸೇರಿದಂತೆ ಮುಂತಾದ ಸಾಮಗ್ರಿಗಳನ್ನು ಉಡುಗರೆಯಾಗಿ ನೀಡಿದರು. ಇದೇ ಸಂದರ್ಭದಲ್ಲಿ ಸಾಮೂಹಿಕ ಉಚಿತ ವಿವಾಹದ ರೂವಾರಿ ಪುರಸಭೆ ಅಧ್ಯಕ್ಷ ಭಾಷಾಸಾಬ ತಾಂಬೋಳಿ ಅವರನ್ನು ಬಿಕೆಟಿ ಗ್ರೂಪ್‌ ಹಾಗೂ ಇತರರು
ಸನ್ಮಾನಿಸಿದರು.

Advertisement

ಸಾನ್ನಿಧ್ಯ ವಹಿಸಿದ್ದ ಸೈಯ್ಯದ್‌ ಮೆಹಬೂಬ ಹುಸೇನಿ ಮಗರಬಿ, ಜಿಪಂ ಮಾಜಿ ಸದಸ್ಯ ನಿಂಗನಗೌಡ ಪಾಟೀಲ, ಗಣ್ಯ ವ್ಯಾಪಾರಸ್ಥ ನೆಹರು ಪೋರವಾಲ, ಡಾ| ಅಭಯ ಕಾಗಿ, ಪುರಸಭೆ ಸದಸ್ಯರಾದ ಇಕ್ಬಾಲ್‌ ತಲಕಾರಿ, ಹನುಮಂತ ಸುಣಗಾರ, ಮುಖ್ಯಾಧಿಕಾರಿ ರಮೇಶ ಇಮ್ಮನದ, ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದು ಪಾಟೀಲ, ವಕೀಲ ರಾಜು ಚೌರ, ಮೆಹಬೂಬ ಸಿಂದಗಿಕರ, ಆಲಮೇಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಕೋಳಾರಿ, ಕೆಪಿಸಿಸಿ ಸದಸ್ಯ ಮುಸ್ತಾಕ್‌
ಮುಲ್ಲಾ, ಕಾಂಗ್ರೆಸ್‌ ಮುಖಂಡ ಎಂ.ಎ. ಖತೀಬ, ಎಂ.ಎಂ.ನಾಯ್ಕೋಡಿ, ನರಸಿಂಗ್‌ ಪ್ರಸಾದ ತಿವಾರಿ, ಗಪೂರ್‌ ಮಸಳಿ, ಜಿಲಾನಿ ನಾಟೀಕಾರ, ಸಂತೋಷ ಪಾಟೀಲ ಡಂಬಳ, ಮಹಾಂತಗೌಡ ಬಿರಾದಾರ, ರಾಜಣ್ಣ ನಾರಾಯಣಕರ, ಮೆಹಬೂಬ ಹಸರಗುಂಡಗಿ, ವಕೀಲ ಪುಟ್ಟು ಅಂಗಡಿ, ಉಪಾಧ್ಯಕ್ಷೆ ಮಹಾದೇವಿ ಬಿರಾದಾರ ಹಾಗೂ ಸದಸ್ಯರಾದ ಭೀಮು ಕಲಾಲ್‌, ಗುರುಪಾದ ಮನಗೂಳಿ, ಚಂದ್ರಶೇಖರ ಅಮಲಿಹಾಳ, ಮಂಜುನಾಥ ಬಿಜಾಪುರ, ಗೋಲ್ಲಾಳ ಬಂಕಲಗಿ, ಮುನ್ನಾ ಬೈರಾಮುಡಗಿ, ಶಂಕರ ಕುರಿ, ಶಂಕರ ಬಳುಂಡಗಿ, ಶಿವಾನಂದ ರೂಢಗಿ, ಯುವ ಮುಖಂಡ ತೌಸಿಫ್‌ ತಾಂಬೋಳಿ, ಮುತ್ತು ಶಂಬೇವಾಡಿ, ಬಿಕೆಟಿ ಬಾಯ್ಸ ಕಮಿಟಿ ಅಧ್ಯಕ್ಷ ಸದ್ದಾಮ ಆಳಂದ, ಉಪಾಧ್ಯಕ್ಷ ಬಶೀರ್‌ ಮರ್ತೂರ, ಖಜಾಂಚಿ ಮೋಶಿನ್‌ ನಾಟೀಕಾರ, ಕಾರ್ಯದರ್ಶಿ ಸೈಫನ್‌ ಮಳ್ಳಿ ಸೇರಿದಂತೆ ಜನಪ್ರತಿನಿಧಿಗಳು,
ರಾಜಕೀಯ ಮುಖಂಡರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next