Advertisement

ಪ್ರಾಪಂಚಿಕ ಜ್ಞಾನವುಳ್ಳ ಆಧುನಿಕ ಗೃಹಿಣಿಯನ್ನು ಗೌರವಿಸಿ: ಹೆಗ್ಗಡೆ

11:11 PM May 03, 2023 | Team Udayavani |

ಬೆಳ್ತಂಗಡಿ: ಹಿಂದಿನ ಕಾಲದಲ್ಲಿ ವಿವಾಹವೆಂಬುದು ಹೆತ್ತವರಿಗೆ ಸಂಕಷ್ಟ ತರುವಂಥದ್ದಾಗಿತ್ತು. ಸಾಲ ಮಾಡಿ ಜೀತದಾಳುವಾಗುವ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ತಡೆಯಲು ಶ್ರೀ ಕ್ಷೇತ್ರ ಧರ್ಮಸ್ಥಳ ಉಚಿತ ಸಾಮೂಹಿಕ ವಿವಾಹದ ನಿರ್ಧಾರ ಕೈಗೊಂಡಿತು. ಇಂದು ಸುಧಾರಣೆಯಾಗಿದೆ. ಗೃಹಿಣಿ ಪ್ರಾಂಪಚಿಕ ಜ್ಞಾನವುಳ್ಳ ಆಧುನಿಕ ಮಹಿಳೆಯಾಗಿದ್ದಾಳೆ. ಆಕೆಯನ್ನು ಗೌರವಿಸಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಬುಧವಾರ ಸಂಜೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾ ರಂಭದಲ್ಲಿ ಹಸೆಮಣೆ ಏರಿದ 201 ಜೋಡಿ ವಧೂವರರನ್ನು ಹರಸಿ ಮಾತನಾಡಿದರು.

ಪತಿ-ಪತ್ನಿ ಪರಸ್ಪರ ಹೊಂದಾಣಿಕೆ, ತಾಳ್ಮೆ ಮತ್ತು ಸಹನೆಯಿಂದ ಸುಖ-ಕಷ್ಟವನ್ನು ಸಮಾನವಾಗಿ ಸ್ವೀಕರಿಸಿ ಅನುಭವಿಸಿ, ಸಾರ್ಥಕ ದಾಂಪತ್ಯ ಜೀವನ ನಡೆಸಬೇಕು. ಆಗ ಮನೆಯೇ ಮಂದಿರವಾಗುತ್ತದೆ ಎಂದರು.

ಕನ್ನಡದ ಚಲನಚಿತ್ರ ನಟ ದರ್ಶನ್‌ ತೂಗುದೀಪ್‌ ಮಾತನಾಡಿ, ಧರ್ಮಸ್ಥಳವೆಂಬ ಪವಿತ್ರ ಪುಣ್ಯ ಕ್ಷೇತ್ರದಲ್ಲಿ ನನ್ನ ವಿವಾಹವೂ ನೆರ ವೇರಿತ್ತು.ಹೆಗ್ಗಡೆಯವರ ಆಶೀರ್ವಾದ ದಿಂದ ಇಂದು ಹಂತಕ್ಕೇರಿದ್ದೇನೆ ಎಂದರು. ನೂತನ ದಂಪತಿಗಳು ಪರಸ್ಪರ ಅರಿತುಕೊಂಡು, ಗೌರವಿಸಿ ಬಾಳಿ ಎಂದರು.

ಹೇಮಾವತಿ ವೀ. ಹೆಗ್ಗಡೆ, ಶ್ರದ್ಧಾ ಅಮಿತ್‌, ಡಿ. ಸುರೇಂದ್ರ ಕುಮಾರ್‌, ಅನಿತಾ ಸುರೇಂದ್ರ ಕುಮಾರ್‌, ಸುಪ್ರಿಯಾ ಹಷೇìಂದ್ರ ಕುಮಾರ್‌, ಶ್ರುತಾ ಜಿತೇಶ್‌ ಮತ್ತು ವಿಧಾನಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಉಪಸ್ಥಿತರಿದ್ದರು.

Advertisement

ಡಿ. ಹಷೇìಂದ್ರ ಕುಮಾರ್‌ ಸ್ವಾಗತಿಸಿದರು. ಶ್ರೀನಿವಾಸ ರಾವ್‌ ಧರ್ಮಸ್ಥಳ ವಂದಿಸಿದರು. ದಿವ್ಯ ಕುಮಾರಿ ನಿರ್ವಹಿಸಿದರು, ಎ. ವೀರು ಶೆಟ್ಟಿ ಕಾರ್ಯಕ್ರಮ ಸಂಯೋಜಿ ಸಿದರು.
ಆಯಾ ಜಾತಿಯ ಸಂಪ್ರದಾ ಯ ದಂತೆ ಮದುವೆಯ ಧಾರ್ಮಿಕ ವಿಧಿ- ವಿಧಾನಗಳನ್ನು ನಡೆಸಲಾಯಿತು.

ಪ್ರಮಾಣ ವಚನ
ನೂತನ ವಧು-ವರರು ಪ್ರೀತಿ- ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡದೆ, ಯಾವುದೇ ದುರಾ ಭ್ಯಾಸಕ್ಕೂ ತುತ್ತಾಗದೆ ಬದುಕುವುದಾಗಿ ತುಳು ಹಾಗೂ ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ವಿಶೇಷ ಜೋಡಿ
1972ರಿಂದ ಈವರೆಗೆ ನಡೆದ ವಿವಾಹದಲ್ಲಿ 12,777ನೇ ಜೋಡಿ ಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬಂದಿ ಬಂಟ್ವಾಳ ತಾಲೂಕು ನೋಡೆಲ್‌ ಅಧಿಕಾರಿಯಾಗಿರುವ ಪ್ರಸಾದ್‌ ಮತ್ತು ಕೋಲಾರದಲ್ಲಿ ಜ್ಞಾನ ವಿಕಾಸದ ಸಮನ್ವಯಧಿಕಾರಿ ಅಶ್ವಿ‌ನಿ ಎಸ್‌. ದಂಪತಿಯನ್ನು ವಿಶೇಷವಾಗಿ ಗೌರವಿಸಲಾಯಿತು.

52 ಅಂತರ್ಜಾತಿ ಜೋಡಿ
ಹೊರರಾಜ್ಯಗಳಾದ ಕೇರಳ 3, ಆಂಧ್ರಪ್ರದೇಶದ 1 ಜೋಡಿ ವಿವಾಹವಾದರು. ದ.ಕ. ಜಿಲ್ಲೆಯ ಬೆಳ್ತಂಗಡಿ 5, ಪುತ್ತೂರು-6, ಮಂಗಳೂರು-5, ಉಡುಪಿ ಜಿಲ್ಲೆಯಿಂದ ಅತೀ ಹೆಚ್ಚು 24, ಉತ್ತರ ಕನ್ನಡ 17, ಶಿವಮೊಗ್ಗ 16, ಚಿಕ್ಕಮಗಳೂರಿನ 14, ಮೈಸೂರು 13, ಹಾಸನ 11, ಬೆಂಗಳೂರು 10, ತುಮಕೂರು 10 ಅತೀ ಹೆಚ್ಚು ಜೋಡಿ ಸೇರಿ ರಾಜ್ಯದ 22 ಜಿಲ್ಲೆಗಳಿಂದ ಬಂದಿದ್ದು, ಇದರಲ್ಲೂ 52 ಜೋಡಿಗಳು ಅಂತರ್ಜಾತಿ ವಿವಾಹವಾಗಿದ್ದಾರೆ. ಪರಿಶಿಷ್ಟ ಜಾತಿಯ 52 ಜೋಡಿ ಸೇರಿ ಒಟ್ಟು 37 ಸಮುದಾಯದ 201 ಜೋಡಿಗಳ ವಿವಾಹಕ್ಕೆ ಕ್ಷೇತ್ರ ಸಾಕ್ಷಿಯಾಯಿತು.

ಅನುಕರಣೀಯ ವ್ಯಕ್ತಿತ್ವ
ಉಚಿತ ಸಾಮೂಹಿಕ ವಿವಾಹಕ್ಕೆ ನಟ ದರ್ಶನ್‌ ಅವರನ್ನು ಕರೆಸಲಾಗಿದೆ. ರಾಜ್ಯದ ಜನತೆ ಅವರ ಅಭಿಮಾನಿಗಳು, ನಾನೂ ಅಭಿಮಾನಿ. ತೆರೆಯಾಚೆಗೂ ಇರುವ ಅವರ ಶ್ರೇಷ್ಠ ವ್ಯಕ್ತಿತ್ವ ಹಾಗೂ ಬದ್ಧತೆ ಅನುಕರಣೀಯ.
– ಡಾ| ಡಿ. ವೀರೇಂದ್ರ ಹೆಗ್ಗಡೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ

201 ವಿಶೇಷ ಜೋಡಿಗಳು
ಕೂಲಿ ಕಾರ್ಮಿಕರು – 57
ಕೃಷಿಕರು – 13
ವ್ಯಾಪಾರ – 13
ಚಾಲಕ – 35
ಖಾಸಗಿ ಉದ್ಯೋಗ – 75
ಸರಕಾರಿ ಉದ್ಯೋಗಿಗಳು – 1
ಮರದ ಕೆಲಸ – 5
ಮೀನುಗಾರಿಕೆ – 2

Advertisement

Udayavani is now on Telegram. Click here to join our channel and stay updated with the latest news.

Next