Advertisement

ಇಟ್ಟಿಗೆ ಕಾರ್ಖಾನೆಗಳ ಮೇಲೆ ಸಾಮೂಹಿಕ ದಾಳಿ

07:29 AM Feb 20, 2019 | |

ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ವಿದ್ಯುತ್‌ ಮಾಪಕ ಬಳಸದೆ ಇಟ್ಟಿಗೆ ಕಾರ್ಖಾನೆ ಮಾಲೀಕರು ಇಟ್ಟಿಗೆ ತಯಾರಿಕಾ ಚಟುವಟಿಕೆಗಳಿಗೆ ಅಕ್ರಮ ವಿದ್ಯುತ್‌ ಬಳಕೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಇಟ್ಟಿಗೆ ಕಾರ್ಖಾನೆಗಳ ಮೇಲೆ ಬೆಸ್ಕಾಂ ಜಾಗೃತದಳ ಮಂಗಳವಾರ ಸಾಮೂಹಿಕ ದಾಳಿ ನಡೆಸಿತು.

Advertisement

ತಾಲೂಕಿನಲ್ಲಿ ನಡೆಯುತ್ತಿರುವ ಇಟ್ಟಿಗೆ ಕಾರ್ಖಾನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ 43 ಪ್ರಕರಣಗಳನ್ನು ಪತ್ತೆ ಮಾಡಿ ಆರೋಪಿಗಳ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು, ಒಟ್ಟು 12ಲಕ್ಷ ಬೆಲೆಯ ವಿದ್ಯುತ್ಛಕ್ತಿ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.

43 ವಿದ್ಯುತ್‌ ಕಳ್ಳತನ ಪ್ರಕರಣ: ಬೆಸ್ಕಾಂ ಜಾಗೃತದಳದ ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ರಾಮನಗರ ಪೊಲೀಸ್‌ ಠಾಣೆಗಳ ಎಲ್ಲಾ ಪೊಲೀಸ್‌ ಅಧಿಕಾರಿಗಳು ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಹಾಗೂ ಚಿಕ್ಕನಾಯಕನಹಳ್ಳಿ ಉಪವಿಭಾಗದ ಎಲ್ಲಾ ಅಧಿಕಾರಿಗಳು ಸೇರಿದಂತೆ ಒಟ್ಟು 94 ಜನ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಕಾರ್ಯಚರಣೆಯಲ್ಲಿ ಭಾಗವಹಿಸಿ ತಾಲೂಕಿನಲ್ಲಿ 43 ವಿದ್ಯುತ್‌ ಕಳ್ಳತನದ ಪ್ರಕರಣಗಳನ್ನು ದಾಖಲಿಸಿಕೊಂಡರು. 

ಈ ಕಾರ್ಯಚರಣೆಯಲ್ಲಿ ಬೆಸ್ಕಾಂ ಜಾಗೃತದಳದ ಮುಖ್ಯಸ್ಥರಾದ ಎಂ.ನಾರಾಯಣ್‌,ಪೊಲೀಸ್‌ ಅಧೀಕ್ಷಕರು, ನಾಗೇಂದ್ರ ವೃತ್ತದ ಅಧೀಕ್ಷಕ ಎಂಜಿನಿಯರ್‌, ರಾಮಚಂದ್ರಮೂರ್ತಿ ಕಾರ್ಯನಿರ್ವಾಹಕ ಎಂಜಿನಿಯರ್‌ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ವಿದ್ಯುತ್‌ ಕಳ್ಳತನ ತಪ್ಪಿಸಲು ದಾಳಿ: ಇಟ್ಟಿಗೆ ಕಾರ್ಖಾನೆಯ ಮಾಲೀಕರಿಗೆ ವಿದ್ಯುತ್‌ ಕಳ್ಳತನದ ಹರಿವು ಮೂಡಿಸುವ ಜೊತೆಗೆ ವಿದ್ಯುತ್‌ ಕಳ್ಳತನ ತಪ್ಪಿಸಲು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸಾಮೂಹಿಕ ದಾಳಿ ನಡೆಸಲಾಯಿತು ಎಂದು ಪೊಲೀಸ್‌ ಅಧೀಕ್ಷಕ ಎಂ.ನಾರಾಯಣ್‌ ತಿಳಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಸ್ಕಾಂ ಜಾಗೃತ ದಳ ನಿರಂತರವಾಗಿ ವಿದ್ಯುತ್‌ ಕಳ್ಳತನದ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಚಿಕ್ಕನಾಯಕನಹಳ್ಳಿಯಲ್ಲಿ ಇಟ್ಟಿಗೆ ಕಾರ್ಖಾನೆಗಳಿಂದ ಹೆಚ್ಚು ವಿದ್ಯುತ್‌ ಕಳ್ಳತನವಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ನಮ್ಮ ಅಧಿಕಾರಿಗಳ ಜೊತೆ ದಾಳಿ ನಡೆಸಿದ್ದು,

ತಾಲೂಕಿನಾದ್ಯಾಂತ 43 ಪ್ರಕರಣಗಳನ್ನು ಪತ್ತೆ ಮಾಡಿ ಆರೋಪಿಗಳ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಒಟ್ಟು 12 ಲಕ್ಷ ಬೆಲೆಯ ವಿದ್ಯುತ್ಛಕ್ತಿಯನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಕಾನೂನಾತ್ಮಕವಾಗಿ ಕಾರ್ಖಾನೆಯ ಮಾಲೀಕರು ವಿದ್ಯುತ್‌ ಬಳಿಸಿದರೆ ನಮ್ಮ ತಕರಾರು ಇಲ್ಲ ಎಂದರು. ಈ ಸಂದರ್ಭದಲ್ಲಿ ನಾಗೇಂದ್ರ ವೃತ್ತದ ಅಧೀಕ್ಷಕ ಎಂಜಿನಿಯರ್‌, ರಾಮಚಂದ್ರಮೂರ್ತಿ ಕಾರ್ಯನಿರ್ವಾಹಕ ಎಂಜಿನಿಯರ್‌ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next