Advertisement

ಮಸೂದ್‌ಗೆ ಜಾಗತಿಕ ನಿಷೇಧ ಪಕ್ಕಾ?

03:24 AM May 01, 2019 | Sriram |

ಹೊಸದಿಲ್ಲಿ: ಮುಂಬಯಿ ದಾಳಿಕೋರ ಮಸೂದ್‌ ಅಜರ್‌ಗೆ ಜಾಗತಿಕ ಭಯೋತ್ಪಾದಕ ಪಟ್ಟ ಕಟ್ಟುವ ವಿಶ್ವಸಂಸ್ಥೆ ಭದ್ರತಾ ಸಮಿತಿ (ಯುಎನ್‌ಎಸ್‌ಸಿ) ನಡೆಗೆ ಪದೇ ಪದೆ ಅಡ್ಡಗಾಲು ಹಾಕುತ್ತಿದ್ದ ಚೀನ ಕೊನೆಗೂ ಪ್ರಯತ್ನದಿಂದ ದೂರ ಉಳಿಯಲು ತೀರ್ಮಾನಿಸಿದ್ದು, ಬುಧವಾರ ಜರಗಲಿರುವ ಯುಎನ್‌ಎಸ್‌ಸಿ ಭದ್ರತಾ ಸಮಿತಿ ಸಮ್ಮೇಳನದಲ್ಲಿ ಮಸೂದ್‌ಗೆ ಜಾಗತಿಕ ಬಹಿಷ್ಕಾರ ಘೋಷಣೆ ಯಾಗುವುದು ಬಹುತೇಕ ಖಾತ್ರಿಯಾಗಿದೆ.

Advertisement

ಅದು ಸಾಧ್ಯವಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚತುರ ವಿದೇಶಾಂಗ ನೀತಿಗೆ ಮತ್ತೂಂದು ಹಿರಿಮೆ ಸಿಕ್ಕಂತಾಗಲಿದೆ. ಮೇ 1ರಂದು ನಡೆಯಲಿರುವ ಯುಎನ್‌ಎಸ್‌ಸಿ ಮಹಾ ಸಮ್ಮೇಳನದಲ್ಲಿ ಮಸೂದ್‌ ಕುರಿತ ಪ್ರಸ್ತಾವನೆಗೆ ಚೀನ ಈ ಬಾರಿ ಅಡ್ಡಿಪಡಿಸುವುದಿಲ್ಲ ಎಂದು ಈ ಬೆಳವಣಿಗೆಗಳನ್ನು ಹತ್ತಿರದಿಂದ ಬಲ್ಲ ಮೂಲಗಳು ತಿಳಿಸಿರುವುದಾಗಿ “ಹಿಂದೂಸ್ತಾನ್‌ ಟೈಮ್ಸ್‌’ ಹೇಳಿದೆ. ಹೆಸರನ್ನೇಳಲು ಇಚ್ಛಿಸದ ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು, “ಮೇ ಮೊದಲ ದಿನವೇ ಮಸೂದ್‌ಗೆ ಜಾಗತಿಕ ನಿಷೇಧ ಹೇರುವುದು ಬಹುತೇಕ ಪಕ್ಕಾ ಆಗಿದೆ. ಈ ಕುರಿತಾಗಿ ಎದ್ದಿರುವ ಜಾಗತಿಕ ಆಗ್ರಹಕ್ಕೆ ಚೀನ ಈ ಬಾರಿ ಮಣಿಯಲಿದೆ’ ಎಂದಿದ್ದಾರೆ.

ಹಿಂದೆ ಏನಾಗಿತ್ತು?: ಮಾ. 13ರಂದು ನಡೆದಿದ್ದ ಯುಎನ್‌ಎಸ್‌ಸಿ ಸಭೆಯಲ್ಲಿ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಯು.ಕೆ, ಫ್ರಾನ್ಸ್‌ ದೇಶಗಳು, ಮಸೂದ್‌ಗೆ ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಪ್ರಸ್ತಾವನೆಯನ್ನು ಮುಂದಿಟ್ಟಾಗ, ಚೀನ ಅದನ್ನು ವಿರೋಧಿಸಿತ್ತು. ಹಾಗಾಗಿ ಆ ಪ್ರಸ್ತಾವನೆ ಮತ್ತೆ ನನೆಗುದಿಗೆ ಬಿದ್ದಿತ್ತು. ಮಸೂದ್‌ ವಿಚಾರದಲ್ಲಿ ಚೀನ ಆ ರೀತಿ ಅಡ್ಡಗಾಲು ಹಾಕಿದ್ದು ಸತತ ನಾಲ್ಕನೇ ಬಾರಿ.

Advertisement

Udayavani is now on Telegram. Click here to join our channel and stay updated with the latest news.

Next