Advertisement

ಮಸೂದ್‌ ನಿಷೇಧಕ್ಕೆ ಪಾಕಿಸ್ಥಾನ ಷರತ್ತು!

01:55 AM Apr 30, 2019 | Team Udayavani |

ಹೊಸದಿಲ್ಲಿ: ಜೈಶ್‌-ಎ- ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ನನ್ನು ಅಂತಾರಾಷ್ಟ್ರೀಯ ಉಗ್ರ ಎಂದು ಘೋಷಿಸುವ ಪ್ರಸ್ತಾವನೆಗೆ ಪಾಕಿಸ್ಥಾನ ಷರತ್ತುಬದ್ಧ ಸಮ್ಮತಿ ವ್ಯಕ್ತಪಡಿಸಿದೆ.

Advertisement

ಪುಲ್ವಾಮಾ ದಾಳಿಗೂ ಮಸೂದ್‌ ಅಜರ್‌ಗೂ ಸಂಬಂಧವಿದೆ ಎಂಬುದು ಸಾಬೀತಾದರೆ ಮಾತ್ರ ನಿಷೇಧಕ್ಕೆ ಒಪ್ಪಿಗೆ ನೀಡುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಮೊಹಮ್ಮದ್‌ ಫೈಸಲ್‌ ಹೇಳಿದ್ದಾರೆ. ಪಾಕಿಸ್ಥಾನದ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪುಲ್ವಾಮಾ ದಾಳಿಯಲ್ಲಿ ಮಸೂದ್‌ ಅಜರ್‌ ಪಾತ್ರವಿದೆಯೇ ಎಂಬ ಬಗ್ಗೆ ಭಾರತ ದಾಖಲೆಗಳನ್ನು ನೀಡಬೇಕು. ಮಸೂದ್‌ ಪಾತ್ರವಿರುವುದು ಸಾಬೀತಾದರೆ ಮಾತ್ರ ನಿಷೇಧದ ಬಗ್ಗೆ ಚರ್ಚೆ ನಡೆಸಬಹುದು ಎಂದು ಹೇಳಿದ್ದಾರೆ. ಇನ್ನೊಂದೆಡೆ ಪುಲ್ವಾಮಾ ದಾಳಿ ಪ್ರತ್ಯೇಕ ವಿಚಾರವಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಜನರ ಧ್ವನಿಯನ್ನು ಭಾರತ ಹತ್ತಿಕ್ಕುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.

ಈ ಮಧ್ಯೆ ಈ ಬಾರಿ ಮಸೂದ್‌ ಅಜರ್‌ ವಿರುದ್ಧ ನಿಷೇಧ ಜಾರಿಗೊಳ್ಳುತ್ತದೆ ಎಂದು ಆಶಿಸಿದ್ದೇವೆ ಎಂದು ಇಂಗ್ಲೆಂಡ್‌ ಹೈಕಮಿಷನರ್‌ ಡೊಮಿನಿಕ್‌ ಆಸ್ಕಿ$Ìತ್‌ ಹೇಳಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ ಈ ಬಾರಿ ಚೀನ ತನ್ನ ನಿಲುವನ್ನು ಸಡಿಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next