ಇಸ್ಲಾಮಾಬಾದ್: ‘ಜೈಶ್ ಎ ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಸತ್ತಿಲ್ಲ; ಬದುಕಿದ್ದಾನೆ’ ಎಂದು ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಸಂಸ್ಕೃತಿ ಮತ್ತು ವಾರ್ತಾ ಸಚಿವ ಫಯಾಜ್ ಅಲ್ ಸಹನ್ ಖೋಹಾನ್ ಇಂದು ಸೋಮವಾರ ಹೇಳಿದ್ದಾರೆ.
‘ಮೌಲಾನಾ ಮಸೂದ್ ಅಜರ್ ಸತ್ತಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ; ಅವರು ಜೀವಂತ ಇದ್ದಾರೆ’ ಎಂದು ಖೋಹಾನ್ ಹೇಳಿರುವುದನ್ನು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನಿನ್ನೆ ಭಾನುವಾರ ಪಾಕಿಸ್ಥಾನದ ಜಿಯೋ ಉರ್ದು ನ್ಯೂಸ್, “ಭಾರತದ ಮೋಸ್ಟ್ ವಾಂಟೆಡ್ ಉಗ್ರ, ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ಬದುಕಿದ್ದಾನೆ’ ಎಂದು ಅಜರ್ ಕುಟುಂಬಕ್ಕೆ ನಿಕಟವಿರುವ ಅನಾಮಧೇಯ ಮೂಲವನ್ನು ಉಲ್ಲೇಖೀಸಿ ವರದಿ ಮಾಡಿತ್ತು.
‘ಮಸೂದ್ ಅಜರ್ ಸತ್ತಿರುವುದಾಗಿ ಮಾಧ್ಯಮ ವರದಿಗಳು ಹೇಳಿರುವುದು ಸುಳ್ಳು’ ಎಂದು ಜಿಯೋ ಉರ್ದು ನ್ಯೂಸ್ ವರದಿ ಮಾಡಿತ್ತು.
ಮಸೂದ್ ಅಜರ್ ಬದುಕಿದ್ದಾನೆಯೇ ಸತ್ತಿದ್ದಾನೆಯೇ ಎಂಬ ಬಗ್ಗೆ ಪಾಕ್ ಸರಕಾರ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.