Advertisement

ಉಗ್ರ ಮಸೂದ್‌ ನಿಷೇಧಕ್ಕೆ ನಿಲುವಳಿ

10:05 AM Mar 30, 2019 | mahesh |

ವಾಷಿಂಗ್ಟನ್‌: ಪುಲ್ವಾಮಾ ದಾಳಿಯ ಸಂಚುಕೋರ, ಜೈಶ್‌ ಎ ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿ ಸಲು ಪಣ ತೊಟ್ಟಿರುವ ಅಮೆರಿಕ, ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕರಡು ನಿಲುವಳಿ ಮಂಡಿಸಿದೆ. ಈತನನ್ನು ಉಗ್ರ ಪಟ್ಟಿಗೆ ಸೇರಿಸಲು ಚೀನ ಪದೇ ಪದೇ ಅಡ್ಡಿಯುಂಟು ಮಾಡು ತ್ತಿದ್ದು, ಈ ಬಾರಿ ಆ ದೇಶವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಲುವಾಗಿ ಈ ಪ್ರಯೋಗಕ್ಕೆ ಮುಂದಾಗಿದೆ. ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಚೀನ, ವಿಚಾರವನ್ನು ಅಮೆರಿಕ ಮತ್ತಷ್ಟು ಸಂಕೀರ್ಣ ಮಾಡು ತ್ತಿದೆ ಎಂದು ಆರೋಪಿಸಿದೆ.

Advertisement

ನಿಲುವಳಿಯನ್ನು ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾದ ಫ್ರಾನ್ಸ್‌ ಮತ್ತು ಇಂಗ್ಲೆಂಡ್‌ ಬೆಂಬಲಿಸಿವೆ. ಈ ಮೂರೂ ದೇಶಗಳು ನೇರವಾಗಿ ನಿಲುವಳಿ ಮಂಡಿಸಿದ್ದು ಇದೇ ಮೊದಲು. ಈ ಹಿಂದಿನ ನಿಲು ವಳಿ  ಗಳು ಪ್ರಸ್ತಾವನೆಯ ರೂಪ ದಲ್ಲಿ ಇರುತ್ತಿದ್ದವು. ಪ್ರಸ್ತಾವನೆ ಸಲ್ಲಿಸಿ ದಾಗ ಆಕ್ಷೇಪಕ್ಕೆ 10 ದಿನಗಳ ಕಾಲಾವಕಾಶ ಇರುತ್ತದೆ.

ಆದರೆ ಈ ಬಾರಿಯದ್ದು ನೇರ ನಿಲುವಳಿಯಾದ್ದರಿಂದ ಆಕ್ಷೇಪ ಸಲ್ಲಿಸಲು ನಿರೀಕ್ಷಣ ಅವಧಿ ಇಲ್ಲ. ಆದರೂ ಇದು ಸಾಮಾನ್ಯ ನಿಲುವಳಿಯಂತೆಯೇ ಭದ್ರತಾ ಮಂಡಳಿ ಸಭೆಯಲ್ಲಿ ಚರ್ಚೆಯಾಗುತ್ತದೆ, ಅನಂತರ ಮತಕ್ಕೆ ಹಾಕಲಾಗುತ್ತದೆ. ಆಗ ಚೀನ ವಿಟೋ ಬಳಸಿ ತಡೆ ಒಡ್ಡಬಹುದು. ಯಾವಾಗ ಈ ನಿಲುವಳಿ ಚರ್ಚೆಗೆ ಬರಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.

ಪುಲ್ವಾಮಾ: ಕಟು ಮಾತಿನ ಖಂಡನೆ
ಜೈಶ್‌ ಉಗ್ರರು ಪುಲ್ವಾಮಾದಲ್ಲಿ ನಡೆಸಿದ ಉಗ್ರ ಕೃತ್ಯವನ್ನು ಅಮೆರಿಕ ಈ ನಿಲುವಳಿಯಲ್ಲಿ ಕಟು ಶಬ್ದಗಳಿಂದ ಖಂಡಿಸಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಈತ ಅಲ್‌ ಖೈದಾ ಮತ್ತು ಐಸಿಸ್‌ ಉಗ್ರರ ಜತೆಗೂ ಸಹಭಾಗಿತ್ವ ಸಾಧಿಸಿದ್ದಾನೆ, ಅವುಗಳಿಗೆ ಹಣಕಾಸು ನೆರವು ಒದಗಿಸುತ್ತಾನೆ. ಭಾರತದ ಜೈಲಿನಿಂದ ಬಿಡುಗಡೆಯಾದ ಅನಂತರ ಜೈಶ್‌ ಸ್ಥಾಪಿಸಿದ್ದಾನೆ ಎಂಬ ವಿವರಗಳನ್ನು ನಿಲುವಳಿಯಲ್ಲಿ ವಿವರಿಸಲಾಗಿದೆ.

ಎಚ್ಚರದ ಹೆಜ್ಜೆಯಿಡಿ ಎಂದ ಚೀನ
ಅಮೆರಿಕವು ಬಲವಂತವಾಗಿ ನಿಲುವಳಿ ಮಂಡಿಸುವ ಮೂಲಕ ಈ ವಿಚಾರವನ್ನು ಇನ್ನಷ್ಟು ಸಂಕೀರ್ಣವಾಗಿಸಿದೆ. ಇದು ಚರ್ಚೆ ಮತ್ತು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ವಿಧಾನವಲ್ಲ ಎಂದು ಚೀನ ಆಕ್ಷೇಪಿಸಿದೆ. ಇದು ವಿಶ್ವಸಂಸ್ಥೆಯ ಮೂಲ ಉದ್ದೇಶಕ್ಕೆ ಧಕ್ಕೆ ಉಂಟು ಮಾಡಿದ್ದು, ಅಮೆರಿಕವು ಎಚ್ಚರದಿಂದ ಹೆಜ್ಜೆಯಿಡಬೇಕು ಮತ್ತು ಈ ನಿಲುವಳಿ ಕರಡನ್ನು ಬಲವಂತವಾಗಿ ಮಂಡಿಸಬಾರದು ಎಂದು ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್‌ ಶುವಾಂಗ್‌ ಹೇಳಿದ್ದಾರೆ. ಈ ಪ್ರತಿಕ್ರಿಯೆ ಈ ಬಾರಿಯೂ ನಿಲುವಳಿಗೆ ಚೀನ ಅಡ್ಡಿಪಡಿಸಲಿದೆ ಎಂಬುದನ್ನು ಖಚಿತಪಡಿಸಿದೆ.

Advertisement

ಪಾಕ್‌ ಕಾಶ್ಮೀರ ಷರತ್ತು
ಕಾಶ್ಮೀರ ವಿಚಾರದ ಚರ್ಚೆಗೆ ಭಾರತ ಒಪ್ಪಿದರೆ ಮತ್ತು ಗಡಿಯಲ್ಲಿ ಸೇನೆ ಜಮಾವಣೆ ಹಾಗೂ ಉದ್ವಿಗ್ನ ಸನ್ನಿವೇಶ ನಿರ್ಮಾಣವನ್ನು ಕೈಬಿಟ್ಟರೆ ಮಸೂದ್‌ ಅಜರ್‌ಗೆ ನಿಷೇಧ ಹೇರಲು ಸಮ್ಮತಿಸಿ ಎಂದು ಚೀನಕ್ಕೆ ಪಾಕ್‌ ಸೂಚಿಸಿದೆ ಎನ್ನಲಾಗಿದೆ. ಈ ಅಭಿಪ್ರಾಯವನ್ನು ಅಮೆರಿಕಕ್ಕೂ ರವಾನಿಸಲಾಗಿದ್ದರೂ ಟ್ರಂಪ್‌ ಆಡಳಿತ ಸಮ್ಮತಿಸಿಲ್ಲ ಎನ್ನಲಾಗಿದೆ.

ಪ್ರತಿಕ್ರಿಯಿಸಲು ಚೀನ ವಿಫ‌ಲ?
ಮಾರ್ಚ್‌ 13ರಂದು ಭದ್ರತಾ ಮಂಡಳಿ ಸಭೆಯಲ್ಲಿ ಮಸೂದ್‌ ಅಜರ್‌ ಬಗ್ಗೆ ನಡೆದ ಚರ್ಚೆ ವೇಳೆ ಚೀನ ಅಡ್ಡಿ ಪಡಿಸಿದ ಅನಂತರ, ವಿರೋಧಕ್ಕೆ ನಿರ್ದಿಷ್ಟ ಕಾರಣಗಳನ್ನು ಎರಡು ವಾರಗಳಲ್ಲಿ ನೀಡುವಂತೆ ಅಮೆರಿಕ ಸೂಚಿಸಿತ್ತು. ಗಡುವು ಈ ವಾರ ಮುಕ್ತಾಯವಾಗಲಿದೆ. ಹೀಗಾಗಿ ಅಮೆರಿಕ ಹೊಸ ಪ್ರಸ್ತಾವನೆ ಮಂಡಿಸಿದ್ದು, ಈ ಬಾರಿ ಮುಕ್ತ ಚರ್ಚೆ ನಡೆಯಲಿದೆ. ಆಗ ಚೀನ ವಿರೋಧ ವ್ಯಕ್ತಪಡಿಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next